ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಅಷ್ಟಮಿ ತಿಥಿ, ಆಶ್ಲೇಷಾ ನಕ್ಷತ್ರ, ಶುಕ್ಲ ಯೋಗ , ಬಾಲವ ಕರಣ, ನವೆಂಬರ್ 08 , ಭಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳಗಿನ ಜಾವ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

ಇಂದು ಕೂಡ ನವೆಂಬರ್ ಮಾಸದಲ್ಲಿ ಹುಟ್ಟಿದವರ ಬಗ್ಗೆ ವಿಶೇಷ ಮಾಹಿತಿಯನ್ನು ಗುರೂಜಿ ರವರು ಮುಂದುವರೆಸಿದ್ದಾರೆ. ಮನುಷ್ಯನ ಮುಖ್ಯವಾದ ದೌರ್ಬಲ್ಯವೆಂದರೆ ಬೇಕು ಬೇಕು ಎನ್ನುವುದು. ನಿಂದ ಎಲ್ಲರೂ ಬೇಕು ಬೇಕು ಎಂದು ತೆಗೆದುಕೊಳ್ಳುವುದೇ ವಿನಃ ನಿಮಗೆ ಕೊಡುವುದು ಬಹಳ ಕಡಿಮೆ. ನೀವು ಪ್ರೀತಿಯ ದೇವತೆಗಳು ಸಮುದ್ರದ ತೂಕ ನಿಮ್ಮದು. ಸಮುದ್ರದ ಆಳವನ್ನು ಎಂದು ಅಳೆಯಲು ಸಾಧ್ಯವಿಲ್ಲ. ಎಷ್ಟೇ ನೋವಿದ್ದರೂ ಅಮ್ಮನ್ನ ರೀತಿಯಲ್ಲಿ ಇರುತ್ತೀರ. ನೀವು ನಿಜವಾದ ಹೃದಯವಂತರು. ಒಟ್ಟು ಕಲಾವಿದರು ನೀವು, ಎಲ್ಲರನ್ನು ಪ್ರೀತಿಸುತ್ತೀರಾ ಎಲ್ಲರನ್ನು ಪ್ರೀತಿಸುವುದರಲ್ಲಿ ಲೆಕ್ಕಾಚಾರ ಮಾಡಲು ಆ ಪ್ರೀತಿಯನ್ನು ಕಳೆದುಕೊಳ್ಳುತ್ತೀರ.
ನೀವು ಎಲ್ಲರನ್ನೂ ಪ್ರೀತಿಸುತ್ತೀರ ಅವರ ಕಡೆ ಹೋಗಲ್ಲ ಇವರ ಕಡೆ ಹೋಗಲ್ಲ ಎಂಬ ತೊಳಲಾಟದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಾ. ನೋಡಲು ಸಹನಾ ಮೂರ್ತಿ ,ಪುಕ್ಕಲರ ಹಾಗೆ ಕಾಣುತ್ತೀರ. ತಟ್ಟಿ ಎಬ್ಬಿಸಿದರೆ ದುರ್ಗಾ ಆರೋಪ ನಲವತ್ತು ವಯಸ್ಸಿನಲ್ಲೂ ಇಪ್ಪತ್ತು ವರ್ಷದವರ ಹಾಗೆ ಕಾಣುತ್ತೀರ. ನಿಮ್ಮಲ್ಲಿ ಚಂದ್ರಗಂಟಾ ದೇವಿಯ ಶಕ್ತಿ ಜಾಸ್ತಿ. ಅದು ನಿಮಗೆ ತಿಳಿದಿರುವುದಿಲ್ಲ ಅದನ್ನು ಸರಿಯಾಗಿ ಬಳಸಿಕೊಂಡರೆ ನೀವು ಒಬ್ಬ ಜನನುರಾಗಿ. ಸಪ್ತ ವ್ಯಸನಗಳಲ್ಲಿ ಕಾಮ ವ್ಯಸನ ತುಂಬ ನೋವು ಕೊಡುತ್ತದೆ.

ಅವಮಾನ ಅಪವಾದವನ್ನ ತಂದುಕೊಟ್ಟುಬಿಡುತ್ತದೆ. ನಿಮ್ಮದು ಆ ರೀತಿಯ ನಡವಳಿಕೆ ಅಲ್ಲದೇ ಇದ್ದರೂ ಕೂಡ ನೀವು ಎಲ್ಲರ ಜತೆ ಚೆನ್ನಾಗಿ ಇರುವುದರಿಂದ ಎಲ್ಲರ ನೋವಿಗೆ ಸ್ಪಂದಿಸುವವುದರಿಂದ ಜನರು ನಿಮ್ಮನ್ನು ತಪ್ಪಾಗಿ ಜಡ್ಜ್ ಮಾಡಿಬಿಡುತ್ತಾರೆ. ಎಲ್ಲರ ನೋವಿಗೆ ಭುಜ ಕೊಟ್ಟು ನಿಂತುಕೊಳ್ಳುವುದರಿಂದ ತಪ್ಪಾದ ಅಪಕೀರ್ತಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಅವನ ಸರಿಯಿಲ್ಲ ಹೆಂಗಸರ ಸಹವಾಸ ಜಾಸ್ತಿ ಎಂದು ಕೊಳ್ಳುತ್ತಾರೆ. ನಿಮಗೆ ತುಂಟತನ ಜಾಸ್ತಿ ಆದರೆ ಇನ್ನೊಬ್ಬರ ಮನೆ ಕೆಡವಿ ಮನಸ್ಸು ಕೆಡವಿ ನಿಮ್ಮ ಕೋಟೆಯನ್ನು ಕಟ್ಟಿಕೊಳ್ಳುವಂತಹ ವ್ಯಕ್ತಿತ್ವ ನಿಮ್ಮದಲ್ಲ. ನೀವು ಬಹುಬೇಗ ಎಲ್ಲರನ್ನೂ ಪ್ರೀತಿಸುತ್ತೀರ. ನಿಮ್ಮಲ್ಲಿರುವ ಹೃದಯ ವೈಶಾಲ್ಯತೆಗೆ ನೀವು ಕಲಾವಿದರಾಗಿ ಬಿಟ್ಟರೆ ಸ್ಕ್ರಿಪ್ಟ್ ರೈಟರ್, ಬೋಟಿಕ್ ಡಿಸೈನರ್, ಫ್ಯಾಷನ್ ಡಿಸೈನರ್, ಆ್ಯಕ್ಟಿಂಗ್, ಪ್ರವಚನ ಗುರುಗಳಾಗಿ, ಜನಾನುರಾಗಿ, ಸಮಾಜಮುಖಿಯಾಗಿ, ಮಾರ್ಗದರ್ಶಕರಾಗಿ, ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ತೆಗೆದುಕೊಂಡರೆ ಅದು ಅದ್ಭುತವೇ.
ನೀವಿದ್ದ ಕಡೆ ನಗು ಆನಂದ ಸಮಾಧಾನ ಧೈರ್ಯ ಇರುತ್ತದೆ. ತಾಯಿಯ ಪ್ರೀತಿ ನಿಮ್ಮದು. ನೋವು ಕೂಡ ಇರುತ್ತದೆ ಅದನ್ನು ಬಚ್ಚಿಟ್ಟುಕೊಂಡಿರುತೀರ. ಸದಾ ತಮ್ಮ ಭಾವನೆ ನೋವುಗಳನ್ನ ಮನಸ್ಸಿನಲ್ಲಿಟ್ಟುಕೊಂಡ ನಗುತ್ತಿರುತ್ತಾರೆ. ನೀವು ಒಬ್ಬ ವಿಜ್ಞಾನಿಯಂತೆ ಏನಾದರೂ ಕಂಡುಹಿಡಿಯಲು ಆಳಕ್ಕೆ ಇಳಿದರೆ ಪ್ರಪಂಚಕ್ಕೆ ಉಂಟು ವಿಸ್ಮಯವನ್ನು ತೋರಿಸುವಂತ ಶಕ್ತಿ ನಮಗಿರುತ್ತದೆ. ಆದರ ಅದನ್ನ ಸರಿಯಾಗಿ ಬಳಸಿಕೊಳ್ಳುವುದಿಲ್ಲ. ನೀವು ಜ್ಯೋತಿರ್ವಿಜ್ಞಾನ ಗಳು ಅಪವಾದ ಹುಡುಕಿಕೊಂಡು ಬರುತ್ತವೆ. ಅದನ್ನು ಇಗ್ನೋರ್ ಮಾಡಿ ಮುಂದಕ್ಕೆ ಹೋಗಿ. ಆದರೆ ಗುಬ್ಬಚ್ಚಿಯ ಹಾಗೆ ಒಂದೇ ಕಡೆ ಕುಳಿತುಕೊಂಡು ಬಿಡುತ್ತೀರಾ ಅದನ್ನು ಬಿಟ್ಟರೆ ವಿಜಯವೇ ನಿಮಗೆ. ಪ್ರಕೃತಿ ನಿಮ್ಮನ್ನು ಹತ್ತು ಬಾರಿ ಪರೀಕ್ಷಿಸುತ್ತದೆ ಅದನ್ನು ನೀವು ಪರ್ಸನಲ್ಲಾಗಿ ತೆಗೆದುಕೊಳ್ಳಬೇಡಿ. ಎಕ್ಸ್ ಪೆರಿಮೆಂಟ್ ಎಂದುಕೊಳ್ಳಿ , ನವೆಂಬರ್ ಮಾಸ ಮಾಣಿಕ್ಯದ ಮಾಸ. ನವೆಂಬರ್ ಮಾಸದಲ್ಲಿ ಹುಟ್ಟಿದವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಸಿಕೊಡಲಾಗುತ್ತದೆ.
ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :
ಮೇಷರಾಶಿ : ಅಷ್ಟಮಿ ಪ್ರಭಾವದ ಚಂದ್ರ ಆ ಚಂದ್ರನಿಗೆ ಮೂಲ ತ್ರಿಕೋನದಲ್ಲಿ ನೇರವಾಗಿ ಕೇತು ಕುಜ ಕೇಂದ್ರ ಭಾವದಲ್ಲಿ ಸೂರ್ಯ ಶನಿ ಕುಳಿತಿರುವಂತಹುದು ಕದಲಿಕೆಯನ್ನು ಮಾಡುತ್ತದೆ. ತೀರಾ ಬುದ್ದಿಯನ್ನು ಉಪಯೋಗಿಸಲು ಹೋಗಬೇಡಿ. ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ತಟಸ್ಥ ಇಂದು ಅಷ್ಟಮ ಯಾಗಿರುವುದರಿಂದ ದುರ್ಗಾದೇವಿಗೆ ಹೋಗಿ ಅರ್ಚನೆ ಮಾಡಿಸಿ ಒಳ್ಳೆಯದಾಗುತ್ತದೆ.
ವೃಷಭ ರಾಶಿ : ಚೆನ್ನಾಗಿದೆ ಆದರೆ ತುಂಬಾ ಲೆಕ್ಕಾಚಾರ ಹಾಕುತ್ತೀರಾ. ಅತಿಯಾದ ಲೆಕ್ಕಾಚಾರ ಹಾಕಿದರೆ ಅದು ಫೇಲೂರ್ ಆಗುತ್ತದೆ.
ಮಿಥುನ ರಾಶಿ : ಲೆಕ್ಕಾಚಾರ ಅದ್ಭುತವಾಗಿ ನಡೆಯುತ್ತದೆ ಭೂಮಿ ವಾಹನದ ಚಿಂತೆಯಲ್ಲಿದ್ದರೆ ಭ್ರಾತೃವಿನ ಯೋಚನೆಯಲ್ಲಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಕರ್ಕಾಟಕ ರಾಶಿ : ತಮಗೆ ಸೋದರ ಇದ್ದರೆ ವಕ್ರಗತಿ ಎಲ್ಲಾದರೂ ಅವರಿಗೆ ಬಾಧೆ ಇಲ್ಲ ಅವರ ಜೊತೆ ಜಗಳವಾಗುತ್ತದೆ. 1ಬೊಗಸೆ ಬೆಲ್ಲ ತೊಗರಿಬೇಳೆಯನ್ನು ಯಾರಿಗಾದರೂ ಕೊಡಿ ಇದರಿಂದ ವಕ್ರ ಫಲ ದೂರವಾಗುತ್ತದೆ.
ಸಿಂಹ ರಾಶಿ : ಇಂದು ವಿಶೇಷವಾದ ದಿನ ಚಂದ್ರ ಮೂರನೇ ಮನೆಯಲ್ಲಿ ಇದ್ದಾನೆ ತೊಂದರೆ ಏನೂ ಇಲ್ಲ ಶಾರ್ಟ್ ಕಟ್ ನಲ್ಲಿ ದುಡ್ಡು ಮಾಡುವ ಯೋಚನೆ ಮಾಡಬೇಡಿ ಮಾಡಿಸಿದರೆ ಅವಸಾನವೇ.
ಕನ್ಯಾ ರಾಶಿ : ಭೂಮಿ ಮನೆ ವಾಹನ ಯೋಗವುಂಟು .ಭಾತ್ರುಗಳ ಸಹ ಬರುತ್ತದೆ ಅಣ್ಣತಮ್ಮಂದಿರ ಕಡೆ ಗಮನ ಕೊಡಿ.
ತುಲಾ ರಾಶಿ : ಬುಧ ನಿಮ್ಮ ಮನೆಯಲ್ಲೇ ಇರುವುದರಿಂದ ಚೆನ್ನಾಗಿದೆ ಬುದ್ಧಿ ಉಪಯೋಗಿಸಿ ಮಾಡಿರುವಂತಹ ಕಸ್ಟಮರ್ ಸರ್ವಿಸ್, ಕಮಿಷನ್ ಏಜೆಂಟ್ ಗೈಡಿಂಗ್ ಗಅಡ್ವರ್ಟೈಸಿಂಗ್ ಕೆಲಸ ಮಾಡುತ್ತಿದ್ದರೆ ಅಭಿವದ್ಧಿ.
ವೃಶ್ಚಿಕ ರಾಶಿ : ಆಹಾರದಲ್ಲಿ ತಪ್ಪಾದ ಲೆಕ್ಕಾಚಾರ ಹಾಕಿ ನಿಮಗೆ ಮೋಸವಾಗುತ್ತದೆ ಎಳೆದಾಟ ಉಂಟಾಗುತ್ತದೆ. ಅವರು ಈಗ ಚೆನ್ನಾಗಿ ಇರುವುದರಿಂದ ಲೀಗಲ್ ಆಗಿ ಅದನ್ನು ಸರಿ ಮಾಡಿಕೊಳ್ಳಿ.
ಧನಸ್ಸು ರಾಶಿ : ಪಾರ್ಟ್ ನರ್ ಷಿಪ್ ವ್ಯವಹಾರ ದಲ್ಲಿ ಬೇರೆಯವರಿಗೆ ಲಾಭ ಜಾಸ್ತಿ ನಿಮಗೆ ಸ್ವಲ್ಪ ಕಡಿಮೆ.
ಮಕರ ರಾಶಿ : ಟೆಕ್ನಿಕಲ್ ಲೈನ್ ನಲ್ಲಿ ಇರುವವರಿಗೆ ಆದಾಯ ಜಾಸ್ತಿ.

ಕುಂಭ ರಾಶಿ : ನಿಮಗೂ ಕೂಡ ಚೆನ್ನಾಗಿದೆ ಬುಧ ಭಾಗ್ಯಸ್ಥಾನದಲ್ಲಿ ಇರುವುದರಿಂದ ಅದ್ಭುತವಾಗಿದೆ. ದೂರದಿಂದ ಖರ್ಚುವೆಚ್ಚಗಳೂ ಹೆಚ್ಚಾಗಿ ಬರುತ್ತವೆ. ಸೋದರ ವರ್ಗ, ಹಬ್ಬದ ಹಿನ್ನಲೆಯಲ್ಲಿ ಖರ್ಚುವೆಚ್ಚಗಳ ಆಗುತ್ತವೆ ಆದರೆ ಅದನ್ನು ನಿಭಾಯಿಸಿ ಕೊಳ್ಳುವಷ್ಟು ಹಣ ವನ್ನು ದೇವರು ಕೊಡುತ್ತಾನೆ.
ಮೀನ ರಾಶಿ : ಅತಿಯಾದ ಬುದ್ದಿವಂತಿಕೆ ಒಳ್ಳೆಯದಲ್ಲ. ತುಂಬಾ ಬುದ್ದಿವಂತರನ್ನ ಭಗವಂತ ಭೂಮಿಯ ಮೇಲೆ ಇರಲು ಬಿಡುವುದಿಲ್ಲ. ತುಂಬ ಬುದ್ಧಿವಂತಿಕೆ ಉಪಯೋಗಿಸಲು ಹೋಗಬೇಡಿ ಸಾಮಾನ್ಯರಂತೆ ಇರಿ ಸಾಮಾನ್ಯ ಬದುಕೇ ಅದ್ಭುತವಾದ ಬದುಕು.