ಸೋಮವಾರ, ಏಪ್ರಿಲ್ 28, 2025
HomeBreakingToday Horoscope : ಯಾವ ರಾಶಿಗೆ ಶುಭ, ಯಾವರಾಶಿಗೆ ಲಾಭ

Today Horoscope : ಯಾವ ರಾಶಿಗೆ ಶುಭ, ಯಾವರಾಶಿಗೆ ಲಾಭ

- Advertisement -

ಮೇಷರಾಶಿ
ಸಾಮಾಜಿಕ ಕಾರ್ಯಗಳಿಂದ ಖ್ಯಾತಿ, ಕುಟುಂಬದಲ್ಲಿ ವಾದ ವಿವಾದಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿಯಲ್ಲಿ ಏರು-ಪೇರು, ಸಾಂಸಾರಿಕವಾಗಿ ಅರ್ಥ ಮಾಡಿಕೊಂಡು ಮುನ್ನಡೆಯಿರಿ, ಶತ್ರುಗಳಿಂದ ತೊಂದರೆ, ವಿವಾಹ ಯೋಗ, ಆಸ್ತಿ ವಿಚಾರದಲ್ಲಿ ಮನಸ್ತಾಪ, ಸಮಾಜ ಸೇವಕರಿಗೆ ನಿಂದನೆ.

ವೃಷಭರಾಶಿ
ಕೆಲಸದ ಸ್ಥಳದಲ್ಲಿ ಅನುಕೂಲಕರ ವಾತಾವರಣ, ಸಹೋದ್ಯೋಗಿಗಳಿಂದ ಸಹಕಾರ, ಕುಟುಂಬದಲ್ಲಿ ಸಂತಸ, ವಿದ್ಯಾರ್ಥಿಗಳಿಗೆ ಅನುಕೂಲ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಾಮಾನ್ಯ ವರಮಾನ, ಮಹಿಳೆಯರಿಗೆ ಅನುಕೂಲಕರ ಸಮಯ.

ಮಿಥುನರಾಶಿ
ಹಿರಿಯರ ಸಲಹೆಯನ್ನು ಆಲಿಸಿ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಆಸ್ತಿ ವಿಚಾರದಲ್ಲಿ ಮನಸ್ತಾಪ, ಉದ್ಯೋಗ ಬದಲಾವಣೆ ಸಾಧ್ಯತೆ, ಹೂಡಿಕೆ ಮಾಡುವ ಮುನ್ನ ಎಚ್ಚರವಿರಲಿ, ಮಿತ್ರರಿಂದ ತೊಂದರೆ, ವೃಥಾ ಅಲೆದಾಟ, ವಾಹನದಿಂದ ತೊಂದರೆ.

ಕರ್ಕಾಟಕರಾಶಿ
ಸಹೋದ್ಯೋಗಿಗಳ ಸಂಪೂರ್ಣ ಸಹಕಾರ, ಬಾಕಿ ಉಳಿದ ಕೆಲಸ ಕಾರ್ಯಗಳಿಗೆ ಮರುಚಾಲನೆ, ಸ್ನೇಹಿತರಿಂದ ಸಹಕಾರ, ಮೇಲಾಧಿಕಾರಿಗಳ ಪ್ರಶಂಸೆ, ನೀಚ ಜನರ ಸಹವಾಸ, ಎಲ್ಲಾ ಕೆಲಸಕಾರ್ಯಗಳಲ್ಲಿ ವಿಘ್ನ, ಮನಃ ಕ್ಲೇಶ, ಆಕಸ್ಮಿಕ ನಷ್ಟ, ಮನಸ್ಸಿಗೆ ಅಶಾಂತಿ.

ಸಿಂಹರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಹಿರಿಯ ಅಧಿಕಾರಿಗಳಿಂದ ಕಿರಿಕಿರಿ, ಹೊಸ ಒಪ್ಪಂದ ಲಾಭವನ್ನು ತರಲಿದೆ, ಮನೆಯಲ್ಲಿ ಶುಭ ಕಾರ್ಯಕ್ಕೆ ಚಿಂತನೆ, ತಂದೆ-ತಾಯಿಯರಲ್ಲಿ ವಾತ್ಸಲ್ಯ, ಎಷ್ಟೇ ಹಣ ಬಂದರು ಉಳಿಯುವುದಿಲ್ಲ, ಅಧಿಕ ಖರ್ಚು, ಕುಲದೇವರ ಆರಾಧನೆಯಿಂದ ಅನುಕೂಲ.

ಕನ್ಯಾರಾಶಿ
ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ, ವ್ಯವಹಾರಿಕವಾಗಿ ಯಶಸ್ಸು, ಆತ್ಮವಿಶ್ವಾಸದಿಂದ ಕೆಲಸ ಮಾಡಿ, ಶತ್ರುಭಯ, ಮನಸ್ಸಿನಲ್ಲಿ ಗೊಂದಲ, ಉದ್ಯೋಗದಲ್ಲಿ ಬಡ್ತಿ, ಅನಾರೋಗ್ಯ, ಋಣಭಾದೆ, ಮಕ್ಕಳಿಗಾಗಿ ಅಧಿಕ ಧನವ್ಯಯ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ

ತುಲಾರಾಶಿ
ರಾಜಕಾರಣಿಗಳಿಗೆ ಶುಭಫಲ, ವಿದ್ಯಾರ್ಥಿಗಳಿಗೆ ಅನುಕೂಲ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಹಳೆಯ ಸಾಲವನ್ನು ತೀರಿಸುವಿರಿ, ಹಿತಶತ್ರುಗಳಿಂದ ತೊಂದರೆ, ಮನಸ್ತಾಪ, ಅನಾರೋಗ್ಯ, ದಾಯಾದಿ ಕಲಹ, ಅಲ್ಪ ಕಾರ್ಯಸಿದ್ಧಿ, ಪರಸ್ಥಳ ವಾಸ.

ವೃಶ್ಚಿಕರಾಶಿ
ಕುಟುಂಬದಲ್ಲಿ ಶಾಂತಿ, ವ್ಯವಹಾರದಲ್ಲಿ ಉತ್ಸಾಹ, ಸ್ವಜನರಲ್ಲಿ ಮನ್ನಣೆ, ದೊಡ್ಡ ಹೂಡಿಕೆಗೆ ಮೊದಲು ತಜ್ಞರ ಸಲಹೆ ಪಡೆಯಿರಿ, ಪಾಪಕಾರ್ಯ ಮಾಡುವಿರಿ, ಹೊಸ ಉದ್ಯೋಗ ಪ್ರಾಪ್ತಿ, ದುಃಖ ದಾಯಕ ಪ್ರಸಂಗಗಳು, ಕೆಲಸ ಕಾರ್ಯಗಳಲ್ಲಿ ತೊಂದರೆ.

ಧನಸ್ಸುರಾಶಿ
ಕೊಟ್ಟ ಹಣ ಮರಳಿ ಬಾರದು, ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶ, ಶೀತ ಸಂಬಂಧ ರೋಗಗಳು, ಅಕಾಲ ಭೋಜನ, ದೂರದ ಊರುಗಳಿಗೆ ಪ್ರಯಾಣ, ಅನಾರೋಗ್ಯ, ದಿನಾಂತ್ಯಕ್ಕೆ ಶುಭ ಸುದ್ದಿ. ವಿರೋಧಿಗಳಿಂದ ತೊಂದರೆ, ಮನಸ್ಸಿಗೆ ಬೇಸರ, ಮನಕ್ಲೇಷ.

ಮಕರರಾಶಿ
ಸರಕಾರಿ ಉದ್ಯೋಗಿಗಳಿಗೆ ಲಾಭ, ದೈನಂದಿನ ಕಾರ್ಯಗಳನ್ನು ಬಗೆ ಹರಿಸಲು ಅವಕಾಶ, ಮನೆಯಲ್ಲಿ ನೆಮ್ಮದಿ, ನ್ಯಾಯಾಲಯದಲ್ಲಿರುವ ವ್ಯಾಜ್ಯಗಳಿಗೆ ಬಗೆ ಹರಿಯಲಿವೆ, ವ್ಯಾಪಾರದಲ್ಲಿ ಧನಲಾಭ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಲಾಭ, ಶುಭ ಸುದ್ದಿಯನ್ನು ಕೇಳುವಿರಿ.

ಕುಂಭರಾಶಿ
ಉದರ ಸಂಬಂಧಿ ಸಮಸ್ಯೆಗಳು ಎದುರಾಗಲಿದೆ, ಆಹಾರದ ಬಗ್ಗೆ ಅಸಡ್ಡೆ ಬೇಡ, ಧಾರ್ಮಿಕ ಸ್ಥಳಗಳಿಗೆ ಭೇಟಿ, ವ್ಯವಹಾರಿಕವಾಗಿ ಆಹ್ಲಾದಕರ ವಾತಾವರಣ, ಸ್ಥಿರಾಸ್ತಿ ಸಂಪಾದನೆ, ಚಂಚಲ ಮನಸ್ಸು, ಧನವ್ಯಯ, ದೂರ ಪ್ರಯಾಣ, ಬಂಧುಗಳಲ್ಲಿ ದ್ವೇಷ, ಸಲ್ಲದ ಅಪವಾದ.

ಮೀನರಾಶಿ
ವಿದ್ಯಾರ್ಥಿಗಳಿಗೆ ಸ್ನೇಹಿತರಿಂದ ಸಲಹೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ತಂದೆ ತಾಯಿ ಆರೋಗ್ಯದಲ್ಲಿ ಚೇತರಿಕೆ, ಹೊಸ ಅವಕಾಶಗಳು ದೊರೆಯಲಿದೆ, ಸ್ನೇಹಿತರಿಂದ ಸಹಾಯ, ಕುಟುಂಬ ಸೌಖ್ಯ, ಅಲ್ಪ ಲಾಭ, ದಾರಿದ್ರ್ಯ, ದುಷ್ಟಬುದ್ಧಿ, ದ್ರವ್ಯನಾಶ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular