ಹಿಂದೂ ಧರ್ಮದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವ ಅನೇಕ ಗ್ರಂಥಗಳಿವೆ. ಇವುಗಳಲ್ಲಿ ಒಂದು ವಾಸ್ತು ಶಾಸ್ತ್ರ. ಈ ಗ್ರಂಥದಲ್ಲಿ ಮನೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ.ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಯಾವ ವಸ್ತುಗಳು ಮನೆಯಲ್ಲಿರಬೇಕು, ಯಾವುದು ಇಲ್ಲ ಮತ್ತು ಯಾವುದನ್ನು ಇಡುವುದು ಶುಭ..? ಅದರಲ್ಲಿ ಏನಿರಬೇಕು..?, ಯಾವುದು ಇರಬಾರದು..? ಮತ್ತು ಯಾವುದನ್ನು ಇಟ್ಟುಕೊಳ್ಳುವುದು ಒಳ್ಳೆಯದು, ಯಾವುದು ಅಶುಭ ಎಂಬಿತ್ಯಾದಿ ಮಾಹಿತಿಗಳು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ವಾಸ್ತು ಶಾಸ್ತ್ರದಲ್ಲಿ ಪೀಠೋಪಕರಣಗಳ(vastu tips for furniture) ಬಗ್ಗೆಯೂ ಹಲವು ವಿಶೇಷಗಳನ್ನು ಹೇಳಲಾಗಿದೆ. ಹೌದು ಮನೆಯಲ್ಲಿ ಇಡುವ ಪೀಠೋಪಕರಣಗಳ ವಿಚಾರದಲ್ಲಿಯೂ ವಾಸ್ತು ಶಾಸ್ತ್ರದಲ್ಲಿ ಸಾಕಷ್ಟು ನಿಯಮಗಳು ಇವೆ. ಅವುಗಳು ಏನು ಎನ್ನುವುದನ್ನು ತಿಳಿದುಕೊಳ್ಳೋಣ :
ಈ ಮರಗಳಿಂದ ನಿರ್ಮಿಸಲಾದ ಪೀಠೋಪಕರಣಗಳನ್ನು ಮನೆಯಲ್ಲಿ ಇಡಬೇಡಿ :
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮರದ ಪೀಠೋಪಕರಣಗಳನ್ನು ಹೊಂದಿದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಮನೆಯಲ್ಲಿ ಆಲ, ಅಶ್ವತ್ಥ ಹಾಗೂ ಶ್ರೀಗಂಧದ ಪೀಠೋಪಕರಣಗಳನ್ನು ಇಡುವುದು ಶುಭವಲ್ಲ. ಏಕೆಂದರೆ ಹಿಂದೂ ಧರ್ಮದಲ್ಲಿ ಈ ಮರಗಳಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ ಮನೆಯಲ್ಲಿ ಇಂತಹ ಮರಗಳಿಂದ ನಿರ್ಮಿಸಲಾದ ಪೀಠೋಪಕರಣಗಳು ಮನೆಯಲ್ಲಿ ನಕಾರಾತ್ಮಕ ಅಂಶ ಹಾಗೂ ಬಡತನವನ್ನು ತರುತ್ತವೆ
ಕಬ್ಬಿಣ ಅಥವಾ ಪ್ಲಾಸ್ಟಿಕ್ ಪೀಠೋಪಕರಣಗಳು ಶುಭವಲ್ಲ :ವಾಸ್ತು ಶಾಸ್ತ್ರದಲ್ಲಿ ಕಬ್ಬಿಣ ಅಥವಾ ಪ್ಲಾಸ್ಟಿಕ್ನಿಂದ ಮಾಡಿದ ಪೀಠೋಪಕರಣಗಳನ್ನು ಮನೆಯಲ್ಲಿ ಇಡುವುದು ಅಥವಾ ಖರೀದಿಸುವುದು ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ.ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. ಸಂಸಾರದಲ್ಲಿ ಪರಸ್ಪರ ಕಲಹಗಳು ಹೆಚ್ಚಾಗಿಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತದೆ.
ಈ ದಿಕ್ಕಿನಲ್ಲಿ ಪೀಠೋಪಕರಣಗಳನ್ನು ಇರಿಸಿದರೆ ಕಾದಿದೆ ಅದೃಷ್ಟ :
ವಾಸ್ತು ಶಾಸ್ತ್ರದ ಪ್ರಕಾರ ಭಾರವಾದ ಪೀಠೋಪಕರಣಗಳನ್ನು ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಆದರೆ, ಲಘು ಪೀಠೋಪಕರಣಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮಾತ್ರ ಇಡಬೇಕು. ಈ ದಿಕ್ಕುಗಳಲ್ಲಿ ಪೀಠೋಪಕರಣಗಳನ್ನು ಇರಿಸಲು ನೀವು ಬಯಸದಿದ್ದರೆ, ನೀವು ಅವುಗಳನ್ನು ಗೋಡೆಯಿಂದ ಸುಮಾರು 8 ಇಂಚುಗಳಷ್ಟು ದೂರದಲ್ಲಿ ಇರಿಸಬಹುದು.
ಇದನ್ನು ಓದಿ : Vastu Tips For Marriage : ಮದುವೆಯ ವಯಸ್ಸು ಮೀರಿದರೂ ಸಂಗಾತಿಯು ಸಿಗುತ್ತಿಲ್ಲವೇ..? ಹಾಗಾದರೆ ಅನುಸರಿಸಿ ಈ ವಾಸ್ತುಟಿಪ್ಸ್
ಇದನ್ನೂ ಓದಿ : Vastu Ideas : ವಾಸ್ತು ಶಾಸ್ತ್ರದ ಪ್ರಕಾರ ಉಪ್ಪಿಗೆ ಇರುವ ಪಾಸಿಟಿವ್ ಹಾಗೂ ನೆಗೆಟಿವ್ ಎಫೆಕ್ಟ್ಗಳ ಬಗ್ಗೆ ಇಲ್ಲಿದೆ ಮಾಹಿತಿ
vaastu tips for furniture which direction and wood is best for furniture sofa shape vaastu shastra