ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 03-01-2021

ನಿತ್ಯಭವಿಷ್ಯ : 03-01-2021

- Advertisement -

ಮೇಷರಾಶಿ
ಆಪ್ತೇಷ್ಟರ ವಲಯದಲ್ಲಿ ನಿಮಗೆ ಮಾನ್ಯತೆ ಸಿಗಲಿದೆ, ಆತಂಕದಿಂದಲೇ ಕಾರ್ಯಸಿದ್ಧಿಯಾಗಲಿದೆ, ಮನಸ್ಸಿನಲ್ಲಿ ಭಯಭೀತಿ, ಕಾರ್ಯವಿಘ್ನ, ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಅನಾರೋಗ್ಯ. ಖಚಿತ ನಿರ್ಧಾರಕ್ಕೆ ಬರಲಾಗದಂತಹ ಪರಿಸ್ಥಿತಿ, ಮಧ್ಯವರ್ತಿ ಯಾಗಬೇಕಾದ ಸಂದಿಗ್ದ ಪರಿಸ್ಥಿತಿ.

ವೃಷಭರಾಶಿ
ಉದ್ಯೋಗ ವ್ಯವಹಾರದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಸಾಧಾರಣ ಲಾಭ, ಶೀತ ಸಂಬಂಧ ಖಾಯಿಲೆ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ, ಕ್ರಯ ವಿಕ್ರಯಗಳಿಂದ ಮೋಸ, ಪರಸ್ಥಳ ವಾಸ, ಅಲ್ಪ ಲಾಭ, ಅಧಿಕ ಖರ್ಚು, ಆರ್ಥಿಕ ಅಡಚಣೆ ನಡುವೆಯೇ ಇಚ್ಛಿತ ನಿರ್ಧಾರವು ಕಾರ್ಯರೂಪಕ್ಕೆ ಬರಲಿದೆ, ಗೃಹದಲ್ಲಿ ಶುಭಮಂಗಲ ಕಾರ್ಯಗಳಿಂದ ಸಂಭ್ರಮ, ಆತ್ಮೀಯರಿಂದ ಪ್ರಶಂಸೆ.

ಮಿಥುನರಾಶಿ
ಸಕಾಲದಲ್ಲಿ ಸರಿಯಾದ ನಿರ್ಧಾರದಿಂದ ಮನತೃಪ್ತಿ, ವ್ಯಾಸಂಗದಲ್ಲಿ ಮುನ್ನಡೆ, ದಾಯಾದಿ ಕಲಹ, ಹಣದ ಅಡಚಣೆ, ಮಕ್ಕಳಿಗೆ ಅನಾರೋಗ್ಯ, ಕೃಷಿಯಲ್ಲಿ ಲಾಭ, ವ್ಯರ್ಥ ಧನಹಾನಿ, ಗುರು ಹಿರಿಯರಲ್ಲಿ ಭಕ್ತಿ, ಆಪ್ತರ ಹಿತನುಡಿ, ದೂರ ಪ್ರಯಾಣ.ವಿಶೇಷವಾದ ಆಸಕ್ತಿಯಿಂದ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ, ಬಂಧುಮಿತ್ರರ ಆಗಮನದಿಂದ ಖರ್ಚುವೆಚ್ಚ ಹೆಚ್ಚಾಗಲಿದೆ.

ಕಟಕರಾಶಿ
ಆತ್ಮೀಯರ ಆಕಸ್ಮಿಕ ಭೇಟಿಯಿಂದ ಸಂತಸವಾದೀತು, ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯ ಅನುಕೂಲ, ಸ್ಥಿರಾಸ್ತಿ ಸಂಪಾದನೆ, ಬಂಧುಮಿತ್ರರ ಭೇಟಿ, ಧನಾಗಮನ, ಭೂಲಾಭ, ಸೇವಕರಿಂದ ಸಹಾಯ, ಋಣಭಾದೆ, ದುಷ್ಟ ಜನರಿಂದ ದೂರವಿರಿ, ಋಣ ಪರಿಹಾರಾರ್ಥ ಪ್ರಗತಿಪರ ಚಟುವಟಿಕೆಗಳು ಕಂಡುಬಂದಾವು, ಅಜೀರ್ಣ, ಉದರ ಉಪದ್ರವಗಳು ನಿಮ್ಮನ್ನು ಕಾಡಲಿದೆ, ದಿನಾಂತ್ಯ ಶುಭವಿದೆ.

ಸಿಂಹರಾಶಿ
ವಿಲಾಸೀ ಸಾಮಾಗ್ರಿಗಳ ಖರೀದಿಯಿಂದ ಸಂತೃಪ್ತಿ ಸಿಗಲಿದೆ, ಕಾರ್ಯ ಸಾಧನೆಗಾಗಿ ತಿರುಗಾಟ, ಮನೆಯಲ್ಲಿ ಶಾಂತಿಯ ವಾತಾವರಣ, ಶುಭ ಫಲ, ವ್ಯರ್ಥ ಧನಹಾನಿ, ಚಂಚಲ ಮನಸ್ಸು, ಪರಸ್ಥಳ ವಾಸ, ಶತ್ರುಬಾಧೆ ಎಚ್ಚರ, ಮನೋಕಾಮನೆ ಪೂರೈಕೆಯಿಂದ ಮನಸ್ಸಿಗೆ ಸಮಾಧಾನ ದೊರಕಲಿದೆ. ಗೃಹ ಖರೀದಿ, ಯಾ ನಿವೇಶನ ಖರೀದಿಯು ಕಂಡುಬಂದೀತು. ಮುನ್ನಡೆಯಿರಿ.

ಕನ್ಯಾರಾಶಿ
ಆತ್ಮೀಯರಿಂದ ನೆರವಿನ ಹಸ್ತ ಕಂಡುಬರಲಿದೆ. ವೃತ್ತಿರಂಗದಲ್ಲಿ ನಿರೀಕ್ಷಿತ ಬಾಹ್ಯ ನೆರವು ಲಭ್ಯ, ಕೆಲಸ ಕಾರ್ಯಗಳಲ್ಲಿ ಮಂದಗತಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ಒತ್ತಡ, ಆಕಸ್ಮಿಕ ನಷ್ಟ, ವಿಪರೀತ ವ್ಯಸನ, ಮಿತ್ರದ್ರೋಹ, ಕಾರ್ಯಗಳಲ್ಲಿ ಜಯ, ಇಲ್ಲಸಲ್ಲದ ತಕರಾರು. ಕೀಳರಿಮೆ, ದೌರ್ಬಲ್ಯಗಳಿಂದ ಚೇತರಿಸಿಕೊಳ್ಳಲಿರುವ ಸೂಚನೆ ಕಂಡುಬಂದು ಸಮಾಧಾನ.

ತುಲಾರಾಶಿ
ಲಾಭಯುಕ್ತ – ವ್ಯವಹಾರದಲ್ಲಿ ಜಯಶೀಲರಾಗುವಿರಿ, ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಕುಟುಂಬದಲ್ಲಿ ಕಲಹ, ತೀರ್ಥಕ್ಷೇತ್ರ ದರ್ಶನ, ಹೊಸ ವ್ಯವಹಾರದಿಂದ ಲಾಭ, ಅತಿಯಾದ ಕೋಪ ಒಳ್ಳೆಯದಲ್ಲ, ತಾಳ್ಮೆ ಅಗತ್ಯ, ಕುಟುಂಬದಲ್ಲಿ ಶುಭ ಮಂಗಲ ಕಾರ್ಯದ ಚಟುವಟಿಕೆ ಕಂಡುಬರಲಿದೆ, ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರ ದೃಷ್ಟಿಯಿಂದ ಪಾರಾಗುವಿರಿ.

ವೃಶ್ಚಿಕರಾಶಿ
ಅಜಾಗ್ರತೆಯಿಂದ ಅಮೂಲ್ಯ ವಸ್ತು ಕಳೆದು ಕೊಳ್ಳುವ ಸಾಧ್ಯತೆ, ವಾಹನ ರಿಪೇರಿ, ಚಂಚಲ ಮನಸ್ಸು, ಸಾಲಬಾಧೆ, ನಾನಾ ರೀತಿಯ ತೊಂದರೆಗಳು, ಧೈರ್ಯದಿಂದ ಮುನ್ನುಗ್ಗುವಿರಿ, ಸುಖ ಭೋಜನ, ಧನವ್ಯಯ ಎಚ್ಚರದಿಂದಿರಿ, ಅನಗತ್ಯವಾದ ವೆಚ್ಚವನ್ನು ಕಡಿಮೆ ಮಾಡಿರಿ. ಮಾನಸಿಕವಾಗಿ ನಿಮಗೆ ಕಿರಿಕಿರಿ, ನೆಮ್ಮದಿಗಾಗಿ ಪ್ರಾರ್ಥಿಸಿರಿ.

ಧನಸುರಾಶಿ
ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಹಿಳೆಯರಿಗೆ ಈ ವಾರ ಶುಭ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅಧಿಕ ತಿರುಗಾಟ, ಅಧಿಕಾರಿಗಳಿಂದ ಪ್ರಶಂಸೆ, ಅಧಿಕ ಖರ್ಚು, ಮನಃಶಾಂತಿ, ಅಸಮರ್ಥನೆಯ ಭಾವನೆಯಿಂದ ಮನೋಚಾಂಚಲ್ಯ, ಧೈರ್ಯದಿಂದ ಪರಿಸ್ಥಿತಿ ಯನ್ನು ಎದುರಿಸುವುದು ಮುಖ್ಯ. ನಿರೀಕ್ಷಿತ ಮೂಲಗಳಿಂದ ಧನಾಗಮನವು ಕಂಡುಬಂದೀತು, ಕಿರು ಪ್ರಯಾಣವಿದೆ.

ಮಕರರಾಶಿ
ಅನಗತ್ಯವಾದ ವಿಷಯಗಳಲ್ಲಿ ನಿಮ್ಮ ಆಗಮನ ಬೇಡ. ದೈಹಿಕ ಶ್ರಮ ಕಂಡು ಬರುವುದು, ನಿಮ್ಮ ಭಾವನೆಗಳಿಗೆ ಒಳ್ಳೆಯ ಬೆಲೆ ಬರಲಿದೆ, ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಚರ್ಚೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಸ್ತಿಯ ವಿಷಯದಲ್ಲಿ ಕಲಹ, ದಾಂಪತ್ಯ ಸಾಮರಸ್ಯ, ಮಾನಸಿಕ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರದಲ್ಲಿ ಆಕಸ್ಮಿಕ ಲಾಭ, ಋಣವಿಮೋಚನೆ.

ಕುಂಭರಾಶಿ
ಹೊರೆಯಾಗಲಿರುವ ಹೊಣೆಗಾರಿಕೆಯಿಂದ ಮನಸ್ಸು ರೋಸಿ ಹೋದೀತು, ನ್ಯಾಯಾಲಯದ ತೀರ್ಪಿಗಾಗಿ ತಿರುಗಾಟ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ ಎಚ್ಚರ, ಆರೋಗ್ಯ ಭಾಗ್ಯ ಪ್ರಾಪ್ತಿ, ಬಂಧುಗಳಿಂದ ಸಹಾಯ, ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ಅಲ್ಪ ಲಾಭ, ವೃತ್ತಿರಂಗದಲ್ಲಿ ಪರಿಸ್ಥಿತಿ ಅನುಗುಣವಾಗಿ ಚರ್ಚಿಸಬೇಕಾದ ಸಂದಿಗªತೆ. ಅಧಿಕಾರದಲ್ಲಿರುವ ಮಿತ್ರರಿಂದ ಉಪಯುಕ್ತ ಕೊಡುಗೆ ಸಿಗಲಿದೆ.

ಮೀನರಾಶಿ
ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಮಾತಿನ ಮೇಲೆ ಹಿಡಿತವಿರಲಿ, ಜನರಲ್ಲಿ ಕಲಹ ನಿಷ್ಠೂರ, ನೌಕರಿಯಲ್ಲಿ ತೊಂದರೆ, ಅಕಾಲ ಭೋಜನ, ವಾಹನ ಯೋಗ,ಯತ್ನ ಕಾರ್ಯಗಳಲ್ಲಿ ಜಯ. ಕುಟುಂಬದಲ್ಲಿ ಶುಭ ಕಾರ್ಯ ನಿಮಿತ್ತ ಸಂತಸವಾಗಲಿದೆ, ವಿವಾದದಲ್ಲಿ ತಟಸ್ಥ ನಿಲುವು ತಾಳಿರಿ. ಅನುಕಂಪ ಗಳಿಸುವ ಯತ್ನದಲ್ಲಿ ಹಾಸ್ಯಕ್ಕೆ ಗುರಿಯಾಗಬೇಕಾದ ಸನ್ನಿವೇಶ ಎದುರಾಗಲಿದೆ. ಜಾಗ್ರತೆ ಮಾಡಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular