ಮಂಗಳವಾರ, ಮೇ 13, 2025
Homehoroscopeನಿತ್ಯ ಭವಿಷ್ಯ 12-02-2020

ನಿತ್ಯ ಭವಿಷ್ಯ 12-02-2020

- Advertisement -

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪ್ರಧಾನ್ ತಾಂತ್ರಿಕ :- ವಾದಿರಾಜ್ ಭಟ್
9743666601

ಮೇಷರಾಶಿ : ಮನಸ್ಸು ಚಂಚಲವಾಗಿರುವುದರಿಂದ ಶತ್ರು ಭಯ ನಿಮ್ಮನ್ನು ಕಾಡಬಹುದು. ಸಾಕಷ್ಟು ಒತ್ತಡದಲ್ಲಿಯೇ ದಿನವನ್ನು ಕಳೆಯಬೇಕಾಗುತ್ತದೆ. ಬಂಧುವರ್ಗದವರಿಂದ ತೊಂದರೆ ಅನುಭವಿಸುವ ಸಾಧ್ಯತೆಯಿದೆ. ವೈವಾಹಿಕ ಜೀವನವು ಸಾಮಾನ್ಯವಾಗಿದ್ದು ಸಂಗಾತಿಯ ಸಹಕಾರ ಲಭ್ಯವಾಗಲಿದೆ. ಕೆಲಸ ಕಾರ್ಯಕ್ರಮಗಳಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಆದರೆ ಹಣಕಾಸು ನೀರಿನಂತೆ ಖರ್ಚಾಗಲಿದೆ. ಉದ್ಯೋಗಿಗಳಿಗೆ ಕಠಿಣ ಪರಿಶ್ರಮಕ್ಕೆ ಉತ್ತಮ ಲಾಭ ಲಭಿಸುತ್ತದೆ.

ವೃಷಭರಾಶಿ : ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಲಿದ್ದೀರಿ. ವ್ಯವಹಾರದಲ್ಲಿ ಲಾಭವನ್ನೂ ಕಾಣಲಿದ್ದೀರಿ. ಹಣಕಾಸು ಉತ್ತಮ ಸ್ಥಿತಿಯಲ್ಲಿರುವುದರಿಂದ ಎಚ್ಚರಿಕೆಯ ಹೆಜ್ಜೆಯನ್ನಿರಿಸುವುದು ಉತ್ತಮ. ಕುಟುಂಬದೊಂದಿಗೆ ಸಂತೋಷವಾಗಿರುತ್ತೀರಿ. ಆರೋಗ್ಯವೂ ಉತ್ತಮವಾಗಿದ್ದು ತೀರ್ಥಕ್ಷೇತ್ರಗಳ ದರ್ಶನ ಭಾಗ್ಯವೂ ಇದೆ. ವಾಹನ ಸಂಚಾರದಲ್ಲಿ ಕಾರ್ಯಸಿದ್ದಿಯಾಗುತ್ತದೆ. ಆದರೆ ಸಹೋದ್ಯೋಗಳೊಡನೆ ಮನಸ್ಥಾಪಕ್ಕೆ ಕಾರಣವಾಗದಂತೆ ಎಚ್ಚರಿಕೆ ವಹಿಸಿ.

ಮಿಥುನ ರಾಶಿ : ಉದ್ಯೋಗಿಗಳಿಗೆ ಉತ್ತಮ ದಿನವಾಗಿದ್ದು, ವೃತ್ತಿ ಜೀವನದಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಹೊಂದಲಿದ್ದಾರೆ. ಇಂದು ಅತ್ಯಂತ ಆರೋಗ್ಯವಾಗಿರುತ್ತೀರಿ. ಆದರೆ ಬಿಡುವಿಲ್ಲದ ದುಡಿಮೆಯಿಂದ ಮಾನಸಿಕ ಉದ್ವೇಗ, ಅಸ್ಥಿರತೆ ಕಂಡು ಬರುತ್ತದೆ. ಪಾಪ ಬುದ್ದಿ ನಿಮ್ಮನ್ನು ಕಾಡಬಹುದು. ಅತಿಯಾದ ಕೋಪದಿಂದ ಕೆಲಸ ಕಾರ್ಯಗಳು ಹಾಳಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಕಟಕ : ಮೇಲಾಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನು ಕೇಳುವಿರಿ. ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವ ಮೊದಲು ಬಂಡವಾಳದ ಬಗ್ಗೆ ಯೋಚಿಸಿ. ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸುವುದು ಒಳಿತು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸರಕಾರಿ ಕೆಲಸದಲ್ಲಿರುವವರಿಗೆ ಅನಾವಶ್ಯಕ ಅಪವಾದ ಕೇಳಿಬರುತ್ತದೆ. ಆರೋಗ್ಯದ ಬಗ್ಗೆ ಗಮನ ಹರಿಸಿ.

ಸಿಂಹ ರಾಶಿ : ನಿಮ್ಮ ಇಚ್ಚೆಯಂತೆಯೇ ಕೆಲಸ ಕಾರ್ಯಗಳು ನಡೆಯುತ್ತವೆ. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಸಂಗ್ರಹವಾಗಲಿದೆ. ಆದರೆ ಖರ್ಚಿನ ಮೇಲೆ ಹಿಡಿತವಿಲ್ಲದಿದ್ದರೆ ಸಮಸ್ಯೆಯಾಗಬಹುದು, ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಮಹಿಳೆಯರಿಗೆ ಶುಭದಿನ. ಆತ್ಮೀಯರೊಂದಿಗೆ ಮನಸ್ತಾಪವಾಗದಂತೆ ಎಚ್ಚರವಹಿಸಿ.

ಕನ್ಯಾರಾಶಿ : ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಿತಶತ್ರುಗಳ ಕಾಟ ನಿಮ್ಮನ್ನು ಕಾಡಬಹುದು. ಅನ್ಯರೊಂದಿಗೆ ದ್ವೇಷ ಕಟ್ಟಿಕೊಳ್ಳಬೇಕಾಗಬಹುದು. ವೃತ್ತಿರಂಗದಲ್ಲಿ ಹಾಗೂ ಸಾಂಸಾರಿಕವಾಗಿ ಸಮಾಧಾನ ಸಿಗಲಾರದು. ಕೆಲಸದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಅವಿವಾಹಿತರಿಗೆ ಮಾತುಕತೆಗಳು ವಿಫಲವಾಗುವ ಸಾಧ್ಯತೆಯಿದೆ.

ತುಲಾರಾಶಿ : ಅನಿರೀಕ್ಷಿತ ದ್ರವ್ಯ ಲಾಭವಾಗುತ್ತದೆ. ಪ್ರಯತ್ನಿಸಿದ ಕಾರ್ಯಗಳಲ್ಲಿ ಹೆಚ್ಚು ಅನುಕೂಲವಾಗಲಿದೆ. ಆತ್ಮೀಯರ ಜೊತೆ ವೈಮನಸ್ಸು ಉಂಟಾಗಬಹುದು. ಯಾವುದೇ ಕಾರಣಕ್ಕೂ ಇತರರ ಮಾತಿಗೆ ಮರುಳಾಗಬೇಡಿ.ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ವಂಚನೆ ಗೋಚರಕ್ಕೆ ಬರಲಿದೆ. ಹಿತಶತ್ರುಗಳು ನಿಮ್ಮ ವಿಶ್ವಾಸದ ದುರುಪಯೋಗ ಪಡಿಸಿಕೊಳ್ಳಬಹುದು. ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ.

ವೃಶ್ಚಿಕ ರಾಶಿ : ಯೋಗ್ಯ ವಯಸ್ಕರಿಗೆ ವಿವಾಹ ಭಾಗ್ಯದ ಸಂಭ್ರಮ ತಂದೀತು. ಆರ್ಥಿಕವಾಗಿ ಕೂಡ ಹಂತ ಹಂತ ಅಭಿವೃದ್ಧಿ ಸಂತಸ ತರಲಿದೆ. ಪಾಲು ಬಂಡವಾಳದಲ್ಲಿ ಅರ್ಧಕ್ಕೆ ನಿಂಕ ಕೆಲಸಕಾರ್ಯ ಪುನಃ ಚಾಲನೆಗೆ ಬರಲಿದೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮಾಡುವ ಕೆಲಸ ಕೈಗೂಡದೇ ಉದ್ವೇಗಕ್ಕೆ ಒಳಗಾಗುವಿರಿ, ಅನಗತ್ಯ ಮಾನಸಿಕ ವ್ಯಥೆ ನಿಮ್ಮನ್ನು ಕಾಡಲಿದೆ. ಸಕಾರಾತ್ಮಕ ಯೋಚನೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಒಳಿತಾಗುತ್ತದೆ.

ಧನಸ್ಸು ರಾಶಿ : ಕೆಲಸ ಕಾರ್ಯಗಳಲ್ಲಿ ಒಂದಿಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಿರಿಯರ ಮಾರ್ಗದರ್ಶನದೊಂದಿಗೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದುರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ. ಹಣಕಾಸಿನ ಸಂಕಷ್ಟದಿಂದ ಸಾಲಬಾಧೆಗೆ ಸಿಲುಕುವಿರಿ. ಖರ್ಚಿನ ಮೇಲೆ ಹಿಡಿತವಿರಲಿ. ವಿರೋಧಿಗಳು ಸೋಲನ್ನು ಒಪ್ಪಿಕೊಳ್ಳಲಿದ್ದಾರೆ. ದೇಹಾರೋಗ್ಯ ಬಗ್ಗೆ ಉದಾಸೀನತೆ ತೋರದಿರಿ. ಅಡಚಣೆಗಳಿಂದಲೇ ಕಾರ್ಯಸಾಧನೆಯಾಗಲಿದೆ. ಸರಕಾರಿ ಕೆಲಸಕಾರ್ಯಗಳು ನೆರವೇರಲಿವೆ.

ಮಕರರಾಶಿ : ಅರ್ಧಕ್ಕೆ ನಿಂತು ಹೋಗಿದ್ದ ವ್ಯವಹಾರವನ್ನು ಇಂದು ಪೂರ್ಣಗೊಳಿಸುವಿರಿ. ಕ್ರಯವಿಕ್ರಯಗಳಲ್ಲಿ ಅಧಿಕ ಲಾಭವನ್ನು ಪಡೆಯುವಿರಿ ವಾಹನ ಖರೀದಿಗೆ ಇದು ಸಕಾಲ. ನೂತನ ಕೆಲಸಕಾರ್ಯಗಳನ್ನು ಮಾಡುವ ಅವಸರಿಸರ ಮಾಡಬೇಡಿ.. ಸ್ನೇಹಿತ ರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ. ಇಲ್ಲವಾದ್ರೆ ನಿಷ್ಟುರವಾದೀತು. ವೈಯಕ್ತಿಕ ವಿಚಾರಗಳಲ್ಲಿ ಜಾಗ್ರತೆ, ನಂಬಿ ಮೋಸ ಹೋಗುವ ಸಾಧ್ಯತೆ,

ಕುಂಭರಾಶಿ : ಸಾಂಸಾರಿಕವಾಗಿ ಇಷ್ಟಮಿತ್ರರ ಸಹಕಾರ ದಿಂದ ಕಾರ್ಯಸಾಧನೆಯಾಗಲಿದೆ. ಮನಸ್ಸಿನಲ್ಲಿ ಭಯ ಭೀತಿ ನಿಮ್ಮ ಕಾಡಬಹುದು. ಆತ್ಮೀಯರೊಂದಿಗೆ ಮನಃಸ್ತಾಪವಾಗುವ ಸಾಧ್ಯತೆಯಿದೆ. ವೃತ್ತಿರಂಗದಲ್ಲಿ ಮಾನಸಿಕ ಸಮಾಧಾನ ಸಿಗಲಾರದು. ಆಗಾಗ ದೇಹಾರೋಗ್ಯದಲ್ಲಿ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಲಂಕಾರಿಕ ವಸ್ತುಗಳಿಗಾಗಿ ಖರ್ಚು. ಅನಾವಶ್ಯಕ ಉದ್ವೇಗ ತಾಳದಂತೆ ಎಚ್ಚರಿಕೆ ವಹಿಸಿ.

ಮೀನ ರಾಶಿ : ಹೆಚ್ಚು ಭಾವನಾತ್ಮಕವಾಗಿರುತ್ತೀರಿ. ಸಣ್ಣ ಸಣ್ಣ ವಿಷಯಗಳು ನಿಮಗೆ ಘಾಸಿ ಮಾಡುವ ಸಾಧ್ಯತೆಯಿದೆ. ಬಂದ ಅವಕಾಶಗಳನ್ನು ಸದುಪಯೋಗಿಸಿಕೊಂಡಲ್ಲಿ ಕಾರ್ಯಸಾಧನೆಯಾಗಲಿದೆ. ಋಣಾತ್ಮಕ ಚಿಂತನೆಗಳಿಂದ ನಿಮ್ಮ ಮನಸ್ಸು ಹಾಳಾದೀತು. ಆತ್ಮಸ್ಥೈರ್ಯ, ಪ್ರಯತ್ನಬಲದಿಂದ ಮುನ್ನಡೆದಲ್ಲಿ ಕಾರ್ಯಸಾಧನೆ ಆಗಲಿದೆ. ನಂಬಿಕಸ್ಥರಿಂದ ಮೋಸ ಸಾಧ್ಯತೆಯಿರುವುದರಿಂದ ಎಚ್ಚರಿಕೆವಹಿಸಿ, ಉದ್ಯೋಗದಲ್ಲಿ ಬಡ್ತಿ, ಸತ್ಕಾರ್ಯದಲ್ಲಿ ಆಸಕ್ತಿ, ಅತೀ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪ್ರಧಾನ್ ತಾಂತ್ರಿಕ :- ವಾದಿರಾಜ್ ಭಟ್
9743666601

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular