ಭಾನುವಾರ, ಏಪ್ರಿಲ್ 27, 2025
Homedistrict NewsGanesha Idol Made By Prisoner : ಜೈಲು ಹಕ್ಕಿಗಳಿಂದ ನಿರ್ಮಾಣವಾಗಿದೆ ಪರಿಸರ ಸ್ನೇಹಿ ಗಣಪ...

Ganesha Idol Made By Prisoner : ಜೈಲು ಹಕ್ಕಿಗಳಿಂದ ನಿರ್ಮಾಣವಾಗಿದೆ ಪರಿಸರ ಸ್ನೇಹಿ ಗಣಪ :ಕಲಬುರಗಿ ಕೇಂದ್ರ ಕಾರಾಗೃಹದಿಂದ ವಿಶೇಷ ಪ್ರಯತ್ನ

- Advertisement -

ಕಲಬುರಗಿ : Ganesha Idol Made By Prisoner : ಹಿಂದೂಗಳ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿ ಸಮೀಪಿಸಲು ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಸಾರ್ವಜನಿಕವಾಗಿ ಗಣೇಶನ ಮೂರ್ತಿಯನ್ನು ಕುಳ್ಳಿರಿಸಲು ಹಾಗೂ ಮನೆಗಳಲ್ಲಿ ವಿಘ್ನವಿನಾಶಕನನ್ನು ಪ್ರತಿಷ್ಠಾಪನೆ ಮಾಡುವ ನಿಮಿತ್ತ ಈಗಾಗಲೇ ಮಾರುಕಟ್ಟೆಗಳಲ್ಲಿ ಗಣೇಶನ ಮೂರ್ತಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇತ್ತ ಕಲಬುರಗಿ ಜಿಲ್ಲೆಯ ಕೈದಿಗಳು ಸಹ ಖುದ್ದು ತಾವೇ ಗಣಪನ ಮೂರ್ತಿಯನ್ನು ತಯಾರಿಸಿ ಕೇಂದ್ರ ಕಾರಾಗೃಹದಲ್ಲಿ ಗಣೇಶೋತ್ಸವವನ್ನು ಆಚರಿಸುವ ಸಿದ್ಧತೆಯಲ್ಲಿದ್ದಾರೆ.


ಅಂದ ಹಾಗೆ ಜೈಲಿನಲ್ಲಿರುವ ಈ ಕೈದಿಗಳ ಪೈಕಿ ಯಾರೊಬ್ಬರೂ ಸಹ ಮಣ್ಣಿನ ಮೂರ್ತಿಯನ್ನು ತಯಾರಿಸುವ ಬಗ್ಗೆ ತರಬೇತಿಯನ್ನು ಪಡೆದವರಲ್ಲ. ಗಣೇಶನ ಮೂರ್ತಿ ಹೇಗೆ ಇರುತ್ತೆ ಎಂಬ ಕಲ್ಪನೆ ಇರೋದ್ರಿಂದ ಆರಕ್ಕೂ ಅಧಿಕ ಮಂದಿ ಕೈದಿಗಳು ಒಂದಾಗಿ ಪರಿಸರ ಸ್ನೇಹಿ ಗಣಪನ ನಿರ್ಮಾಣ ಕಾರ್ಯದಲ್ಲಿ ಮಗ್ನರಾಗಿದ್ದಾರೆ .ರಾಜ್ಯದ ಎಲ್ಲಾ ಕೇಂದ್ರ ಕಾರಾಗೃಹಗಳಲ್ಲಿಯೂ ಗಣೇಶನ ಉತ್ಸವ ನಡೆಯುತ್ತೆ. ಆದರೆ ಕಲಬುರಗಿ ಜೈಲಿನ ಕೈದಿಗಳು ಮಾತ್ರ 2019ರಿಂದಲೂ ತಾವೇ ಮಣ್ಣಿನ ಗಣಪನನ್ನು ತಯಾರಿಸಿ ಗಣೇಶೋತ್ಸವವನ್ನು ಆಚರಿಸುತ್ತಾರೆ.


ನಮ್ಮ ಕಾರಾಗೃಹದಲ್ಲಿ ಬಹುತೇಕ ಕೈದಿಗಳು ವಿದ್ಯಾವಂತರೆ ಆಗಿದ್ದಾರೆ. ಎಸ್​ಎಸ್​ಎಲ್​ಸಿಯಿಂದ ಹಿಡಿದು ಸ್ನಾತಕೋತ್ತರ ಪದವಿ ಪಡೆದವರೂ ಸಹ ಇಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಶಿಕ್ಷೆಯ ಈ ಸಂದರ್ಭದಲ್ಲಿ ಅವರು ಈ ರೀತಿಯ ಕರ ಕುಶಲ ಕೆಲಸಗಳನ್ನು ಕಲಿತಲ್ಲಿ ಮುಂದೆ ಅವರ ಜೀವನಕ್ಕೆ ಅನುಕೂಲವಾಗುತ್ತೆ. ಇದೇ ಉದ್ದೇಶವನ್ನು ಇಟ್ಟುಕೊಂಡೇ ನಾವು ಕೈದಿಗಳಿಗೆ ಈ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಬಿ.ಎಂ.ಕೊಟ್ರೇಶ ಹೇಳಿದರು.


ಗಣೇಶನ ಮೂರ್ತಿ ತಯಾರಿ ಕಾರ್ಯ ಒಂದೆಡೆಯಾದರೆ ಗಣೇಶೋತ್ಸವದಂದು ಭಕ್ತಿ ಗೀತೆಗಳನ್ನು ಹಾಡಲು ಸಹ ಕೈದಿಗಳು ತಯಾರಿ ನಡೆಸ್ತಾ ಇದ್ದಾರೆ. 15ಕ್ಕೂ ಅಧಿಕ ಕೈದಿಗಳು ಒಂದಾಗಿ ಕೋಟಿಗೊಬ್ಬ ಶರಣ, ಪರಶಿವನ ಹರಣ”ನಾಮವ ನುಡಿ ನಾಲಿಗೆಯಿಂದ ಸೇರಿದಂತೆ ವಿವಿಧ ಹಾಡುಗಳನ್ನು ಕಲಿಯುತ್ತಿದ್ದಾರೆ ಎಂದು ಕೇಂದ್ರ ಕಾರಾಗೃಹದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : CT Ravi’s outrage : ಸುಳ್ಳು ಹಾಗೂ ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು : ಸಿ.ಟಿ ರವಿ ವ್ಯಂಗ್ಯ

ಇದನ್ನೂ ಓದಿ : unknown letter case : ಶಿವಮೊಗ್ಗ ಅನಾಮಧೇಯ ಪತ್ರ ಕೇಸ್​ಗೆ ಬಿಗ್​ ಟ್ವಿಸ್ಟ್​ : ಅಕ್ರಮ ಸಂಬಂಧಕ್ಕಾಗಿ ನಡೆದಿತ್ತು ಹುನ್ನಾರ

4 Feet Tall Eco Friendly Ganesha Idol Made By Prisoner In Kalaburagi Central Jail

RELATED ARTICLES

Most Popular