ಧಾರವಾಡ : INS Vikrant : ಭಾರತೀಯ ನೌಕಸೇನೆಗೆ ಮೂರು ದಿನಗಳ ಹಿಂದೆಯಷ್ಟೇ ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧ ನೌಕೆ ಐಎನ್‌ಎಸ್ ವಿಕ್ರಾಂತ್ ಸೇರ್ಪಡೆಯಾಗಿದೆ. ಮೂರು ದಿನಗಳ ಹಿಂದೇ ಕೊಚ್ಚಿಯ ಶಿಪ್ ಯಾರ್ಡ್‌ನಲ್ಲಿ ಸೇವೆಗೆ ಅಡಿಯಿಟ್ಟ ವಿಕ್ರಾಂತ್ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಯನ್ನು ನಡೆಸಿಕೊಟ್ಟಿದ್ದಾರೆ. ಆದ್ರೆ ದೇಶದ ಈ ಹೆಮ್ಮೆಯ ವಿಮಾನವಾಹಕ ಯುದ್ಧ ನೌಕೆ ಹಿಂದೆ ಕನ್ನಡಿಗ ಧಾರವಾಡಿಗರೊಬ್ಬರಿದ್ದಾರೆ. ಸ್ವದೇಶಿ ನಿರ್ಮಿತ ಈ ನೌಕೆಯ ಹಿಂದೆ ಧಾರವಾಡದ ವ್ಯಕ್ತಿಯ ನೇತೃತ್ವ ಇರೋದು ಇದೀಗ ಬೆಳಕಿಗೆ ಬಂದಿದೆ. ಈ ನೌಕೆ ದಕ್ಷಿಣ ನೌಕಾ ಪಡೆ ಸುಪರ್ದಿಯಲ್ಲಿ ತಯಾರಾಗಿದ್ದು, ಈ ದಕ್ಷಿಣ ನೌಕಾ ಪಡೆಯ ಕಮಾಂಡರ್ ಆಗಿ ವೈಸ್ ಅಡ್ಮಿರಲ್ ಎಂಎ ಹಂಪಿಹೊಳಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಕರ್ನಾಟಕದ ಧಾರವಾಡದವರು ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಧಾರವಾಡ ಮೂಲದವರಾಗಿರೋ ಎಂಎ ಹಂಪಿಹೊಳಿ ಧಾರವಾಡದ ರಾಮ ನಗರ ಬಡಾವಣೆಯ ನಿವಾಸಿಯಾಗಿದ್ದಾರೆ. ಧಾರವಾಡದ ಮನೆಯೊಂದಿಗೂ ಇಂದಿಗೂ ಹಂಪಿಹೊಳಿ ಸಂಪರ್ಕದಲ್ಲಿದ್ದಾರೆ. ಧಾರವಾಡದ ಸೆಂಟ್ ಜೋಸೆಫ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿರುವ ಇವರು ಬಳಿಕ ಕಾಲೇಜ್ ಶಿಕ್ಷಣವನ್ನು ವಿಜಯಪುರ ಸೈನಿಕ ಶಾಲೆಯಲ್ಲಿ ಮಾಡಿದ್ದಾರೆ. ಮಕರಂದ ಅರವಿಂದ ಹಂಪಿಹೊಳಿ ಇವರ ಪೂರ್ಣ ಹೆಸರಾಗಿದ್ದು ಸ್ನೇಹಿತರೊಬ್ಬರಿಗೆ ಧಾರವಾಡ ಮನೆ ನೋಡಿಕೊಳ್ಳುವ ಉಸ್ತುವಾರಿ ನೀಡಿದ್ದಾರೆ.
1985ರಿಂದ ನೌಕಾ ಪಡೆಯಲ್ಲಿ ಸೇವೆ ಆರಂಭ ಮಾಡಿರುವ ಹಂಪಿಹೊಳಿ ಜಲಾಂತರ್ಗಾಮಿ ಯುದ್ಧ ಪರಿಣಿತಿಯಲ್ಲಿ ಹೆಸರುವಾಸಿಯಾಗಿದ್ದಾರೆ. ತಂದೆ ಅರವಿಂದ ಸಹ ಭಾರತೀಯ ಸೇನೆಯಲ್ಲಿದ್ದವರಾಗಿದ್ದು, ತಾಯಿ ಸಂಗೀತಾ ಹಂಪಿಗೊಳಿ ಆಕಾಶವಾಣಿ ಉದ್ಘೋಷಿಯಕಿಯಾಗಿದ್ದರು. ಅಜ್ಜ, ಅಜ್ಜಿ, ತಂದೆ-ತಾಯಿ ಸ್ಪೂರ್ತಿಯಿಂದಲೇ ಹಂಪಿಹೊಳಿ ನೌಕಾಪಡೆಗೆ ಸೇಪರ್ಡೆಯಾಗಿದ್ದಾರೆ. ಅಜ್ಜ ನಾರಾಯಣ ಹಂಪಿಹೊಳಿ ಖ್ಯಾತ ಕವಿ, ಸಮಾಜ ಸೇವಕರಾಗಿದ್ದು ಧಾರವಾಡದ ಮನೆಗೆ ವೈಸ್ ಅಡ್ಮಿರಲ್ ಹಂಪಿಹೊಳಿ ಆಗಾಗ ಬರುತ್ತಿರುತ್ತಾರೆ. ಧಾರವಾಡಕ್ಕೆ ಬಂದಾಗ ಬೈಕ್‌ನಲ್ಲೇ ಸುತ್ತಾಡೋವಷ್ಟು ಸರಳತೆಯನ್ನು ಹಂಪಿಹೊಳಿ ಮೈಗೂಡಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕನ್ನಡಿಗನ ನೇತ್ರತ್ವದಲ್ಲಿ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧ ನೌಕೆ ತಯಾರಾಗಿದೆ ಎಂಬುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಇದನ್ನು ಓದಿ : HDFC Bank:ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಸಿಹಿ ಸುದ್ದಿ, ಹೊಸದಾಗಿ ಎಸ್‌ಎಂಎಸ್ ಬ್ಯಾಂಕಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ
ಇದನ್ನೂ ಓದಿ : close the liquor shop :ಮದ್ಯದಂಗಡಿ ಬಂದ್ ಮಾಡಿಸಲು ಮದ್ಯ ಸೇವಿಸಿ ಪ್ರತಿಭಟನೆಗೆ ಕುಳಿತ ಭೂಪ
A man from Dharwad worked behind the construction of INS Vikrant