ಕಲಬುರಗಿ : Agriculture Minister BC Patil : ಕೆಲಸ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕಲಬುರಗಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಜನರೇ ಜಾಗ ಖಾಲಿ ಮಾಡಿಸಿ ಕಳಿಸಿಕೊಟ್ಟಿದ್ದಾರೆ. ಅಂತಹ ಪರಿಸ್ಥಿತಿ ನಮ್ಮ ಪಕ್ಷಕ್ಕೆ ಬಂದಿಲ್ಲ ಎಂದು ತಿರುಗೇಟು ನೀಡಿದರು.
ಇಡೀ ಭಾರತದಲ್ಲೇ ಆಗದ ಇರುವಂತಹ ಕೆಲಸಗಳನ್ನು ನಮ್ಮ ಕರ್ನಾಟಕ ಸರ್ಕಾರ ಮಾಡಿದೆ. ಕಾಂಗ್ರೆಸ್ನವರಿಗೆ ಒಂದು ರೀತಿ ಕಾಮಾಲೆ ಕಣ್ಣು. ಹೀಗಾಗಿ ಅವರಿಗೆ ಎಲ್ಲವೂ ಹಳದಿಯಾಗೇ ಕಾಣುತ್ತೆ. ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಹವಣಿಸುತ್ತಿದ್ದಾರೆ. ಆದರೆ ಅದು ಅಸಾಧ್ಯ ಎಂದು ಬಿ.ಸಿ ಪಾಟೀಲ್ ಗುಡುಗಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಪರ್ಸಂಟೇಜ್ ಆರೋಪ ಹೊರಿಸಿರುವ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಗಳಿಗೂ ಇದೇ ವೇಳೆ ಪ್ರತಿಕ್ರಿಯಿಸಿದ ಬಿ.ಸಿ ಪಾಟೀಲ್, ಯಾರೋ ಒಬ್ಬ ತಲೆಪಟ್ಟಿ ಇಲ್ಲದವನು ನೀಡುವ ಆಧಾರವಿಲ್ಲದ ಹೇಳಿಕೆಗಳಿಗೆ ಪ್ರಾಮುಖ್ಯತೆ ನೀಡಬಾರದು. ಆತ ಸಿದ್ದರಾಮಯ್ಯ ಮನೆಯ ಒಳಗೆ ಹೋಗಿ ಹೊರ ಬಂದು ಈ ರೀತಿ ಹೇಳಿಕೆ ನೀಡ್ತಾನೆ ಅಂದರೆ ನೀವೇ ಅರ್ಥ ಮಾಡಿಕೊಳ್ಳಿ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ಇಮೇಜ್ ಡೌನ್ ಆಗಿದೆ. ಅದನ್ನು ಸರಿ ಮಾಡೋಕೆ ಸಿದ್ದರಾಮಯ್ಯ ಮಾಡಿದ ಕುತಂತ್ರವಿದು ಎಂದು ಆರೋಪಿಸಿದ್ದಾರೆ.
ಕೆಂಪಣ್ಣ ಅವನ್ಯಾವ ಘನಂದಾರಿ ಲೀಡರ್..? ಆತನ ಹೇಳಿಕೆಯಲ್ಲಿ ಯಾವುದೇ ಆಧಾರವಿಲ್ಲ. ಆತ ರಾಜ್ಯದ ಎಲ್ಲಾ ಶಾಸಕರು ಇದ್ದಾರೆ ಎಂದು ಹೇಳಿದ್ದಾನೆ ಅಂದ ಮೇಲೆ ಸಿದ್ದರಾಮಯ್ಯ, ರಮೇಶ್ ಕುಮಾರ್, ಪರಮೇಶ್ವರ್ ಕೂಡ ಕಮಿಷನ್ನಲ್ಲಿ ಭಾಗಿಯಾಗಿದ್ದಾರೆ ಅಂದಗಾಯ್ತು. ಬಹುಶಃ ಆ ಮನುಷ್ಯನ ಮಾನಸಿಕ ಸ್ಥಿತಿ ಸ್ಥಿಮಿತ ಕಳೆದುಕೊಂಡಿರಬಹುದು. ಕೆಂಪಣ್ಣನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎಂದು ಟಾಂಗ್ ನೀಡಿದ್ದಾರೆ.
ಇದನ್ನು ಓದಿ : BIG BREAKING : ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಗುಲಾಂ ನಬಿ ಆಜಾದ್ ರಾಜೀನಾಮೆ
ಇದನ್ನೂ ಓದಿ : Shaheen Shah Afridi : ಕಾಲಿಗೆ ಸ್ಟ್ರೆಚರ್ ಕಟ್ಟಿಕೊಂಡಿದ್ದ ಪಾಕ್ ವೇಗಿ ಅಫ್ರಿದಿಯನ್ನು ಭೇಟಿ ಮಾಡಿದ ಕೊಹ್ಲಿ, ರಾಹುಲ್
Agriculture Minister BC Patil attacked Siddaramaiah and Kempanna