ಶಿವಮೊಗ್ಗ : children are being victimized : ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಪ್ರತಿಷ್ಠಿತ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಿಸ್ಸಿಂಗ್ ಆಟವಾಡಿದ ವಿಡಿಯೋವೊಂದು ವೈರಲ್ ಆಗಿತ್ತು. ಈ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ವಿದ್ಯಾರ್ಥಿಗಳ ಸೆಕ್ಸ್ ವಿಡಿಯೋ ಕೂಡ ದೊರಕಿದ್ದವು. ಈ ಘಟನೆ ಮಾಸುವ ಮುನ್ನವೇ ಇದೀಗ ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಶೆಯಲ್ಲಿ ತೇಲಾಡಿದ ವಿಡಿಯೋವೊಂದು ವೈರಲ್ ಆಗಿದ್ದು ಇಂದಿನ ಯುವ ಪೀಳಿಗೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅನುಮಾನ ಪಡುವಂತಾಗಿದೆ.
ಕಾಲೇಜು ಕ್ಯಾಂಪಸ್ನ ಮುಂಭಾಗದಲ್ಲಿ ವಿದ್ಯಾರ್ಥಿಗಳು ನಿಂತಿಕೊಳ್ಳಲು ಆಗದ ಪರಿಸ್ಥಿತಿಯಲ್ಲಿ ನಶೆಯಲ್ಲಿ ತೇಲಾಡಿದ್ದಾರೆ. ಮೇಲ್ನೋಟಕ್ಕೆ ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿರಬಹುದೇ ಎಂಬ ಅನುಮಾನ ಮೂಡಿದೆ. ವಿದ್ಯಾರ್ಥಿಗಳು ನಿಂತುಕೊಳ್ಳುವ ಸಾಮರ್ಥ್ಯವೂ ಇಲ್ಲದಂತೆ ತೇಲಾಡಿದ್ದಾರೆ. ಓರ್ವ ವಿದ್ಯಾರ್ಥಿಯಂತು ಫುಟ್ಪಾತ್ನಲ್ಲಿ ಮಕಾಡೆ ಮಲಗಿದ್ದಾನೆ.
57 ಸೆಕೆಂಡುಗಳ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಎರಡು ಹೆಜ್ಜೆ ಸಾಗುವುದರೊಳಗಾಗಿ ವಿದ್ಯಾರ್ಥಿ ಬೀಳುತ್ತಾನೆ. ಈತನನ್ನು ಹಿಡಿದುಕೊಳ್ಳಲು ಬಂದ ಸಹಪಾಠಿಯ ಮಾತುಗಳನ್ನೂ ಕೇಳದೇ ಆತ ನಡೆದುಕೊಂಡು ಹೋಗುತ್ತಾನೆ. ಕಾಲೇಜು ಗೇಟಿನ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು ಈ ವಿಡಿಯೋದಲ್ಲಿ ಖಾಸಗಿ ಕಾಲೇಜಿನ ಟ್ಯಾಗ್ಲೈನ್ ಕಾಣುತ್ತಿದೆ.
ಈ ಸಂಬಂಧ ಪೊಲೀಸ್ ಇಲಾಖೆ ಪ್ರಕಟಣೆಯನ್ನು ಹೊರಡಿಸಿದ್ದು ವಿದ್ಯಾರ್ಥಿಗಳು ಸಾಗರ ರಸ್ತೆಯ ಬಾರ್ನಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಬಸ್ ಹತ್ತಲು ಬಂದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಹಿಡಿಯಲಾಗಿದೆ. ವಿದ್ಯಾರ್ಥಿಗಳ ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿ ಈ ಸಂಬಂಧ ಚರ್ಚೆ ನಡೆಸಲಿದ್ದಾರೆ ಎಂದು ಪೊಲೀಸ್ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಇದನ್ನೂ ಓದಿ : BS Yediyurappa Return : ರಾಜಾಹುಲಿ ರಿಟರ್ನ್ಸ್ ಗೆ ಶಾಸಕರ ಕಸರತ್ತು: ಬಿಜೆಪಿಯಲ್ಲಿ ಸಹಿ ಸಂಗ್ರಹ ಅಭಿಯಾನ
ಇದನ್ನೂ ಓದಿ : Katrina Kaif : ಕತ್ರಿನಾ ಕೈಫ್ಗೆ ಬೆದರಿಕೆಯೊಡ್ಡಿದ್ದ ಆರೋಪಿ ಬಂಧನ: ಕತ್ರಿನಾರನ್ನು ಮದುವೆಯಾಗೋದು ನನ್ನಾಸೆ ಎಂದ ಆರೋಪಿ
children are being victimized by the drug world video goes viral