ಕೋಟ : ಕೊರೊನಾ ವೈರಸ್ ಹಾವಳಿ ದಿನ ಕಳೆದಂತೆ ಹೆಚ್ಚುತ್ತಿದೆ. ಕೋಟ ಹೋಬಳಿಯ ಕೋಡಿ, ಐರೋಡಿ, ಹಿಲಿಯಾಣ, ಯಡ್ತಾಡಿ ಸೇರಿದಂತೆ ಒಟ್ಟು 7 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರ್ಸ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಐರೋಡಿ ಗ್ರಾಮದಲ್ಲಿರುವ ಸೋಂಕಿತರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ವಿಧಾನ ಪರಿಷತ್ ಸಭಾಪತಿಗಳ ಆಪ್ತ ಸಹಾಯಕರೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೋಡಿ, ಹೆರಾಡಿಯಲ್ಲಿ ತಲಾ ಓರ್ವರಿಗೆ ಹಾಗೂ ಯಡ್ತಾಡಿ ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಕೋಟ ಸುತ್ತಮುತ್ತಲಿನ 7 ಕಡೆಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಂಕಿತರ ಮನೆಗಳನ್ನು ಕೋಟ ಕಂದಾಯ ನೀರಿಕ್ಷಕ ರಾಜು ನೇತ್ರತ್ವದಲ್ಲಿ ಮನೆಗಳನ್ನು ಸೀಲ್ ಡೌನ್ ಗೊಳಿಸಲಾಗಿದೆ.