ಶನಿವಾರ, ಏಪ್ರಿಲ್ 26, 2025
Homedistrict NewsMahisha Dasara : ಮೈಸೂರಿನಲ್ಲಿ ಮತ್ತೆ ಮಹಿಷ ದಸರಾ ಸಂಘರ್ಷ; ಬನ್ನಿ ನೋಡಿಯೇ ಬಿಡೋಣ ಎಂದು...

Mahisha Dasara : ಮೈಸೂರಿನಲ್ಲಿ ಮತ್ತೆ ಮಹಿಷ ದಸರಾ ಸಂಘರ್ಷ; ಬನ್ನಿ ನೋಡಿಯೇ ಬಿಡೋಣ ಎಂದು ಪ್ರತಾಪಸಿಂಹ ಸವಾಲು!

Mahisha Dasara : ಮಹಿಷ ದಸರಾಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪ್ರತಾಪಸಿಂಹ, ಮಹಿಷ ದಸರಾ ಹೆಸರಿನಲ್ಲಿ ಚಾಮುಂಡೇಶ್ವರಿಗೆ ನಿಂದನೆ‌ ಮಾಡುತ್ತಾರೆ ಹೀಗಾಗಿ ಇದಕ್ಕೆ ಅವಕಾಶ ಕೊಡಬಾರದು ಎಂದು ಈಗಾಗಲೇ ಒತ್ತಾಯಿಸಿದ್ದರು.

- Advertisement -

Prathap Simha; ಮೈಸೂರು: ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಈ ವರ್ಷ ಕೂಡಾ ಮಹಿಷ ದಸರಾದ ಜಟಾಪಟಿ ಶುರುವಾಗಿದೆ. ನಾಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಮಹಿಷ ದಸರಾ (Mahisha Dasara) ಆಚರಣೆ ಸಮಿತಿಯಿಂದ ಸಿದ್ದತೆ ನಡೆದಿದೆ. ಈ ವರೆಗೆ ಒಂದು ಬಾರಿ ಮಾತ್ರ ಪುಷ್ಪಾರ್ಚನೆಗೆ ಅವಕಾಶ ನೀಡಲಾಗಿದ್ದು, ಆ ಸಂದರ್ಭದಲ್ಲಿ ಚಾಮುಂಡೇಶ್ವರಿಗೆ ನಿಂದಿಸಿದ್ದ ಆರೋಪ ವ್ಯಕ್ತವಾಗಿತ್ತು. ಇದಾದ ಬಳಿಕ ಪ್ರತಿವರ್ಷವೂ ಸಂಘರ್ಷ ನಡೆಯುತ್ತಿದ್ದು, ಮಹಿಷ ಮೂರ್ತಿಗೆ ಪುಷ್ಪಾರ್ಚನೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ.

Image Credit to Original Source

ಇನ್ನು ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬನ್ನಿ ನೋಡಿಯೇ ಬಿಡೋಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣಗಳಲ್ಲಿ ಸವಾಲು ಹಾಕಿದ್ದಾರೆ. ಸಂಸದರಾಗಿದ್ದ ಅವಧಿಯಲ್ಲೂ ಮಹಿಷ ದಸರಾಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪ್ರತಾಪಸಿಂಹ, ಮಹಿಷ ದಸರಾ ಹೆಸರಿನಲ್ಲಿ ಚಾಮುಂಡೇಶ್ವರಿಗೆ ನಿಂದನೆ‌ ಮಾಡುತ್ತಾರೆ ಹೀಗಾಗಿ ಇದಕ್ಕೆ ಅವಕಾಶ ಕೊಡಬಾರದು ಎಂದು ಈಗಾಗಲೇ ಒತ್ತಾಯಿಸಿದ್ದರು.

ಇದನ್ನೂ ಓದಿ : ಕುಂದಾಪುರ : ನೀರಿನ ಬಕೆಟ್‌ಗೆ ಬಿದ್ದ 11 ತಿಂಗಳ ಮಗುವಿನ ಜೀವನ ಉಳಿಸಿದ ವೈದ್ಯ, ಅಂಬ್ಯುಲೆನ್ಸ್‌ ಚಾಲಕ

ಚಾಮುಂಡಿ‌ ಬೆಟ್ಟದಲ್ಲಿ‌ ಮಹಿಷಾ ಮಂಡಲೋತ್ಸವ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಯಾರಿಗೂ ಯಾವ ತೊಂದರೆಯಾಗದಂತೆ ಯಾರು ಬೇಕಾದರು ಅವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು, ಆದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆಗಬಾರದು ಅಷ್ಟೇ, ಇಂತಹದ್ದನ್ನು ಮಾಡಿ, ಇಂತಹದ್ದನ್ನು ಮಾಡಬೇಡಿ ಎಂದು ಹೇಳಲು ನಾವು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಎಲ್ಲಾ ಪರಿಸ್ಥಿತಿಯನ್ನೂ ಪೊಲೀಸರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದೂ ಸಚಿವ ಮಹದೇವಪ್ಪ ಹೇಳಿದ್ದಾರೆ.

Image Credit to Original Source

ಈ ಮಧ್ಯೆ ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದ ಸೆಪ್ಟೆಂಬರ್ 30ರ  ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಲಾಗಿದ್ದು, ಯಾವುದೇ ಸಭೆ, ಸಮಾರಂಭ, ರ್ಯಾಲಿ ಹಾಗೂ ಮೆರವಣಿಗೆ ನಿರ್ಬಂಧ ವಿಧಿಸಿಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಶಿರೂರು ಗುಡ್ಡ ಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಇದೇ ವೇಳೆ ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ವುವುಜೆಲಾ ತುತ್ತೂರಿ ಮಾರಾಟ ಹಾಗೂ ಬಳಕೆಗೆ ಕೂಡಾ ನಿಷೇಧ ವಿಧಿಸಲಾಗಿದೆ. ಹಬ್ಬದ ಸಮಯದಲ್ಲಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ತುತ್ತೂರಿ ಕಿರಿಕಿರಿ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರು ನಿಷೇಧಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಥಲಸ್ಸೇಮಿಯಾ ಬಾಲಕನಿಗೆ ಮೊದಲ ಬಾರಿಗೆ ಯಶಸ್ವಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್

Former MP Pratap Simha challenged Mahisha Dasara

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular