ಉಡುಪಿ : ಉಡುಪಿ ಜಿಲ್ಲೆಯಿಂದ ಆರಂಭವಾಗಿರುವ ಹಿಜಬ್ ವಿವಾದ (Hijab Controversy) ಇದೀಗ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ನಿನ್ನೆ ಹಿಜಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶವನ್ನು ತಡೆದಿದ್ದ ಪ್ರಾಂಶುಪಾಲರ ನಡೆಯನ್ನು ಖಂಡಿಸಿದ್ದ ಸಿದ್ದರಾಮಯ್ಯ ಶಾಸಕ ರಘುಪತಿ ಭಟ್ ವಿರುದ್ಧವೂ ಕುಟುಕಿದ್ದರು. ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರು ಎಂದು ಪ್ರಶ್ನೆ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಈ ವಿಚಾರವಾಗಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಪಿಯುಸಿ ಹಂತದಲ್ಲಿ ಸಮವಸ್ತ್ರ ಕಡ್ಡಾಯ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ.ಮುಸ್ಲಿಮರು ಬಹಳ ಹಿಂದಿನಿಂದಲೂ ಹಿಜಬ್ ಧರಿಸುತ್ತಿದ್ದಾರೆ.ಅವರು ಕಾಲೇಜಿಗೆ ಹಿಜಬ್ ಧರಿಸಿ ಬಂದರೆ ಅದರಿಂದ ತೊಂದರೆಯೇನು..? ಮುಸ್ಲಿಂ ಮಹಿಳೆಯರನ್ನು ವಿದ್ಯೆಯಿಂದ ವಂಚಿತಗೊಳಿಸಲು ಈ ಹುನ್ನಾರಗಳನ್ನು ಮಾಡಲಾಗುತ್ತಿದೆ. ಅಲ್ಲದೇ ಕಾಲೇಜು ಗೇಟ್ ಬಳಿ ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ತಡೆಯಲು ಕಾಲೇಜು ಪ್ರಾಂಶುಪಾಲರಿಗೆ ಯಾವ ಅಧಿಕಾರವಿದೆ..? ಮೊದಲು ಇವರನ್ನು ಕೆಲಸದಿಂದ ವಜಾ ಮಾಡಬೇಕು. ಪಿಯುಸಿ ಹಂತದಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರು ಎಂದು ಪ್ರಶ್ನೆ ಮಾಡಿದ್ದರು.
ಸಿದ್ದರಾಮಯ್ಯರ ಈ ಪ್ರಶ್ನೆಗೆ ಫೇಸ್ಬುಕ್ನಲ್ಲಿ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ. ಮಾಧ್ಯಮವೊಂದರ ವರದಿಯನ್ನು ಶೇರ್ ಮಾಡಿರುವ ಶಾಸಕ ರಘುಪತಿ ಭಟ್, ರಘುಪತಿ ಭಟ್ ಯಾರೆಂದು ಪ್ರಶ್ನಿಸುವ ಸಿದ್ದರಾಮಯ್ಯನವರೇ , ನಾನು ಜನರಿಂದ ಆಯ್ಕೆಯಾದವನು, ನಿಮ್ಮ ಹಾಗೆ ಸ್ವಕ್ಷೇತ್ರದಲ್ಲಿ ಜನರಿಂದ ತಿರಸ್ಕೃತಗೊಂಡು, ಬೇರೆಯವರ ಕ್ಷೇತ್ರದ ಮೇಲೆ ಅವಲಂಬಿತನಾದವನಲ್ಲ.ನನ್ನ ಕ್ಷೇತ್ರದ ಸಮಸ್ಯೆಗೆ ಧ್ವನಿಯಾಗುವುದು ನನಗೆ ಸಂವಿಧಾನ ಕಲ್ಪಿಸಿದ ಹಕ್ಕು. ಅದನ್ನು ನಿಮ್ಮಿಂದ ಕಲಿಯಬೇಕಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಇದನ್ನು ಓದಿ : ನಿರ್ಮಾಣ ಹಂತದ ಕಟ್ಟದ ಕುಸಿದು 7 ಮಂದಿ ಕಾರ್ಮಿಕರು ದುರ್ಮರಣ
ಇದನ್ನೂ ಓದಿ : principal stops students wearing hijab : ಹಿಜಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲ
Hijab Controversy : MLA Raghupati Bhatt’s outrage against opposition leader Siddaramaiah