ಉಡುಪಿ : ಹಿರಿಯ ಭಾಷಾವಿಜ್ಞಾನಿ ಡಾ.ಯು.ಪಿ.ಉಪಾಧ್ಯಾಯ ಇನ್ನಿಲ್ಲ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಯು.ಪಿ.ಉಪಾಧ್ಯಾಯ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಹಿರಿಯ ಭಾಷಾ ವಿಜ್ಞಾನಿಯಾಗಿರುವ ಡಾ.ಯು.ಪಿ.ಉಪಾಧ್ಯಾಯ ಅವರು ತುಳು ಭಾಷೆಗೆ ಬೃಹತ್ ನಿಘಂಟು ರಚಿಸಿದ್ದರು.

ತುಳು ಭಾಷಾ ಅಧ್ಯಯನಕ್ಕೆ ವಿಶೇಷ ಕೊಡುಗೆ ನೀಡಿದ್ದರು. ಯು.ಪಿ.ಉಪಾಧ್ಯಾಯ ಅವರ ಪತ್ನಿ ಸುಶೀಲಾ ಪಿ ಉಪಾಧ್ಯಾಯ ಕೂಡ ಹಲವಾರು ಕೃತಿಗಳನ್ನು ರಚಿಸಿದ್ದರು. ಅಲ್ಲದೇ ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ತೊಡಗಿಕೊಂಡಿದ್ದರು. ಪತ್ನಿ ಸುಶೀಲಾ ಪಿ.ಉಪಾಧ್ಯಾಯ ಅವರು 2014ರಲ್ಲಿ ನಿಧನರಾಗಿದ್ದರು. ಹಲವಾರು ಸಂಶೋಧನಾತ್ಮಕ ಕೃತಿಗಳನ್ನು ಬರೆದಿರುವ ಡಾ. ಯು ಪಿ ಉಪಾಧ್ಯಾಯ ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಹಿರಿಯ ಭಾಷಾ ವಿಜ್ಞಾನಿಯ ನಿಧನಕ್ಕೆ ಸಾಹಿತಿಗಳು, ಸಾಹಿತ್ಯ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.