ಕಲಬುರಗಿ: ನೀರಿನ ರಭಸಕ್ಕೆ ಸಿಲುಕಿ ಮರ ಹತ್ತಿ ಕುಳಿತಿದ್ದ ಯಾದಗಿರಿ ತಹಶಿಲ್ದಾರ್ ರಕ್ಷಣಾ ಕಾರ್ಯ ಯಶಸ್ವಿಯಾಗಿದೆ.

ಯಡಗಿರಿಯಿಂದ ಬೀದರ್ಗೆ ಹೊರಟಿದ್ದ ಯಾದಗಿರಿಯ ತಹಶಿಲ್ದಾರ್ ಪಂಡಿತ್ ಬಿರಾದಾರ್, ಚಿಂಚೋಳಿಯ ಗಣಾಪುರ ಬಳಿ ರಸ್ತೆ ದಾಟುವಾಗ ನೀರಿನ ರಭಸ ಹೆಚ್ಚಾದಾಗ ಕಾರಿನಿಂದ ಇಳಿದು ಮರ ಹತ್ತಿದ್ದಾರೆ.ಎರಡು ದಿನಗಳಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ರಸ್ತೆ ಸಂಪೂರ್ಣ ಮುಳುಗಿದೆ.

ನೀರಿನ ರಭಸಕ್ಕೆ ಭಯಗೊಂಡ ತಶೀಲ್ದಾರ್ ಕಾರನ್ನು ಅಲ್ಲೇ ಬಿಟ್ಟು ಪಕ್ಕದ್ದಲ್ಲೇ ಇರುವ ಮರವನ್ನು ಹತ್ತಿ ಕುಳಿತ್ತಿದ್ದಾರೆ.ಇದಾದಾ ಕೆಲವೇ ಕ್ಷಣಗಳಲ್ಲಿ ಕಾರು ಕೊಚ್ಚಿಕೊಂಡು ಹೋಗಿದೆ. ತಕ್ಷಣವೇ ಕಾರ್ಯಚಾರಣೆಗೆ ಇಳಿದ ತಾಲೂಕು ಆಡಳಿತ ತಹಶಿಲ್ದಾರ್ ಪಂಡಿತ್ ಬಿರಾದಾರ್ ಅವರನ್ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.