ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಹಾದು ಹೋಗಿರುವ ಮಂಗಳೂರು ಹೊರವಲಯದ ಕೂಳೂರು ಹಳೆ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಹೀಗಾಗಿ ಮಾರ್ಚ್ 16ರಿಂದ ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ಸೇತುಮೆಯನ್ನು ಮುಚ್ಚಲಾಗುತ್ತಿದೆ.

ಪಯಾರ್ಯ ಸೇತುವೆಯನ್ನು ದ್ವಿಮುಖ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಪರ್ಯಾಯ ಸೇತುವೆಯಲ್ಲಿ ಉಡುಪಿಯಿಂದ ಮಂಗಳೂರಿನ ಕಡೆಗೆ ಸಂಚರಿಸುವ ಲಘುವಾಹನಗಳು, ಬಸ್ಸು ಹಾಗೂ 6 ಚಕ್ರದ ವಾಹನಗಳಿಗೆ ಮಾತ್ರ ಅವಕಶ ಕಲ್ಪಿಸಲಾಗಿದೆ. ಅಲ್ಲದೇ ಬೆಂಗಳೂರಿಗೆ ತೆರಳೋ ಘನ ವಾಹನಗಳನ್ನು ಪಡುಬಿದ್ರಿ ಕಾರ್ಕಳ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.