ಮಂಗಳೂರು :ಮನೆಯ ಅಂಗಳದಲ್ಲಿ ರಾತ್ರೋ ರಾತ್ರಿ ಚಿರತೆಯೊಂದು(Leopard ) ಪ್ರತ್ಯಕ್ಷವಾದ ಶಾಕಿಂಗ್ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಮನೆಯೊಂದರಲ್ಲಿ ನಡೆದಿದೆ. ನರಿಕೊಂಬು ಗ್ರಾಮದ ನಿರ್ಮಲ್ ಎಂಬಲ್ಲಿ ರಾತ್ರಿ ಸಮಯದಲ್ಲಿ ಚಿರತೆಯೊಂದು ಅಂಗಳದಲ್ಲಿ ಕಾಣಿಸಿಕೊಳ್ಳುವ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಿಸಿ ಕ್ಯಾಮರಾ ದೃಶ್ಯಾವಳಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಗ್ರಾಮಸ್ಥರು ಮಾತ್ರವಲ್ಲದೇ ಅಕ್ಕಪಕ್ಕದ ಗ್ರಾಮದ ನಿವಾಸಿಗಳೂ ಸಹ ಕಳವಳ ಹೊರಹಾಕಿದ್ದಾರೆ. ನಿರ್ಮಲ್ ಗ್ರಾಮದ ನಿವಾಸಿ ಜಯಂತ್ ನಿರ್ಮಲ್ ಎಂಬವರಿಗೆ ಸೇರಿದ್ದ ಮನೆಗೆ ಆಹಾರ ಅರಸುತ್ತಾ ಈ ಚಿರತೆ ಕಾಡಿನಿಂದ ಬಂದಿತ್ತು ಎನ್ನಲಾಗಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮಕ್ಕೆ ಆಹಾರ ಅರಸುತ್ತಾ ಬಂದ ಚಿರತೆ #bantwal #Leopard #mangalore pic.twitter.com/gOUVBqGgYS
— News Next (@newsnext_live) December 3, 2021
ಆದರೆ ಮನೆಯಲ್ಲಿ ಶಬ್ದ ಕೇಳುತ್ತಿದ್ದಂತೆಯೇ ಹೆದರಿದ ಚಿರತೆ ಸ್ಥಳದಿಂದ ಪರಾರಿಯಾಗಿದೆ. ಜಯಂತ್ ಮನೆಯವರು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ ವೇಳೆಯಲ್ಲಿ ಈ ದೃಶ್ಯ ಗೋಚರವಾಗಿದೆ. ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಸಾವು – ನೋವುಗಳು ಸಂಭವಿಸಿಲ್ಲ. ಸಿಸಿ ಟಿವಿ ದೃಶ್ಯಾವಳಿಯ ವಿಡಿಯೋವನ್ನು ಗ್ರಾಮ ಪಂಚಾಯ್ತಿಗೆ ಸಲ್ಲಿಸುವ ಜಯಂತ್ ಕುಟುಂಬಸ್ಥರು ಚಿರತೆ ಬಂದಿದ್ದ ಬಗ್ಗೆ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯಿಂದ ಇನ್ನಷ್ಟೇ ಹೇಳಿಕೆ ಬರಬೇಕಿದೆ.
Leopard rushing from forest to village
ಇದನ್ನು ಓದಿ :omicron alert : ಉಡುಪಿಯಲ್ಲಿ ಓಮಿಕ್ರಾನ್ ಕಟ್ಟೆಚ್ಚರ : ಕೊರೊನಾ ಟೆಸ್ಟ್ ಹೆಚ್ಚಳಕ್ಕೆ ಡಿಸಿ ಕೂರ್ಮರಾವ್ ಸೂಚನೆ