ಚಿಕ್ಕಬಳ್ಳಾಪುರ : ಆಗ ತಾನೆ ಜನಿಸಿದ ನವಜಾತ ಶಿಶುವನ್ನು ಹೆತ್ತ ತಾಯಿಯೇ ನೇಣು ಬಿಗಿದು ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಸರಕಾರಿ ಆಸ್ಪತ್ರೆಯ ಶೌಚಾಲಯದ ಕಿಟಕಿಗೆ ಹೆಣ್ಣು ಮಗುವನ್ನು ನೇಣು ಹಾಕಿ ಸಾಯಿಸಲಾಗಿದೆ. ಕಿಟಕಿಯಲ್ಲಿ ಮಗು ನೇತಾಡುತ್ತಿರು ವುದು ಶೌಚಾಲಯ ಸ್ವಚ್ಛಗೊಳಿಸಲು ಬಂದ ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ. ಕೂಡಲೇ ಮಗುವಿಗೆ ಆಕ್ಸಿಜನ್ ನೀಡಿ ಚಿಕಿತ್ಸೆ ನೀಡಿದ್ದಾರೆ. ಆದರೆ ಮಗು ಬದುಕಿ ಉಳಿಯಲಿಲ್ಲ.
ಹೆಣ್ಣು ಮಗು ಅನ್ನೋ ಕಾರಣಕ್ಕೆ ಈ ಕೃತ್ಯವನ್ನು ಎಸಗಿರುವ ಶಂಕೆ ವ್ಯಕ್ತ ವಾಗಿದೆ. ಈ ಕುರಿತು ಚಿಂತಾಮಣಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಹೆತ್ತ ತಾಯಿ ಮಾಡಿದ ಘೋರ ಕೃತ್ಯಕ್ಕೆ ಕರುನಾಡು ಹಿಡಿಶಾಪ ಹಾಕುತ್ತಿದೆ.