ಸೋಮವಾರ, ಜೂನ್ 16, 2025
Homedistrict Newskambala srinivasa gowda : ಕಂಬಳದ ಉಸೇನ್​ ಬೋಲ್ಟ್​ ಖ್ಯಾತಿಯ ಶ್ರೀನಿವಾಸ ಗೌಡ ವಿರುದ್ಧ ಕ್ರಿಮಿನಲ್​...

kambala srinivasa gowda : ಕಂಬಳದ ಉಸೇನ್​ ಬೋಲ್ಟ್​ ಖ್ಯಾತಿಯ ಶ್ರೀನಿವಾಸ ಗೌಡ ವಿರುದ್ಧ ಕ್ರಿಮಿನಲ್​ ದೂರು

- Advertisement -

ಮಂಗಳೂರು : kambala srinivasa gowda : ಕಂಬಳದ ಉಸೇನ್​ ಬೋಲ್ಟ್​ ಎಂದು ಖ್ಯಾತಿಯನ್ನು ಗಳಿಸಿರುವ ಮಿಜಾರು ಶ್ರೀನಿವಾಸ ಗೌಡ ಕರಾವಳಿ ಭಾಗದವರಿಗೆ ಮಾತ್ರವಲ್ಲದೇ ರಾಜ್ಯ ಮಟ್ಟದಲ್ಲಿಯೂ ಹೆಸರು ಗಳಿಸಿದ್ದಾರೆ. ಕರಾವಳಿ ಭಾಗದ ಹೆಮ್ಮೆಯ ಗ್ರಾಮೀಣ ಕ್ರೀಡೆಯಾದ ಕಂಬಳ ಗದ್ದೆಯಲ್ಲಿ ಕೋಣಗಳನ್ನು ಹಿಡಿದು ಓಡಿದ್ದ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್​ ದಾಖಲೆಯನ್ನೇ ಮುರಿದಿದ್ದು. ಕಂಬಳ ಕ್ರೀಡೆಯಲ್ಲಿ ಸಾಲು ಸಾಲು ಸಾಧನೆಗಳನ್ನು ಮಾಡಿರುವ ಮಿಜಾರು ಶ್ರೀನಿವಾಸ ಗೌಡ ವಿರುದ್ಧ ಇದೀಗ ಕ್ರಿಮಿನಲ್​ ದೂರು ದಾಖಲಾಗಿದೆ.


ಮಂಗಳೂರಿನ ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ ಹಾಗೂ ಕೋಣಗಳ ಮಾಲೀಕ ಲೋಕೇಶ್​ ಶೆಟ್ಟಿ ಎಂಬವರು ಮಿಜಾರು ಶ್ರೀನಿವಾಸ ಗೌಡ ವಿರುದ್ಧ ಕ್ರಿಮಿನಲ್​ ದೂರನ್ನು ನೀಡಿದ್ದಾರೆ. ಉಸೇನ್​ ಬೋಲ್ಟ್​ ದಾಖಲೆಯನ್ನು ಮುರಿದಿದ್ದೇನೆಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರದ ಹಾಗೂ ಸಾರ್ವಜನಿಕರ ಹಣವನ್ನು ಶ್ರೀನಿವಾಸ ಗೌಡ ಲೂಟಿ ಮಾಡಿದ್ದಾರೆಂಬ ಆರೋಪವನ್ನು ಹೊರಿಸಲಾಗಿದೆ. ಶ್ರೀನಿವಾಸ ಗೌಡ ಜೊತೆಯಲ್ಲಿ ಕಂಬಳ ಅಕಾಡೆಮಿ ನಡೆಸುವ ಗುಣಪಾಲ ಕಡಂಬ ಹಾಗೂ ಲೇಸರ್​ ಭೀಮ್​ ಮೂಲಕ ಕಂಬಳದ ಫಲಿತಾಂಶ ನೀಡುವ ಸ್ಕೈ ವೀವ್ ಮಾಲೀಕ ರತ್ನಾಕರ ವಿರುದ್ಧವೂ ಕ್ರಿಮಿನಲ್​ ದೂರು ದಾಖಲಾಗಿದೆ.


ಕ್ರಿಮಿನಲ್​ ದೂರಿನಲ್ಲಿ ಇರುವ ಮಾಹಿತಿಯ ಪ್ರಕಾರ ಯಾವುದೇ ರೀತಿಯ ಅಧಿಕೃತ ದಾಖಲೆಯನ್ನು ಹೊಂದಿರದ ವೀವ್​ ಸಂಸ್ಥೆಯು ಶ್ರೀನಿವಾಸ ಗೌಡ ದಾಖಲೆಯ ವಿಚಾರದಲ್ಲಿ ಸುಳ್ಳು ದಾಖಲೆಗಳನ್ನು ನೀಡಿದೆ. ಉಸೇನ್​ ಬೋಲ್ಟ್​​ ದಾಖಲೆ ಮುರಿದಿದ್ದೇನೆ ಎಂದು ಹೇಳಿಕೊಂಡು ಸರ್ಕಾರ ಹಾಗೂ ವಿವಿಧ ಸಂಸ್ಥೆಗಳಿಂದ ಈ ಮೂವರು ಲಕ್ಷಾಂತರ ಹಣವನ್ನು ಪೀಕಿದ್ದಾರೆ. ಈ ಮೂಲಕ ಕಂಬಳದ ಘನತೆಗೆ ಈ ಮೂವರು ಧಕ್ಕೆ ತಂದಿದ್ದಾರೆ. ಈ ಮೂವರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಾಗದೇ ಇದ್ದಲ್ಲಿ ಕೋರ್ಟ್​ ಮೂಲಕ ಕಾನೂನು ಹೋರಾಟ ನಡೆಸೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿ : IRCTC Update: ಭಾರತೀಯ ರೈಲ್ವೆ 150ಕ್ಕೂ ಹೆಚ್ಚು ರೈಲು ಇಂದು ರದ್ದು

ಇದನ್ನೂ ಓದಿ : Sunil Shetty Praises Hardik Pandya : ಕಂಬ್ಯಾಕ್ ಸ್ಟಾರ್ ಹಾರ್ದಿಕ್ ಪಾಂಡ್ಯನನ್ನು ಹೊಗಳಿದ ಕೆ.ಎಲ್ ರಾಹುಲ್ ಭಾವೀ ಮಾವ

police complaint booked against kambala srinivasa gowda who is known as the usain bolt of kambala

RELATED ARTICLES

Most Popular