ಶನಿವಾರ, ಏಪ್ರಿಲ್ 26, 2025
HomeCoastal NewsPower Cut : ಮಂಗಳೂರು, ಉಡುಪಿಯಲ್ಲಿ ಜುಲೈ 14-16ರಂದು ಪವರ್‌ ಕಟ್‌ : ಯಾವ...

Power Cut : ಮಂಗಳೂರು, ಉಡುಪಿಯಲ್ಲಿ ಜುಲೈ 14-16ರಂದು ಪವರ್‌ ಕಟ್‌ : ಯಾವ ದಿನ ಯಾವ ಪ್ರದೇಶದಲ್ಲಿ ವಿದ್ಯುತ್‌ ಇರಲ್ಲ, ಇಲ್ಲಿದೆ ಮಾಹಿತಿ

- Advertisement -

Power Cut in Mangalore, Udupi : ಮಂಗಳೂರು/ ಉಡುಪಿ : ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ (MESCOM) ವ್ಯಾಪ್ತಿಯಲ್ಲಿ ವಿದ್ಯುತ್‌ ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡಬಿದಿರೆ, ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಮಣಿಪಾಲಯಲ್ಲಿ ಜುಲೈ 14,16ರಂದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ ದಿನದಂದು ಯಾವ ಏರಿಯಾದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

Power Cut in Mangalore, Udupi on July 14-16 Here is the information on which day there will be no power in which area
Image Credit to Original Source

ಜುಲೈ 14 ಬೆಳಗ್ಗೆ 09.00 ರಿಂದ ಸಂಜೆ 05 : 3/11 ಕೆವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆವಿ ಅಜೆಕಾರು ಫೀಡರ್ ನಲ್ಲಿ ವಿದ್ಯುತ್‌ ಮಾರ್ಗ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾರ್ಕಳ, ಹೆಬ್ರಿ, ಅಜೆಕಾರು, ಅಜೆಕಾರು ಪೇಟೆ, ಕಾಡುಹೊಳೆ, ನಂದಾರು, ಸುಕುಡಿಬೆಟ್ಟು, ಗುಡ್ದೆಯಂಗಡಿ ಮುಂತಾದ ಕಡೆಗಳಲ್ಲಿ ಬೆಳಿಗ್ಗೆ 09.00 ರಿಂದ ಸಂಜೆ 05ರ ವರೆಗೆ ವಿದ್ಯುತ್‌ ವ್ಯತ್ಯತವಾಗಲಿದೆ.

ಜುಲೈ 16 : ಮಣಿಪಾಲ 
ಜುಲೈ 16ರಂದು ಬೆಳಿಗ್ಗೆ 09.00 ರಿಂದ ಸಂಜೆ 05 ಗಂಟೆಯವರೆಗೆ ಮಣಿಪಾಲದ 110/33/11 ಕೆವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಮೂಡುಬೆಳ್ಳೆ, ಉದ್ಯಾವರ-2, ಇಂದ್ರಾಳಿ ಮತ್ತು ಪ್ರಗತಿನಗರ ಫೀಡರ್ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮರ್ಣೆ, ಮೂಡುಬೆಳ್ಳೆ, ಮಣಿಪುರ, ಕೊರಂಗ್ರಪಾಡಿ, ಕುಕ್ಕಿಕಟ್ಟೆ, ಕೆಸ್ತೂರು, ಕಟಪಾಡಿ, ಉದ್ಯಾವರ, ಹಯಗ್ರೀವನಗರ, ಇಂದ್ರಾಳಿ ರೈಲ್ವೇ ಸ್ಟೇಷನ್‌, ಲಕ್ಷ್ಮೀಂದ್ರ ನಗರ, ಪ್ರಗತಿ ನಗರ, ರಾಜೀವನಗರ, ಶಾಂತಿನಗರ ಮತ್ತು ೮೦ ಬಡಗಬೆಟ್ಟು ಪ್ರದೇಶಗಳಲ್ಲಿ ವಿದ್ಯುತ್‌ ಸ್ಥಗತಿತವಾಗಲಿದೆ.

ಉಡುಪಿ :
ಜುಲೈ 16 ರಂದು ಬೆಳಿಗ್ಗೆ 09.30 ರಿಂದ ಮಧ್ಯಾಹ್ನ 01.30ರ ವರೆಗೆ 220/10/1ಕೆವಿ ಹೆಗ್ಗುಂಜೆ ವಿದ್ಯುತ್ ಉಪಕೇಂದ್ರದಿಂದ ಹೆಗ್ಗುಂಜೆ ಮತ್ತು ನಂಚಾರು ಫೀಡರ್ ಮಾರ್ಗ, 110/11 ಕೆವಿ ಬ್ರಹ್ಮಾವರ ಉಪವಿದ್ಯುತ್‌ ಕೇಂದ್ರದಿಂದ ಚೇರ್ಕಾಡಿ ಫೀಡರ್ ಮಾರ್ಗದಲ್ಲಿ ವಿದ್ಯುತ್‌ ನಿರ್ವಹಣಾ ಕಾಮಗಾರಿ ನಡೆಯಲಿದೆ. ಇದರಿಂದಾಗಿ ಕೊಕ್ಕರ್ಣೆ, ಕಾಡೂರು, ಮೊಗವೀರ ಪೇಟೆ, ಕೆಂಜೂರು, ಹಿಲಿಯಾಣ, ಶಿರಿಯಾರ, ಮುದ್ದೂರು, ಹೇರೂರು, ಕಜ್ಕೆ, ಚಾಂತಾರು, ಹೇರೂರು, ಆರೂರು, ಕುಂಜಾಲು, ಹಲುವಳ್ಳಿ, ಚೇರ್ಕಾಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯತ್ಯಯವಾಗಲಿದೆ.

ಇದನ್ನೂ ಓದಿ : 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ನಿಮ್ಮ ಪಡಿತರ ಚೀಟಿ ಚಾಲ್ತಿಯಲ್ಲಿದ್ಯಾ ಚೆಕ್ ಮಾಡಿ

ಕಾರ್ಕಳ :
ಜುಲೈ 16 ರಂದು ಬೆಳಗ್ಗೆ 09.00 ರಿಂದ ಸಂಜೆ 05ರ ವರೆಗೆ 220/10/11 ಕವಿ ಕಮಾರ್ ವಿದ್ಯುತ್ ಕೇಂದ್ರದ ಜಾರ್ಕಳ, ಹೀರ್ಗಾಮ ಬಂಡೀಮಠ, ದುರ್ಗಾ, ಕಲ್ಯಾ, ನಿಟ್ಟೆ, ಮಿಯಾರು, ಲೆಮಿನಾ, ಇರ್ವತ್ತೂರು, ಸಾಣೂರು, ನಿಟ್ಟೆ ವಾಟರ್‌ ಸಪ್ಲೈ ಫೀಡರ್‌ ಹಾಗೂ 110/11 ಕೆವಿ ಬೆಳ್ಯಣ್ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ ನಂದಳಿಕೆ, ಬೆಳ್ಮಣ್‌, ಬೋಳ, ಮುಂಡೂರು ಫೀಡರ್‌ 33/11 ಕೆವಿ ಹೆಬ್ರಿ ಉಪವಿದ್ಯುತ್ ಸ್ಥಾವರ ವ್ಯಾಪ್ತಿಯ ಕಾರ್ಕಳ, ಅಜೆಕಾರು ನಗರ, ಎಣ್ಣೆಹೊಳೆ, ಮಂಗಿಲಾರು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಅಷ್ಟೇ ಅಲ್ಲದೇ ಕುಕ್ಕುಂಜೆ, ಹೇರ್ಮಂಡೆ, ಚಿಕ್ಕಾಲ್‌ಬೆಟ್ಟು, ಕಡಲ, ಶಿರ್ಲಾಲು, ಅಂಡಾರು, ಕಾಡುಹೊಳೆ, ಗುಡ್ಡೆಯಂಗಡಿ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಅಲ್ಲದೇ ಅಜೆಕಾರು, ಕುಕ್ಕುಂದೂರು, ಗುಂಡೆಗುಮೇರಿ, ಹೀರ್ಗಾನ, ಕಡಂಬಳ, ಕಾನಂಗಿ, ಮಲೆಬೆಟ್ಟು, ನಾರ್ಕಟ್ಟ, ಅಯ್ಯಪ್ಪನಗರ, ಪೊಲ್ಲಾರು, ಮಂಗಳಕಲ್ಲು, ಗಣಿತನಗರ, ಪಿಲಿಚಂಡಿ ಸ್ಥಾನ, ಜಾರ್ಕಳ, ಬಂಡೀಮಠ ಪೀಡರ್‌ ವ್ಯಾಪ್ತಿಯ ಬಂಗ್ಲೆಗುಡ್ಡೆ, ಜೋಡುರಸ್ತೆ, ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟು ವಾಟರ್‌ ಸಪ್ಲೈ, ಹಾಮಾಜೆ, ಕುಂಟಾಡಿ, ಬೋರ್ಗಲ್‌ ಗುಡ್ಡೆ, ಕೈರಬೆಟ್ಟು, ಕುಂಟಾಡಿ, ನಿಟ್ಟೆ ಮಸೀದಿ, ನಿಟ್ಟೆ ಪಂಚಾಯತ್‌, ದೂಪದಕಟ್ಟೆ, ಕೆಮ್ಮಣ್ಣು, ಲೆಮಿನಾ ಇಂಡಸ್ಟ್ರೀಸ್‌, ನೆಲ್ಲಿಗುಡ್ಡೆ, ಬಾರಾಡಿ, ಕಾಂತಾವರ, ಬೇಲಾಡಿ, ಕಲ್ಯಾ, ಮೀಯಾರು, ಕುಂಟಿಬೈಲು, ಬೋರ್ಕಟ್ಟೆ, ರಾಮೇರಗುತ್ತು, ರೇಂಜಾಳ, ಬೈಪಾಸ್‌ ಕಳತ್ರಪಾದೆ, ಇರ್ವತ್ತೂರು, ಸಾಣುರು, ಕುಂಟಲ್ಪಾಡಿ, ಮುರತ್ತಂಗಡಿ, ದೇಂದಬೆಟ್ಟು ಪ್ರದೇಶಗಳಲ್ಲಿ ವಿದ್ಯುತ್‌ ಕಡಿತವಾಗಲಿದೆ.

ಇದನ್ನೂ ಓದಿ : Yuvraj Singh: 42ನೇ ವಯಸ್ಸಲ್ಲೂ ಅದೇ ಖದರ್, ಅದೇ ಪವರ್: ಕಾಂಗರೂ ಬೇಟೆಯಾಡಿದ ಯುವರಾಜ !

ಇನ್ನು ಮುದ್ದಣನಗರ, ಬಾವಗುತ್ತು, ಪಡ್ಡಾಯಿಗುಡ್ಡೆ, ಪರ್ಪಲೆ, ಶುಂಗಿಗುಡ್ಡೆ, ಬೋಳ ಪಂಚಾಯತ್‌ ಚಿಲಿಂಬಿ, ಪಿಲಿಯೂರು, ಒಂಜಾರೆಕಟ್ಟೆ, ಕರೆಕೋಡಿ, ಬಾರೆಬೈಲು, ಕೆಂಪಚೋರ, ಬೆಳ್ಮಣ್‌ ಪೊಕಲ್ಲು, ಜಂತ್ರ, ಗೋಳಿಕಟ್ಟೆ, ನೀಚಾಲು, ನಂದಳಿಕೆ, ಕೆದಿಂಜೆ, ಇಟ್ಟಮೇರಿ, ಬೆಳ್ಮಣ್‌ ದೇವಸ್ಥಾನ, ಮಾವಿನಕಟ್ಟೆ, ದೇಂದೊಟ್ಟು ಪದವು, ಮುಲ್ಲಡ್ಕ್‌, ಮುಂಡೂರು, ಕೊಡಿಮಾರ್‌, ಜಾರಿಗೆ ಕಟ್ಟೆ, ನಾನಿಲ್‌ ತಾರ್‌, ಸಂಕಲಕರಿಯ, ಸಚ್ಚರಿಪೇಟೆ ಹಾಗೂ ಹೆಬ್ರಿ ತಾಲೂಕಿನ ಗುಳೆಬೆಟ್ಟು, ಮಠದ ಬೆಟ್ಟು ಹಾಗೂ ಹೆಬ್ರಿ ಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ಕಡಿತವಾಗಲಿದೆ.

Power Cut in Mangalore, Udupi on July 14-16 Here is the information on which day there will be no power in which area
Image Credit to Original Source

ಮಂಗಳೂರು :

ಜು.16ರಂದು ಬೆಳಿಗ್ಗೆ 10.00 ರಿಂದ ಸಂಜೆ 05ರ ವರೆಗೆ 110/33/11ಕೆವಿ ಜೆಪ್ಪು ಉಪಕೇಂದ್ರದಿಂದ ಹೊರಡುವ 11ಕೆವಿ ಎಕ್ಕೂರು ನ್ಯೂ ಫೀಡರ್, 11ಕೆವಿ ಬಜಾಲ್ ಹಾಗೂ 11ಕೆವಿ ಕಡೇಕಾರ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಕಾಮಗಾರಿ ನಡೆಯಲಿದೆ. ಅಲ್ಲದೇ ಜಿ.ಓ.ಎಸ್ ದುರಸ್ಥಿ ಕಾಮಗಾರಿ ನಡೆಯಲಿದ್ದು, ಈ ವ್ಯಾಪ್ತಿಯಲ್ಲಿನ ಅಳಪೆ ಮಠ, ಆದಿಮಾಯೆ, ಆಲ್ವಿನ್‌ಗೋಡ್ರೆಜ್‌, ಬಿಎಸ್‌ಎನ್‌ಎಲ್‌ ಎಕ್ಸ್‌ಚೇಂಜ್‌, ಬೊಲ್ಲ, ಬಜಾಲ್‌, ಬಜಾಲ್‌ ಸ್ಟೇಟ್‌ಬ್ಯಾಂಕ್‌ ಬಜಾಲ್‌ ಚರ್ಚ್‌, ಚಂದ್ರೋದಯ ಸುತ್ತಮುತ್ತಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಇಷ್ಟೇ ಅಲ್ಲದೇ ಎಕ್ಕೂರು ಹೈವೆ, ಕಲ್ಮಾತ್‌, ಡೇಂಜಾ, ನಾಗಬನ, ಧ್ರುವ ರೆಸಿಡೆನ್ಸಿ, ಡೆನ್ಮಾರ್ಕ್‌, ಜಪ್ಪಿನಮೊಗರು ದ್ವಾರ, ಜೆಪ್ಪಿನ ಮೊಗರು ಹೈವೆ, ಸಾಲ್ಯನ್ ರೈಸ್‌ಮಿಲ್, ಜೆ.ಎಮ್‌ರೋಡ್, ಕೆಹೆಚ್‌ ಪಕ್ಕಲಡ್ಕ, ಕೆಹೆಚ್‌ಬಿ ಪ್ರಗತಿನಗರ, ಕುಂಟಲ ಗುಡ್ಡ, ಗಣೇಶ ನಗರ, ಕಡೇಕಾರು, ಪರಂಜ್ಯೋತಿ, ಪಕ್ಕಲಡ್ಕ, ಪೆರ್ಜಿಲ, ರಾಂತೋಟ, ಸಂಗಮ, ಅಯ್ಯಪ್ಪನಗರ, ಶಾಫಿ ಕ್ಲಿನಿಕ್‌, ಸತ್ಯನಾರಾಯಣ ಭಜನಾ ಮಂದಿರ, ತಂದೊಳಿಗೆ, ತೋಚಿಲ, ತಾರ್ನೊಲ್ಯ, ವೈದ್ಯನಾಥ ಟೆಂಪಲ್‌, ಯುನಿವರ್ಸಲ್‌ ಗ್ಯಾರೇಜ್‌, ವಾಸುಕೀನಗರ, ಕಂರ್ಭಿಸ್ಥಾನ, ಕೆಗಗುರಿ, ಕೆಳಗಿನ ಮನೆ, ಯಮುನಾ ರೆಸಿಡೆನ್ಸಿ ಪ್ರದೇಶಗಳಲ್ಲಿ ವಿದ್ಯುತ್‌ ಇರೋದಿಲ್ಲ.

ಇದನ್ನೂ ಓದಿ :  ಗೃಹಲಕ್ಷ್ಮೀ ಯೋಜನೆ : ಈ ಮಹಿಳೆಯರ ಹೆಸರು ಪಟ್ಟಿಯಿಂದ ಡಿಲೀಟ್‌, ಇನ್ಮುಂದೆ ಸಿಗಲ್ಲ ಹಣ

ಜು.16ರಂದು ಬೆಳಗ್ಗೆ 10 ರಿಂದ ಸಂಜೆ 04ರ ವರೆಗೆ 110/33/11 ಕೆವಿ ಬಿಜೆ ಉಪಕೇಂದ್ರದಿಂದ ಹೊರಡುವ 11ಕೆವಿ ಬಿಜೈ ಫೀಡರ್ ನಲ್ಲಿ ಮತ್ತು ಬೆಳಿಗ್ಗೆ 10.00 ರಿಂದ ಸಂಜೆ 05.00 ಗಂಟೆಯವರೆಗೆ 33/11 ಕೆವಿ ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆವಿ ಮುತ್ತಪ್ಪ ಟೆಂಪಲ್ ಫೀಡರ್ ನಲ್ಲಿ ಜಂಪರ್ ಚೇಂಜ್‌ ಹಾಗೂ ಜಿ.ಓ.ಎಸ್ ರಿಪೇರಿ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೈನ ಕೆಎಸ್‌ಆರ್‌ಟಿಸಿ ಮುಂಭಾಗದಲ್ಲಿನ ಬಿಜೈ ಮೈನ್ ರೋಡ್, ಬಿಜೈ ಚರ್ಚ್ ರೋಡ್, ಎಂ.ಸಿ.ಎಫ್ ಕಾಲೋನಿ, ಬಿಜೈ ನ್ಯೂ ರೋಡ್, ಆನೆಗುಂಡಿ, ಗ್ಯಾಸ್ ಗೋಡೌನ್, ಸಂಕ್ಕೆಗುಡ್ಡ, ರಾಮಕೃಷ್ಣ ಭಜನಾ ಮಂದಿರ, ಬಟ್ಟಗುಡ್ಡ, ಬಿಜೆ ಮ್ಯೂಸಿಯಂ,ನೋಡುಲೇನ್, ಹೋಟೆಲ್ ಕರಾವಳಿ, ರೈಲ್ವೆ ಸ್ಟೇಷನ್‌ ರಸ್ತೆ, ಇನ್‌ಕಮ್ ಟ್ಯಾಕ್ಸ್ ಆಫೀಸ್, ಕೆ.ಎಂ.ಸಿ ಮೆಡಿಕಲ್ ಕಾಲೇಜ್, ಮಂಡೋವಿ ಶೋ ರೂಮ್, ಮಿಲಾಗ್ರಿಸ್ ರಸ್ತೆ, ಹೋಟೆಲ್ ಮೋತಿಮಹಲ್,ಹಂಪನಕಟ್ಟೆ, ಹೋಟೆಲ್ ತಾಜ್ ಮಹಲ್ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

Power Cut in Mangalore, Udupi on July 14-16: Here is the information on which day there will be no power in which area

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular