ಹಾಸನ : ವಿವಾಹಿತ ಅಕ್ಕ ತಂಗಿಯರು 17 ದಿನಗಳ ಅಂತರ ದಲ್ಲಿ ಆತ್ಮಹತ್ಯೆ ಮಾಡಿಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳಗೋಡಿನಲ್ಲಿ ನಡೆದಿದೆ.
ಸಕಲೇಶಪುರ ತಾಲೂಕಿನ ಬೆಳಗೋಡಿನ ಕಾಫಿ ತೋಟದ ಕಾರ್ಮಿಕ ಉದಯ್ ಎಂಬವರ ಮಕ್ಕಳಾದ ಸೌಂದರ್ಯ (21ವರ್ಷ) ಹಾಗೂ ಐಶ್ವರ್ಯ (19ವರ್ಷ) ಎಂಬವರೇ ಸಾವನ್ನಪ್ಪಿದ ದುರ್ದೈವಿಗಳು.
ಉದಯ್ ಅವರಿಗೆ ಒಟ್ಟು ನಾಲ್ಕು ಮಂದಿ ಹೆಣ್ಣು ಮಕ್ಕಳು. ಹಿರಿಯ ಮಗಳ ವಿದ್ಯಾಭ್ಯಾಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎರಡನೇ ಮಗಳಾದ ಐಶ್ವರ್ಯಳನ್ನು ಕಳೆದ ವರ್ಷ ತುಮಕೂರಿನ ಕುಣಿಗಲ್ ನ ಕಾವೇರಿಪುರದ ನಿವಾಸಿ ನಾಗರಾಜ್ ಎಂಬಾತನಿಗೆ ಕೊಟ್ಟ ಮದುವೆ ಮಾಡಲಾಗಿತ್ತು. ನಂತರದಲ್ಲಿ ಹಿರಿಯ ಮಗಳು ಸೌಂದರ್ಯ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾಡ್ಗೇರಿಯ ನಿವಾಸಿ ಉಮೇಶ್ ಎಂಬಾತನ ಜೊತೆ ಮದುವೆಯಾಗಿದ್ದಳು.
ಆದರೆ ಎರಡನೇ ಮಗಳು ಐಶ್ವರ್ಯ ತನ್ನ ಗಂಡನ ಮನೆಯಲ್ಲಿ ಜೂನ್ 8 ರಂದು ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೈದಿದ್ದಾರೆ. ನಂತರ ನೇಣು ಬಿಗಿದಿದ್ದಾರೆ ಅಂತಾ ಉದಯ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಇದಾದ 17ನೇ ದಿನಕ್ಕೆ ಅಕ್ಕ ಸೌಂದರ್ಯ ತನ್ನ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿಯೇ ಪತ್ತೆಯಾಗಿದೆ.
ಇದೀಗ ಪತಿ ಸೌಂದರ್ಯ ಪತಿ ಉಮೇಶ್ ಹಾಗೂ ಮನೆ ಯವರ ವಿರುದ್ದ ಕೊಲೆ ಆರೋಪ ಕೇಳಿಬಂದಿದೆ. ಈ ಕುರಿತು ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಮಲೆನಾಡಿನ ಹೆಣ್ಣುಮಕ್ಕಳ ಸಾವು ಹಲವು ಅನುಮಾನ ಗಳನ್ನು ಹುಟ್ಟುಹಾಕಿದೆ. ಕೂಲಿ ಮಾಡಿ ಮಕ್ಕಳನ್ನು ಸಾಕಿದ್ದ ತಂದೆ ಉದಯ್ ಕಣ್ಣೀರಲ್ಲೇ ಕೈತೊಳೆತ್ತಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಬಡ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ.