ಕಾರವಾರ :TEACHER BEAT TO STUDENT : ಶಾಲೆಯಲ್ಲಿ ಗುರುಗಳು ವಿದ್ಯಾರ್ಥಿಗಳು ಮಾಡಿದ ತಪ್ಪನ್ನು ತಿದ್ದಿ ಬುದ್ದಿ ಹೇಳಿದರೆ ಮಾತ್ರ ಮಕ್ಕಳು ಮುಂದೆ ಉತ್ತಮ ಪ್ರಜೆಗಳಾಗಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ಆದರೆ ಮಕ್ಕಳ ತಪ್ಪಿಗೆ ಶಿಕ್ಷೆ ನೀಡುವ ಶಿಕ್ಷಕರು ಆ ಶಿಕ್ಷೆಯನ್ನು ಸಹಿಸಿಕೊಳ್ಳಲು ವಿದ್ಯಾರ್ಥಿಗಳು ಶಕ್ತರಿದ್ದಾರಾ ಎಂಬುದನ್ನು ಮೊದಲು ಯೋಚನೆ ಮಾಡಬೇಕು. ಇಲ್ಲವಾದಲ್ಲಿ ಇದು ಬಹುದೊಡ್ಡ ವಿವಾದಕ್ಕೆ ನಾಂದಿ ಹಾಡಬಹುದು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸರ್ಕಾರಿ ಶಾಲೆಯಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿದೆ.ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಲವ್ ಲೆಟರ್ ನೀಡಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂದು ಹೋಗುವುದು ತಪ್ಪೇ ಆಗಿದ್ದರೂ ಸಹ ವಿದ್ಯಾರ್ಥಿ ಮಾಡಿದ ತಪ್ಪಿಗೆ ಶಿಕ್ಷಕಿ ನೀಡಿದ ಶಿಕ್ಷೆಯು ವಿದ್ಯಾರ್ಥಿಯ ಪೋಷಕರ ಕಣ್ಣು ಕೆಂಪಗಾಗಿಸಿದೆ.
ಆರನೇ ತರಗತಿ ವಿದ್ಯಾರ್ಥಿನಿಗೆ ವಿದ್ಯಾರ್ಥಿಯು ಲವ್ ಲೆಟರ್ ಕೊಟ್ಟಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಶಿಕ್ಷಕಿಯು ಬಾಸುಂಡೆ ಬರುವಂತೆ ವಿದ್ಯಾರ್ಥಿಗೆ ಥಳಿಸಿದ್ದಾರೆ. ಇದರಿಂದ ಕೋಪಗೊಂಡ ಪೋಷಕರು ಶಿಕ್ಷಕಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪೋಷಕರ ಆಕ್ರೋಶ ತಾರಕಕ್ಕೇರುತ್ತಿದ್ದಂತೆಯೇ ಶಿಕ್ಷಕಿಯು ಈ ವಿಚಾರವಾಗಿ ಪೋಷಕರ ಬಳಿಯಲ್ಲಿ ಕ್ಷಮೆಯಾಚಿಸಿದ್ದಾರೆ. ಶಿಕ್ಷಕಿಯ ಕ್ಷಮೆಯಾಚನೆಯ ಬಳಿಕ ಈ ಪ್ರಕರಣವು ಸುಖಾಂತ್ಯ ಕಂಡಿದೆ. ಈ ಘಟನೆಯು ಕೆಲ ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇದನ್ನು ಓದಿ : Gungun Upadhyay : ಹೋಟೆಲ್‌ನ 6ನೇ ಮಹಡಿಯಿಂದ ಜಿಗಿದು ಖ್ಯಾತ ಮಾಡೆಲ್ ಗುಂಗುನ್ ಉಪಾಧ್ಯಾಯ ಆತ್ಮಹತ್ಯೆ ಯತ್ನ
ಇದನ್ನೂ ಓದಿ : Badava Rascal : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್
TEACHER BEAT TO STUDENT IN KARWAR