ಸೋಮವಾರ, ಏಪ್ರಿಲ್ 28, 2025
Homeಮಿಸ್ ಮಾಡಬೇಡಿGood News: ಸಯಾಮಿ ಅವಳಿಗಳಿಗೆ ಸಿಕ್ಕಿತು ಸರ್ಕಾರಿ ಕೆಲಸ; ಜೀವನವನ್ನು ಧನಾತ್ಮಕವಾಗಿ ನೋಡಲು ಇವರೇ ಮಾದರಿ

Good News: ಸಯಾಮಿ ಅವಳಿಗಳಿಗೆ ಸಿಕ್ಕಿತು ಸರ್ಕಾರಿ ಕೆಲಸ; ಜೀವನವನ್ನು ಧನಾತ್ಮಕವಾಗಿ ನೋಡಲು ಇವರೇ ಮಾದರಿ

- Advertisement -

ಅವಳಿ ಜವಳಿಯ ಬಗ್ಗೆ ಕೇಳಿದ್ದೀರಿ, ಒಬ್ಬರ ಹಾಗೇ ಇನ್ನೊಬ್ಬರು ಇರುವುದನ್ನು ಕೇಳಿಯೋ ನೋಡಿಯೋ ಬಲ್ಲಿರಿ. ಸಯಾಮಿ ಮಕ್ಕಳ ಕುರಿತೂ ಆಗಾಗ ಸುದ್ದಿಯಾಗುತ್ತಲೆ ಇರುತ್ತದೆ. ಇದೂ ಸಹ ಸಯಾಮಿ ಮಕ್ಕಳ ಕುರಿತಾದ ಒಂದು ಸುದ್ದಿ. ಈ ಸಯಾಮಿ ಮಕ್ಕಳ ಸಾಧನೆ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಪಂಜಾಬ್‌ನ ಸೋಹ್ನಾ ಮತ್ತು ಮೋಹ್ನಾ ಸಯಾಮಿ ಮಕ್ಕಳು (conjoined twins Sohna and Mohna). ಅವರಿಗೆ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಶನ್ ಲಿಮಿಟೆಡ್‌ನಲ್ಲಿ ಸರ್ಕಾರಿ ಕೆಲಸ ಸಿಕ್ಕಿದೆ. ಅಂದಹಾಗೆ ಈ ಸಯಾಮಿ ಸಹೋದರರು ಐಟಿಐ ವ್ಯಾಸಂಗ (ITI) ಮಾಡಿದ್ದಾರೆ. ಸೋಹ್ನಾ ಅವರಿಗೆ ಕೆಲಸ ಸಿಕ್ಕಿದ್ದು ಅವರ ಸಯಾಮಿ ಮೋಹ್ನಾ ಕೆಲಸದಲ್ಲಿ ಅಗತ್ಯ ಸಹಕಾರ ಮತ್ತು ನೆರವು ನೀಡುತ್ತಾರೆ. ಡಿಸೆಂಬರ್ 20ರಂದು ಸೋಹ್ನಾ ಅವರು ಸರ್ಕಾರಿ ಕೆಲಸಕ್ಕೆ ಅಧಿಕೃತವಾಗಿ (Government Jobs) ಸೇರಿಕೊಂಡಿದ್ದು ಅವರಿಗೆ ಇದೀಗ ಹತ್ತೊಂಭತ್ತು ವರ್ಷಗಳಾಗಿವೆ.

ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಶನ್ ಲಿಮಿಟೆಡ್‌ನ ಜೂನಿಯರ್ ಎಂಜಿನಿಯರ್ ರವೀಂದರ್ ಕುಮಾರ್ ಹೇಳುವಂತೆ, ಸೋಹ್ನಾ ಮತ್ತು ಮೋಹ್ನಾ ತಮಗೆ ಈಹಿಂದೆ ಈ ವೃತ್ತಿಯಲ್ಲಿ ಇದ್ದ ಅನುಭವವನ್ನು ಆಧರಿಸಿ ಕೆಲಸ ಪಡೆದುಕೊಂಡಿದ್ದಾರೆ. ಉತ್ತಮ ರೀತಿಯಲ್ಲಿ ಕೆಲಸವನ್ನೂ ಅವರು ನಿರ್ವಹಿಸುತ್ತಿದ್ದಾರೆ. ತಮಗೆ ಸರ್ಕಾರಿ ಕೆಲಸ ದೊರೆತ ಕುರಿತು ಸಂತಸ ವ್ಯಕ್ತಪಡಿಸಿರುವ ಸೋಹ್ನಾ ಮತ್ತು ಮೊಹ್ನಾ ಈ ಅವಕಾಶ ಮಾಡಿಕೊಟ್ಟ ಪಂಜಾಬ್ ಸರ್ಕಾರ ಮತ್ತು ತಮಗೆ ಶಿಕ್ಷಣ ನೀಡಿ ಈಮಟ್ಟಕ್ಕೆ ಬೆಳೆಸಿದ ಪಿಂಗಲ್ವಾರಾ ಸಂಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ.

ಸಯಾಮಿ ಅವಳಿಗಳಾದ ಸೋಹ್ನಾ ಮತ್ತು ಮೋಹ್ನಾ ಜುಲೈ 14, 2003ರಲ್ಲಿ ಜನಿಸಿದರು. ಎರಡು ಹೃದಯ, ಕಿಡ್ನಿ ಮತ್ತು ಸ್ಪೈನಲ್ ಕಾರ್ಡ್‌ಗಳನ್ನು ಹೊಂದಿರುವ ಈ ಸಹೋದರರು ಕರುಳು, ಮೂತ್ರಕೋಶ ಮತ್ತು ಕಾಲುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಪಾಲಕರಿಂದ ತಿರಸ್ಕರಿಸಲಪ್ಪಟ್ಟ ಈ ಸಯಾಮಿ ಅವಳಿ ಸಹೋದರರು ದೆಹಲಿಯ ಅಖಿಲ ಭಾರತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಏಮ್ಸ್) ಆಶ್ರಯದಲ್ಲಿ ಬೆಳೆದಿದ್ದಾರೆ. ಪರಸ್ಪರ ದೇಹಗಳನ್ನು ಬೇರ್ಪಡಿಸುವುದು ಸಯಾಮಿ ಅವಳಿಗಳ ಆರೋಗ್ಯದಲ್ಲಿ ವ್ಯತ್ಯಾಸಕ್ಕೆ ಕಾರಣವಾಗಬಹುದು ಎಂದು ಈ ಇಬ್ಬರು ಒಟ್ಟಾಗಿಯೇ ಜೀವಿಸುತ್ತಿದ್ದಾರೆ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

(Amritsar conjoined twins Sohna and Mohna bag govt job in Punjab)

RELATED ARTICLES

Most Popular