ಬೆಂಗಳೂರು : ಮದ್ಯಪ್ರಿಯರೆಲ್ಲಾ ಮದ್ಯದಂಗಡಿ ಓಪನ್ ಆಯ್ತು ಅನ್ನೋ ಖುಷಿಯಲ್ಲಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ. ಆದ್ರೀಗ ಡ್ರಿಂಗ್ಸ್ ಸೇವನೆಯಿಂದಲೂ ಕೊರೊನಾ ಸೋಂಕು ಬಾಧಿಸುತ್ತೇ ಅನ್ನೋ ಅಂಶ ಬಯಲಾಗಿದೆ.

ಕೊರೊನಾ ವೈರಸ್ ಸೋಂಕು ದೇಶದಾದ್ಯಂತ ಕಾಡ್ಗಿಚ್ಚಿನಂತೆ ಹರಡೋದಕ್ಕೆ ಶುರುವಾಗುತ್ತಲೇ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿ ಮಾಡಲಾಗಿದೆ. ಮದ್ಯದಂಗಡಿಗಳಿಗೆ ಬೀಗ ಜಡಿದಿದ್ದರಿಂದಾಗಿ ಮದ್ಯಪ್ರಿಯರಿಗೆ ಸಖತ್ ನಿರಾಸೆಯಾಗಿತ್ತು. ಕೊನೆಗೂ 40 ದಿನಗಳ ಬಳಿಕ ಸರಕಾರ ಮದ್ಯದಂಗಡಿಗಳನ್ನು ತೆರೆಯಲು ಅವಕಾಶವನ್ನು ಕಲ್ಪಿಸಿದೆ.

ಹೀಗಾಗಿ ಹುಡುಗಿಯರು, ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಮದ್ಯಪ್ರಿಯರು ಡ್ರಿಂಕ್ಸ್ ಖರೀದಿ ಮಾಡುತ್ತಿದ್ದಾರೆ. ಕಳೆದೆರಡು ದಿನಗಳಲ್ಲಿ ಬರೋಬ್ಬರಿ 190 ಕೋಟಿ ಗೂ ಅಧಿಕ ಮದ್ಯ ಮಾರಾಟವಾಗಿದೆ. ಸ್ಯಾನಿಟೈಸರ್ ಬಳಕೆ ಮಾಡೋದ್ರಿಂದಾಗಿ ಕೊರೊನಾ ಹರಡೋದಿಲ್ಲ. ಸ್ಯಾನಿಟೈಸರ್ ನಿಂದ ಕೊರೊನಾ ವೈರಸ್ ಸಾಯುತ್ತವೆ. ಹೀಗಾಗಿ ಸ್ಪಿರೀಟ್ ಅಂಶವಿರುವ ಮದ್ಯ ಸೇವನೆ ಮಾಡೋದ್ರಿಂದ ಕೊರೊನಾ ಸೋಂಕು ಹರಡುವುದಿಲ್ಲ ಅಂತಾ ಹಲವರು ವಾದಿಸುತ್ತಿದ್ದಾರೆ. ಆದ್ರೆ ವಾಸ್ತವಾಂಶವೇ ಬೇರೆಯಿದೆ.

ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೇಳುವ ಪ್ರಕಾರ, ಮದ್ಯ ಸೇವನೆ ಮಾಡುವುದರಿಂದ ಕೊರೊನಾ ಯಾವುದೇ ಕಾರಣಕ್ಕೂ ದೂರವಾಗೋದಿಲ್ಲ. ಬದಲಾಗಿ ಡ್ರಿಂಕ್ಸ್ ಸೇವನೆ ಮಾಡೋದ್ರಿಂದ ದೇಹ ದುರ್ಬಲವಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅದ್ರಲ್ಲೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗೋದ್ರಿಂದಾಗಿ ಧೂಮಪಾನಿಗಳಂತೆಯೇ ಮದ್ಯವ್ಯಸನಿಗಳಿಗೂ ಕೂಡ ಕೊರೊನಾ ಸಖತ್ ಡೇಂಜರ್.

ಇನ್ನು ಮದ್ಯದಂಗಡಿಗಳಲ್ಲಿ ಡ್ರಿಂಕ್ಸ್ ಖರೀದಿ ಮಾಡುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಬಲು ಕಷ್ಟ. ಜೊತೆಗೆ ಸ್ವಚ್ಚತೆಯನ್ನು ಕಾಪಾಡೋದು ಕೂಡ ಕಷ್ಟದ ಕೆಲಸವೇ ಸರಿ. ಹೀಗಾಗಿ ಕೊರೊನಾ ಸೋಂಕು ವ್ಯಾಪಿಸುವ ಸಾಧ್ಯತೆಯ ತೀರಾ ಹೆಚ್ಚು. ಇನ್ನು ಕೊರೊನಾ ಸೋಂಕು ಮದ್ಯ ವ್ಯಸನಿಗಳಿಗೆ ಬಾಧಿಸಿದ್ರೆ ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಗುಣಮುಖರಾಗೋದು ಬಲು ಕಷ್ಟವೆನ್ನುತ್ತಿದ್ದಾರೆ. ಅಲ್ಲದೇ ಮದ್ಯವ್ಯಸನಿಗಳು ಮಾನಸಿಕ ತೊಳಲಾಟದಿಂದಲ ಬಳಲುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಡ್ರಿಂಕ್ಸ್ ಬ್ಯಾನ್ ಮಾಡುವಂತೆ ಹಲವರು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಮದ್ಯ ಸೇವನೆ ಮಾಡೋದ್ರಿಂದ ಕೊರೊನಾ ಸೋಂಕು ಬರುವುದಿಲ್ಲಾ ಅನ್ನೋ ಕಾರಣಕ್ಕೆ ಹಲವರು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಆದ್ರೆ ತಜ್ಞರು ಹೇಳುತ್ತಿರೋ ಸಂಶೋಧನಾ ವರದಿಗಳು ಆತಂಕವನ್ನು ಮೂಡಿಸುತ್ತಿವೆ. ಇನ್ಮುಂದೆ ಡ್ರಿಂಕ್ಸ್ ಮಾಡೋ ಮೊದಲು ಒಮ್ಮೆ ಯೋಚಿಸೋದು ಬಹಳ ಒಳಿತು.