ಬೆಂಗಳೂರು : ರೈತ ಮಗನೊಬ್ಬ ಎಲೆಕ್ಟ್ರಾನಿಕ್ ತ್ಯಾಜ್ಯವನ್ನ ಬಳಸಿಕೊಂಡು ಡ್ರೋನ್ ಕಂಡುಹಿಡಿದು ಜಗತ್ತಿನಾದ್ಯಂತ ಭಾರೀ ಸುದ್ದಿಯಾಗಿದ್ದ ಡ್ರೋನ್ ಪ್ರತಾಪ್ ವಿರುದ್ದ ಇದೀಗ ಅನುಮಾನಗಳು ಮೂಡುತ್ತಿದೆ. ವಿಶ್ವದಾದ್ಯಂತ ಯುವ ವಿಜ್ಞಾನಿಯೆಂದೇ ಪ್ರಖ್ಯಾತಿಯನ್ನು ಪಡೆದಿರುವ ಡ್ರೋನ್ ಪ್ರತಾಪ್ ಹಿರೋ ಅಲ್ಲಾ ಅನ್ನುವ ಸಂಗತಿಯನ್ನು ಅಂತರಾಷ್ಟ್ರೀಯ ಮಾಧ್ಯಮವೊಂದರ ತನಿಖಾ ವರದಿ ಬಟಾಬಯಲು ಮಾಡಿದೆ. ಅಷ್ಟಕ್ಕೂ ಡ್ರೋನ್ ಪ್ರತಾಪ್ ಕಳ್ಳಾಟ ಬಯಲಾಗಿದ್ದು ಹೇಗೆ ಗೊತ್ತಾ ?

ಮಂಡ್ಯದ ಮಳವಳ್ಳಿ ಮೂಲದ ಯುವ ವಿಜ್ಞಾನಿ ಎಂದೇ ಪ್ರಖ್ಯಾತಿಯಾದ ಡ್ರೋನ್ ಪ್ರತಾಪ್, ಡ್ರೋನ್ ಕಂಡು ಹಿಡಿಯುತ್ತಿದ್ದಂತೆಯೇ ರಾಜ್ಯ, ದೇಶ, ರಾಷ್ಟ್ರೀಯ ಸುದ್ದಿ ಮಾಧ್ಯಮ, ಸೋಷಿಯಲ್ ಮೀಡಿಯಾಗಳಲ್ಲಿ ಆತನನ್ನ ಹೀರೋ ಎಂದು ಬಿಂಬಿಸಲಾಗಿತ್ತು. ಕಳೆದೆರಡು ವರ್ಷಗಳಿಂದ ಕಟ್ಟು ಕಥೆ ಹೇಳಿ ನಂಬಿಸಿದ್ದ.

ಪ್ರತಾಪ್ ತಾನು ಮಳವಳ್ಳಿಯೊಂದರ ಸಣ್ಣ ಹಳ್ಳಿಯವನು, ಬಡಕುಟಂಬದ ಹಿನ್ನೆಲೆಯಿಂದ ಬಂದು ಡ್ರೋನ್ ತಯಾರಿಸಿ ದೊಡ್ಡ ಸಾಧನೆ ಮಾಡಿದ್ದೀನಿ ಎಂದಿದ್ದ. ಪ್ರತಾಪನ ಮಾತಿಗೆ ಮರುಳಾಗಿ ದೊಡ್ಡ ದೊಡ್ಡ ರಾಜಕಾರಣಿಗಳು, ಸ್ವಾಮೀಜಿಗಳು, ನಟರು, ಗಣ್ಯರು ಈತನ ಬುರುಡೆ ಸಾಧನೆಗೆ ಹ್ಯಾಟ್ಸಾಪ್ ಹೇಳಿದ್ರು.

600 ಡ್ರೋನ್‍ಗಳನ್ನ ತಯಾರಿಸಿದ್ದೀನಿ, 87 ದೇಶಗಳು ನನಗೆ ಕೆಲಸದ ಆಫರ್ ನೀಡಿವೆ, ಆದರೆ ತಾಯಿ ಸೆಂಟಿಮೆಂಟ್ ಇಂದ ನಾನು ಬೇರೆ ದೇಶಗಳಿಗೆ ಹೋಗ್ತಿಲ್ಲ ಎಂದಿದ್ದ. 2018 ರಲ್ಲಿ ಜರ್ಮನಿಯಲ್ಲಿ ಆಲ್ಬರ್ಟ್ ಐನ್ ಸ್ಟೈನ್ ಗೋಲ್ಡ್ ಮೆಡಲ್ ಸಿಕ್ಕಿದೆ, ಸಿ ಬಿಡ್ ನಲ್ಲಿ ಮೊದಲ ಬಹುಮಾನ ಲಭಿಸಿದೆ.

2017 ರಲ್ಲಿ ಜಪಾನ್ ನಲ್ಲಿ ನಡೆದ ರೋಬೊಟಿಕ್ ಎಕ್ಸಿಬಿಷನ್ ನಲ್ಲಿ ಚಿನ್ನದ ಪದಕ ಪಡೆದಿದ್ದೇನೆ, ಈ-ವೇಸ್ಟ್‍ಗಳನ್ನು ಬಳಸಿ ದೇಶದ ರಕ್ಷಣಾ ಪಡೆಗೆ ಸಹಕಾರಿಯಾಗುವ ಡ್ರೋನ್ ಕಂಡುಹಿಡಿದ್ದೀನಿ, 600ಡ್ರೋನ್‍ಗಳ ಅನ್ವೇಷಣೆಯಾಗಿದೆ ಎಂದಿದ್ದ. ಆದ್ರೀಗ ಡ್ರೋನ್ ಪ್ರತಾಪ್ ಹೇಳಿರುವುದೆಲ್ಲವೂ ಸುಳ್ಳು ಅನ್ನುವುದನ್ನು opindiaಸುದ್ದಿ ವಾಹಿನಿಯ ತನಿಖಾ ವರದಿ ಬಯಲು ಮಾಡಿದೆ.

ಡ್ರೋನ್ ಪ್ರತಾಪನ ನಿಜಬಣ್ಣ ಬಯಲಾಗಿದ್ದು, ಪೇಪೆಂಟ್ ಅರ್ಜಿ. ಹೌದು, ಡ್ರೋನ್ ಪ್ರತಾಪ್ ಸಾಧನೆ ಕೊಂಚ ಮಟ್ಟಿಗೆ ಅನುಮಾನಗಳನ್ನು ಹುಟ್ಟುಹಾಕುವಂತಿತ್ತು. ಇದೇ ಕಾರಣಕ್ಕೆ opindiaಸುದ್ದಿ ವಾಹಿನಿಯ ತನಿಖಾ ತಂಡ, ಡ್ರೋನ್ ಪ್ರತಾಪ್ ಸಂದರ್ಶನ ನಡೆಸಿತ್ತು. ಈ ವೇಳೆಯಲ್ಲಿ ಇಂಟಲೆಕ್ಷ್ಯುವಲ್ ಪ್ರಾಪರ್ಟಿ ರೈಟ್ಸ್ ಕುರಿತು ಪ್ರಶ್ನೆ ಮಾಡಿದೆ. ಟ್ರೇಡ್ ಮಾರ್ಕ್ ಇದೆಯಾ ಎಂದು ಪ್ರಶ್ನಿಸಿದಾಗ, ವ್ಯಾಜ್ಯ ನಡೆಯುತ್ತಿದೆ ಅಂತಾ ಪ್ರತಾಪ್ ಉತ್ತರವನ್ನು ಕೊಟ್ಟಿದ್ದ. ತಾನು ಡ್ರೋನ್ ಪೇಟೆಂಟ್ ಪಡೆಯಲು ಸಲ್ಲಿಸಿರುವ ದಾಖಲೆಗಳನ್ನು ನೀಡಲು ನಿರಾಕರಿಸಿದ್ದಾನೆ. ಈ ಕುರಿತು ತನಿಖೆ ಶುರುಮಾಡಿದ ಸುದ್ದಿವಾಹಿನಿ ಇದೀಗ ಡ್ರೋನ್ ಪ್ರತಾಪ್ ನ ನಿಜ ಬಣ್ಣವನ್ನು ಬಯಲು ಮಾಡಿದೆ.