ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈ ವಾರದ ಕೊನೆಯಲ್ಲಿ ಅಂದರೆ ಆಗಸ್ಟ್ 7 ರಂದು ತನ್ನ ಮುಂದಿನ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಅದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ತನ್ನ ಲಾಂಚ್ ವ್ಯೂ ಗ್ಯಾಲರಿಯಿಂದ ಉಡಾವಣೆಯನ್ನು ವೀಕ್ಷಿಸಲು ನಾಗರಿಕರನ್ನು ಆಹ್ವಾನಿಸಿದೆ. ಆಸಕ್ತರು ಈ ಕಾರ್ಯಕ್ರಮ ವೀಕ್ಷಿಸಲು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ISRO ತನ್ನ SSLV-D1/EOS-02 ಮಿಷನ್ ಅನ್ನು ಆಗಸ್ಟ್ 7, 2022 ರಂದು ಭಾನುವಾರ ಬೆಳಿಗ್ಗೆ 9:18 ಕ್ಕೆ ಪ್ರಾರಂಭಿಸಲಿದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಸಣ್ಣ ಉಪಗ್ರಹ ಉಡಾವಣಾ ವಾಹನ (Small Satellite Launch Vehicle–SSLV) ದ ಚೊಚ್ಚಲ ಹಾರಾಟವಾಗಿದೆ. ಉಡಾವಣೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ನಡೆಸಲಿದೆ ಎಂದು ಪ್ರಕಟಿಸಿದೆ.
ಆಗಸ್ಟ್ 7ರ ಉಡಾವಣೆಯ ಬಗ್ಗೆ :
ISRO ತನ್ನ SSLV-D1/EOS-02 ಮಿಷನ್ ಅನ್ನು ಭಾನುವಾರ, ಆಗಸ್ಟ್ 7, 2022 ರಂದು ಬೆಳಿಗ್ಗೆ 9:18 ಕ್ಕೆ (IST) ಪ್ರಾರಂಭಿಸಲಿದೆ. ಈ ಮಿಷನ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ಉಡಾವಣೆಯಾಗಲಿದೆ ಎಂದು ಇಸ್ರೋ ಟ್ವೀಟ್‌ನಲ್ಲಿ ತಿಳಿಸಿದೆ. SDSC ಯ ಲಾಂಚ್ ವ್ಯೂ ಗ್ಯಾಲರಿಯಿಂದ ಉಡಾವಣೆಯನ್ನು ವೀಕ್ಷಿಸಲು ಜನರು https://lvg.shar.gov.in/VSCREGISTRATION/index.jsp ಗೆ ಹೋಗಿ ರಜಿಸ್ಟರ್ ಮಾಡಬಹುದು.
The launch of the SSLV-D1/EOS-02 Mission is scheduled for Sunday, August 7, 2022, at 9:18 am (IST) from Satish Dhawan Space Centre (SDSC), Sriharikota. ISRO invites citizens to the Launch View Gallery at SDSC to witness the launch. Registration is open at https://t.co/J9jd8yDs4a pic.twitter.com/rq37VfSfXu
— ISRO (@isro) August 1, 2022
SSLV-D1/EOS-02 ಮಿಷನ್ :
ಇದು SSLV-D1 ಉಡಾವಣಾ ವಾಹನದ ಮೊದಲ ಪ್ರದರ್ಶನ ಹಾರಾಟವಾಗಿದೆ. SSLV ಅಥವಾ ಸಣ್ಣ ಉಪಗ್ರಹ ಉಡಾವಣಾ ವಾಹನ, ಇದು ISRO ಅಭಿವೃದ್ಧಿಪಡಿಸಿದ ಸಣ್ಣ-ಲಿಫ್ಟ್ ಉಡಾವಣಾ ವಾಹನವಾಗಿದೆ. SSLV ಯು ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯನ್ನು ಹೊಂದಿದೆ. ಭವಿಷ್ಯದಲ್ಲಿ ಶ್ರೀಹರಿಕೋಟಾದಲ್ಲಿ ಸ್ಮಾಲ್ ಸ್ಯಾಟಲೈಟ್ ಲಾಂಚ್ ಕಾಂಪ್ಲೆಕ್ಸ್ (SSLC) ಎಂದು ಕರೆಯಲ್ಪಡುವ ಒಂದು ಮೀಸಲಾದ ಲಾಂಚ್ ಪ್ಯಾಡ್ ಅನ್ನು ಇದು ಹೊಂದಿರುತ್ತದೆ. ಇದಕ್ಕಾಗಿ ತಮಿಳುನಾಡಿನ ಕುಲಶೇಖರಪಟ್ಟಣಂ ಬಳಿ ಉಡಾವಣಾ ಸ್ಥಳವನ್ನು ಮೀಸಲಿಡಲಾಗಿದೆ.
ತನ್ನ ಮೊದಲ ಹಾರಾಟದಲ್ಲಿ, ಭಾರತೀಯ ಭೂ ವೀಕ್ಷಣಾ ಮೈಕ್ರೋಸ್ಯಾಟಲೈಟ್ EOS-02 ಮತ್ತು 750 ಮಹಿಳಾ ಪರಿಣಿತರು ನಿರ್ಮಿಸಿದ AzaadiSAT ಎಂಬ ಉಪಗ್ರಹದ ಪೇಲೋಡ್ ಅನ್ನು ಹೊತ್ತೊಯ್ಯುತ್ತದೆ ಎಂಬುದು ವಿಶೇಷವಾಗಿದೆ.
ಇದನ್ನೂ ಓದಿ : Aadhaar-Voter ID Link : ಚುನಾವಣಾ ಆಯೋಗದಿಂದ ರಾಷ್ಟ್ರವ್ಯಾಪಿ ಆಧಾರ್-ವೋಟರ್ ಐಡಿ ಲಿಂಕ್ ಅಭಿಯಾನ ಪ್ರಾರಂಭ!
ಇದನ್ನೂ ಓದಿ : IRCTC Indian Railways Update:ಭಾರತೀಯ ರೈಲ್ವೇಯಿಂದ 187 ರೈಲುಗಳ ರದ್ದು; ಸಂಪೂರ್ಣ ಮಾಹಿತಿ ಇಲ್ಲಿದೆ
(How to watch a rocket launching by ISRO? For that register your name)