ಉತ್ತರಕೊರಿಯಾದಲ್ಲಿ ಯಾವ ಯಾವೆಲ್ಲ ರೀತಿಯ ಆದೇಶ ಬರುತ್ತೆ ಅಂತಾ ಹೇಳೋಕೆ ಆಗಲ್ಲ. ಇಲ್ಲಿ ಜನರು ಪ್ರತಿ ಕ್ಷಣವೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕು .ಏಕೆಂದರೆ ಯಾವಾಗ ಉತ್ತರ ಕೊರಿಯಾ ಸರ್ಕಾರ ಏನು ಹೇಳುತ್ತೆ ಅನ್ನೋದನ್ನೇ ಊಹಿಸಲು ಆಗೋದಿಲ್ಲ. ಉತ್ತರ ಕೊರಿಯಾ ಸರ್ವಾಧಿಕಾರಿ ಧರಿಸದಂತೆ ಬಟ್ಟೆ ಹಾಕೋ ಆಗಿಲ್ಲ. ಅವರು ಮಾಡಿದಂತೆ ಕೇಶ ವಿನ್ಯಾಸ ಮಾಡಿಕೊಳ್ಳುವಂತಿಲ್ಲ. ಹೀಗೆ ಒಂದಾ ಎರಡಾ ಇಲ್ಲಿನ ನಿರ್ಬಂಧಗಳ ಪಟ್ಟಿಯನ್ನು ಕೇಳುತ್ತಾ ಹೋದರೆ ನಿಮಗೆ ತಲೆ ಸುತ್ತು ಬರೋದು ಗ್ಯಾರಂಟಿ..!(North Koreans banned from laughing)
ಇದೀಗ ಈ ಎಲ್ಲಾ ವಿಚಾರಗಳು ಯಾಕೆ ಬಂತು ಅಂದುಕೊಂಡ್ರಾ..? ಇದಕ್ಕೂ ಕಾರಣವಿದೆ. ಈ ದೇಶದಲ್ಲಿ ಇದೀಗ 10 ದಿನಗಳ ಮಟ್ಟಿಗೆ ಹೊಸ ಕಾನೂನು ಜಾರಿಗೆ ಬಂದಿದೆ. ಈ ಕಾನೂನಿನ ಪ್ರಕಾರ ಉತ್ತರ ಕೊರಿಯಾದಲ್ಲಿ ವಾಸವಿರುವ ಪ್ರಜೆಗಳು 10 ದಿನಗಳ ಕಾಲ ನಗಲೇಬಾರದಂತೆ..!
ಕೇವಲ ನಗೋದು ಮಾತ್ರವಲ್ಲ, ಇಲ್ಲಿನ ಜನ 10 ದಿನಗಳ ಕಾಲ ಜನ್ಮದಿನಾಚರಣೆ ಆಚರಿಸುವಂತಿಲ್ಲ, ಯಾರದ್ದೂ ಅಂತ್ಯಕ್ರಿಯೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ.ಮದ್ಯಪಾನ ಮಾಡುವಂತಿಲ್ಲ ದಿನಸಿ ಅಂಗಡಿಗಳಲ್ಲಿ ಯಾವುದೇ ವಸ್ತು ಖರೀದಿಸುವಂತಿಲ್ಲ ಹೀಗೆ ಸಾಕಷ್ಟು ವಿಚಾರಗಳಿಗೆ ನಿರ್ಬಂಧವನ್ನು ಹೇರಿ ಆದೇಶವನ್ನು ಹೊರಡಿಸಲಾಗಿದೆ. ಉತ್ತರ ಕೊರಿಯಾದ ಮಾಜಿ ಸರ್ವಾಧಿಕಾರಿ ಕಿಮ್ ಜಾಂಗ್ ಇಲ್ ಎಂಬವರ 10ನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ 10 ದಿನಗಳ ಶೋಕಾಚರಣೆಯ ಅಂಗವಾಗಿ ಈ ಚಿತ್ರವಿಚಿತ್ರ ಕಾನೂನುಗಳು ಜಾರಿಗೆ ಬಂದಿವೆ.
ಡಿಸೆಂಬರ್ 17 ಅಂದರೆ ಇಂದಿಗೆ ಕಿಮ್ ಜಾಂಗ್ ಇಲ್ ಸತ್ತು 10 ವರ್ಷಗಳು ಪೂರೈಸಿವೆ. ಹೀಗಾಗಿಯೇ ಈ ಎಲ್ಲಾ ಶೋಕಾಚರಣೆ ನಿಯಮಗಳು ಜಾರಿಯಲ್ಲಿವೆ. ಯಾರಾದರೂ ಸರ್ಕಾರದ ಈ ನಿಯಮಾವಳಿಗಳನ್ನು ಉಲ್ಲಂಘಿಸಿದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.
ಇದು ಮಾತ್ರವಲ್ಲದೇ ಕಿಮ್ ಜಾಂಗ್ ಇಲ್ ಪುಣ್ಯಸ್ಮರಣೆಯ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅವರ ಕಲೆಯ ಪ್ರದರ್ಶನ , ಫೋಟೋಗ್ರಫಿ, ಸಂಗೀತ ಕಛೇರಿ ಅಷ್ಟೇ ಏಕೆ ಅವರ ಹೆಸರಿನಲ್ಲಿ ಕಿಮ್ಜೊಂಗ್ಲಿಯಾ ಎಂಬ ಕಾರ್ಯಕ್ರಮ ಪ್ರದರ್ಶನ ಮಾಡಲಾಗಿದೆ.
North Koreans banned from laughing for 10 days to mark Kim Jong Il’s 10th death anniversary
ಇದನ್ನು ಓದಿ : Bill Against family politics : ಕುಟುಂಬ ರಾಜಕಾರಣದ ವಿರುದ್ಧ ಮಸೂದೆ ತನ್ನಿ: ಕೈ, ಕಮಲ ಪಾಳಯಕ್ಕೆ ಎಚ್.ಡಿ.ರೇವಣ್ಣ ಸವಾಲು
ಇದನ್ನೂ ಓದಿ : Pet Dog Died :ಪೊಲೀಸರ ವಿರುದ್ಧ ಸಾಕು ನಾಯಿ ಕೊಂದ ಆರೋಪ ಹೊರಿಸಿದೆ ಈ ಕುಟುಂಬ..!