- ವಂದನ ಕೊಮ್ಮುಂಜೆ
ಪ್ರೀತಿ, ಇದರ ವ್ಯಾಪ್ತಿಗೆ ಬರದವರೇ ಇರಲಿಕ್ಕಿಲ್ಲ. ಮನಸ್ಸು ಮನಸ್ಸಿನ ನಡುವಿನ ಭಾವನೆ ಇದು. ಇದರ ಅನುಭವೇ ಸುಂದರ. ಪ್ರೀತಿ ಯಾವಾಗ ಹುಟ್ಟುತ್ತೆ ಹೇಗೆ ಹುಟ್ಟುತ್ತೆ ಅಂತ ಗೊತ್ತಿಲ್ಲ ಅಂತಾರೆ. ಆದ್ರೆ ಕಾಲಕ್ಕೆ ತಕ್ಕಂತೆ ಪ್ರೀತಿ ಬದಲಾಗದಿದ್ರು, ಅದರ ಅಭಿವ್ಯಕ್ತಿ ಬದಲಾಗಿದೆ. ಮೊದಲು ಕದ್ದು ಮುಚ್ಚಿ ನೋಡಿ ಮೆಚ್ಚಿ ಪ್ರೀತಿ ಮಾಡುತ್ತಿದ್ರು. ಈಗ ಪ್ರೀತಿಯನ್ನು ದೈರ್ಯವಾಗಿ ಹೇಳಿ ಜೊತೆಗಿರುತ್ತಾರೆ.

ಈಗ ಲೈಫ್ ಪಾಟ್ನರ್ ಗಳನ್ನು ಸೆಲೆಕ್ಟ್ ಮಾಡೋಕು ಅಂದ್ರೂ ಆಪ್ ಇದೆ. ಲವ್ ಪಾಟ್ನರ್ ಸೆಲೆಕ್ಟ್ ಮಾಡಲೂ ಡೇಟಿಂಗ್ ಸೈಟ್ ಗಳಿವೆ
ಆದ್ರೆ ಇಲ್ಲೊಬ್ಬನಿಗೆ ಮಾತ್ರ ಇದ್ಯಾವು ವರ್ಕೌಟ್ ಆಗಿಲ್ಲ. ಹೀಗಾಗಿ ಆತ ತನ್ನನ್ನೇ ತಾನು ಫೇಸ್ ಬುಕ್ ನಲ್ಲಿ ಮಾರಿಕೊಂಡಿದ್ದಾನೆ . ಹೌದು ಈತನ ಹೆಸರು. ಅಲನ್ ಇಯಾನ್ ಕ್ಲೇಟನ್. ಯುಎಸ್ ಮೂಲದ ಈತನಿಗೆ 32ವರ್ಷ. ಆದ್ರೂ ಆತನಿಗೆ ಯಾವುದೇ ಗರ್ಲ್ ಪ್ರೆಂಡ್ ಅಥವಾ ಸಂಗಾತಿ ಇಲ್ಲ. ಹಾಗಂತ ಆತ ಸಂಗಾತಿಯನ್ನು ಹುಡುಕೋಕೆ ಪ್ರಯತ್ನ ಪಡಲಿಲ್ಲ ಅಂತ ಅಲ್ಲ. ಆತ ಪ್ರಯತ್ನ ಪಟ್ಟಿದ್ರೂ ಆತನಿಗೆ ಯಾವುದೇ ಹುಡುಗಿ ಸಿಕ್ಕಿಲ್ಲ. ಅದು ಯಾಕಂತ ಆತನಿಗೂ ಗೊತ್ತಿಲ್ಲ.

ಆತ ಹೇಳೋ ಪ್ರಕಾರ ಆತ 10 ವರ್ಷಗಳಿಂದ ಹಲವು ಡೇಟಿಂಗ್ ಸೈಟ್ ಗಳನ್ನು ಬಳಸಿದ್ದಾನೆ. ಹಲವಾರು ಹುಡುಗಿರೂ ಆತನ ಬಳಿ ಚಾಟ್ ಮಾಡಿದ್ದಾರೆ. ಆದ್ರೂ ಕ್ಲೇಟನ್ ನನ್ನು ಯಾರು ಡೇಟ್ ಗೆ ಕರೆದಿಲ್ಲವಂತೆ. ಟಿಂಡರ್ ನಂತಹ ಡೇಟಿಂಗ್ ಆಪ್ ಗಳನ್ನೂ ಬಳಸಿದ್ದ ಆದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಇದನ್ನು ಬ್ಯಾಡ್ ಲಕ್ ಅಂತ ಅಂದುಕೊಂಡಿದ್ದಾನೆ ಕ್ಲೇಟನ್. ಹೀಗಾಗಿ ಬೇಸತ್ತ ಕ್ಲೇಟನ್ ಹೊಸ ಉಪಾಯ ಮಾಡಲು ನಿರ್ಧರಿಸಿದ್ದಾನೆ. ಫೇಸ್ ಬುಕ್ ನಲ್ಲಿ ತನ್ನನ್ನು ಮಾರಟಕ್ಕಿದ್ದೇನೆ ಅಂತ ಪೋಸ್ಟ್ ಮಾಡಿದ್ದಾನೆ.

ಮೂಲತಃ ಲಾರಿ ಚಾಲಕರಾಗಿರೋ ಸೆಪ್ಟೆಂಬರ್ 10ರಂದು ಪೇಸ್ ಬುಕ್ ನ ‘ಐಟಮ್ಸ್ ಫಾರ್ ಸೇಲ್’ ಅನ್ನೋ ಪೇಜ್ ನ ಅಡಿಯಲ್ಲಿ ತಮ್ಮನ್ನು ಸೇಲ್ ಮಾಡುವ ಪೋಸ್ಟ್ ಮಾಡಿದ್ದಾನೆ. ಇದರ ಜೊತೆಗೆ ಹಲವು ಪೋಟೋ ಗಳನ್ನು ಅಪ್ಲೋಡ್ ಮಾಡಿರುವ ಈತ ಜೊತೆಯಲ್ಲೇ “ಫ್ರೀಅಂತಾನು ಬರೆದಿದ್ದಾನೆ.

ಪೋಸ್ಟ್ ನಲ್ಲಿ ಕಾಮಿಡಿ ವಾಕ್ಯಗಳನ್ನು ಬರೆದಿರೋ ಕ್ಲೇಟನ್ ಹೀಗೆ ಬರೆದುಕೊಂಡಿರುವ ಈತ “ಹಲೋ ಹೆಂಗಸರೇ. ನಾನು ಟೀಕೆ ಅಲನ್ 30 ವರ್ಷ ವಯಸ್ಸಿನವನು. ನಾನು ಹೆಚ್ಚು ಮಾತನಾಡುವಾಕೆಯ ನಿರೀಕ್ಷೆಯಲ್ಲಿದ್ದೇನೆ. ಯಾಕಂದ್ರೆ ನನಗೆ ಹಲವು ವಿವಾಹದ ಆಮಂತ್ರಣ ಬಂದಿದ್ದು ಅದಕ್ಕೆ ಒಬ್ಬನೇ ಹೋಗಲು ಬಯಸುವುದಿಲ್ಲ. ನಾನು ಡೇಟಿಂಗ್ ಸೈಟ್ಗಳಲ್ಲಿ ಪ್ರಯತ್ನಿಸಿದೆ. ಆದ್ರೆ ಯಾವುದೇ ಅದೃಷ್ಟವಿಲ್ಲ.

ಹೀಗಾಗಿ ಹೀಗೆ ಪ್ರಯತ್ನಿಸುತ್ತಿದ್ದೇನೆ ಎಂದು ಕ್ಲೇಟನ್ ಕಾರ್ಯಕ್ಕೆ ತಂದೆ ಕೂಡಾ ಬೆಂಬಲ ನೀಡಿದ್ದಾರೆ. ಮಗನಿಗೆ ಒಂದು ಚಾನ್ಸ್ ಕೊಡಿ ಅಂತ ಕೇಳ್ತಿದ್ದಾರೆ. ಒಟ್ಟಾರೆ ಈ ಪೋಸ್ಟ್ ವೈರಲ್ ಆಗಿದ್ದು ಕ್ಲೇಟರ್ ಹೀಗಾದ್ರೂ ಸಂಗಾತಿ ಸಿಗ್ಲಿ ಅಂತ ಹಾರೈಸುತ್ತಿದ್ದಾರೆ