ಮಂಗಳೂರು : ಮದುವೆಯ ಮಂಟಪಕ್ಕೆ ವಧುವಿನ ಆಗಮನ ಸಂಭ್ರಮದ ಕ್ಷಣ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ನಾಚಿಕೊಂಡು ಕಾಲಿಡ್ತಾರೇ… ಆದರೇ ಇಲ್ಲೊಬ್ಬ ಹೆಣ್ಣುಮಗಳು ಸಖತ್ ರಾಯಲ್ ಆಗಿ ಬುಲೆಟ್ ಏರಿ ಬರೋ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ

ಮಂಗಳೂರಿನ ಸುರತ್ಕಲ ನಿವಾಸಿ ಪೂಜಾ ಎಂಬಾಕೆಯೇ ಹೀಗೆ ಕಪ್ಪು ಚಸ್ಮಾ ತೊಟ್ಟು, ಬುಲೆಟ್ ಏರಿ ರಗಡ್ ಲುಕ್ ನಲ್ಲಿ ಕಲ್ಯಾಟ ಮಂಟಪಕ್ಕೆ ಬರೋ ಮೂಲಕ ಎಲ್ಲರನ್ನು ಸೆಳೆದಿದ್ದಾರೆ.
ಪೂಜಾಗೆ ಬುಲೆಟ್ ಅಂದ್ರೇ ತುಂಬ ಇಷ್ಟವಂತೆ. ಹೀಗಾಗಿ ಮದುವೆಯಲ್ಲೂ ಬುಲೆಟ್ ಬಳಸಲು ನಿರ್ಧರಿಸಿದ ಪೂಜಾ ಮದುವೆ ಮಂಟಪಕ್ಕೆ ಬರಲು ಅಲಂಕೃತ ಕಾರ್ ಏರೋ ಬದಲು ಬುಲೆಟ್ ಕಿಕ್ ಹೊಡೆದು ರೈಡಿಂಗ್ ಮಾಡ್ಕೊಂಡೆ ಮಂಟಪ ತಲುಪಿದ್ದಾರೆ.

ಕಾಸರಗೋಡು ಮೂಲದ ಮ್ಯಾಚ್ ಪ್ರೇಮ್ ವೆಡ್ಡಿಂಗ್ ಪೋಟೋಶೂಟ್ ಕಂಪನಿ ಈ ಡಿಫರೆಂಟ್ ಮ್ಯಾರೇಜ್ ಶೂಟ್ ನಡೆಸಿದ್ದು ವೀಡಿಯೋ ಸಖತ್ ವೈರಲ್ ಆಗಿದೆ.
ಸುರತ್ಕಲ್ ಮೂಲದ ಪೂಜಾ ವಿವಾಹ ನವೆಂಬರ್ 4 ರಂದು ಆಕಾಶ್ ಜೊತೆ ನಡೆದಿದ್ದು, ನವದಂಪತಿಗಳ ಮದುವೆ ಹೈಲೈಟ್ಸ್ ನಲ್ಲಿ ಬುಲೆಟ್ ವಿಡಿಯೋ ಸಖತ್ತಾಗಿಮೂಡಿಬಂದಿದೆ.

ಪೂಜಾ ಸೀರೆ, ಒಡವೆ, ಮಲ್ಲಿಗೆಜಡೆಯ ಅಲಂಕಾರದಲ್ಲಿ ಯಾವ ಹುಡುಗನಿಗೂ ಕಮ್ಮಿ ಇಲ್ಲದಂತೆ ಬುಲೆಟ್ ಓಡಿಸಿರೋ ವೀಡಿಯೋ ನೋಡಿ ನೆಟ್ಟಿಗರು ಕೂಡಾ ಶಹಬ್ಬಾಸ್ ಅಂತಿದ್ದಾರೆ.