ಇತ್ತೀಚಿನ ದಿನಗಳ ಪೋಟೋ ಶೂಟ್ ಕ್ರೇಜ್ ಆಗಿದೆ. ನವದಂಪತಿಗಳ ಪ್ರೀ ವೆಡ್ಡಿಂಗ್ ಪೋಟೋ ಶೂಟ್ ಬಗ್ಗೆ ಹೇಳೋದೆ. ಆದ್ರೀಗ ವೃದ್ದ ದಂಪತಿಗಳ ಪೋಟೋ ಶೂಟ್ ಸಾಮಾಜಿಕ ಜಾಲತಾಣದಲ್ಲ ಭಾರೀ ವೈರಲ್ ಆಗಿದ್ದು, ಪೋಟೋ ಶೂಟ್ ನೋಡಿ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇನ್‌ಸ್ಟಾಗ್ರಾಂ mr._and_mrs._verma ಎಂಬ ಖಾತೆ ಮೂಲಕ ಸಕ್ರೀಯರಾಗಿರುವ ವರ್ಮಾ ದಂಪತಿ ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇಳಿ ವಯಸ್ಸಲ್ಲಿ ಇಬ್ಬರ ಪ್ರೀತಿ ಯುವ ಜನರಿಗೆ ಮಾದರಿಯಾಗುವಂತಿದೆ. ಸದಾ ಒಂದಿಲ್ಲೊಂದು ವಿಡಿಯೋ ಮೂಲಕ ಜನರನ್ನು ರಂಜಿಸುತ್ತಾ, ಪ್ರೀತಿ, ಆತ್ಮೀಯತೆ, ಬಾಂಧವ್ಯದ ಪಾಠವನ್ನು ಹೇಳುತ್ತಿದ್ದಾರೆ.

ಇದೀಗ ವರ್ಮಾ ದಂಪತಿ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ವರ್ಮಾ ತನ್ನ ಮೊಬೈಲ್‌ನಲ್ಲಿ ಪತ್ನಿಯ ಪೋಟೋಗಳನ್ನು ಸೆರೆ ಹಿಡಿಯ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ವರ್ಮಾ ವಿವಿಧ ಭಂಗಿಯಲ್ಲಿ ಪೋಟೋ ಕ್ಲಿಕ್ಕಿಸೋ ಪರ ನೆಟ್ಟಿಗರಿಗೆ ಖಷಿ ಕೊಟ್ಟಿದೆ. ಅಷ್ಟಕ್ಕೂ ಈ ವರ್ಮಾ ದಂಪತಿಗಳ ಫೋಟೋ ಶೂಟ್ ಹೇಗಿದೆ ನೋಡಿ.
ವರ್ಮಾ ದಂಪತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅಲ್ಲದೇ ಹಿಂದಿ ವಾಹಿನಿಗಳು ಆಯೋಜಿಸುವ ಹಲವು ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ಎಲ್ಲರ ಮೆಚ್ಚುಗೆಗಳಿಸಿದ್ದಾರೆ.