ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಡ್ಡಿಯಾಗಬಾರದೆಂದು ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತೆ. ಉಚಿತ ಬಸ್ ಪಾಸ್, ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಹೀಗೆ ಚಿಕ್ಕ ಚಿಕ್ಕ ವಿಷಯಗಳ ಮೇಲೂ ಗಮನ ನೀಡುವ ಸರ್ಕಾರ ವಿದ್ಯಾರ್ಥಿಗಳ ಓದಿಗೆ ಅನುಕೂಲ ಮಾಡಿಕೊಡುತ್ತೆ. ಆದರೆ ಸರ್ಕಾರದ ಈ ಸೌಲಭ್ಯಗಳನ್ನೇ ದುರುಪಯೋಗ ಪಡಿಸಿಕೊಳ್ಳುವ ಕೆಲ ವಿದ್ಯಾರ್ಥಿಗಳು ಹರೆಯದ ಜೋಶ್ನಲ್ಲಿ ಇನ್ನಿಲ್ಲದ ಹುಚ್ಚು ಸಾಹಸ ಪ್ರದರ್ಶನ ಮಾಡುತ್ತಾರೆ. ಬಸ್ನ ಬಾಗಿಲಿನಲ್ಲಿ ನಿಂತು ಸ್ಟಂಟ್ ( Deadly Stunt ) ಮಾಡುವ ಮೂಲಕ ಇಲ್ಲೊಂದಿಷ್ಟು ವಿದ್ಯಾರ್ಥಿಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಚೆನ್ನೈನ ಎಂಟಿಸಿ ಬಸ್ನಲ್ಲಿ ವಿದ್ಯಾರ್ಥಿಗಳು ಈ ರೀತಿ ಡೆಡ್ಲಿ ಸಾಹಸವನ್ನು ಪ್ರದರ್ಶಿಸಿದ್ದಾರೆ. ಇದೇ ಬಸ್ನ ಹಿಂಬದಿಯ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ವಿದ್ಯಾರ್ಥಿಗಳು ಹುಚ್ಚಾಟವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಚಲಿಸುತ್ತಿದ್ದ ಬಸ್ನ್ನೇ ಏರುವ ವಿದ್ಯಾರ್ಥಿಯೊಬ್ಬ ಬಸ್ನ ಬಾಗಿಲ ಮೆಟ್ಟಿಲ ಮೇಲೆ ನಿಂತು ಈ ರೀತಿಯ ಹುಚ್ಚಾಟ ಪ್ರದರ್ಶಿಸಿದ್ದಾನೆ. ಮೊದಲೇ ಉಳಿದ ವಿದ್ಯಾರ್ಥಿಗಳು ಬಸ್ನ ಕೊನೆಯ ಮೆಟ್ಟಿಲ ಮೇಲೆ ನಿಂತಿದ್ದಾರೆ. ಇವರಿಗಿಂತಲೂ ಒಂದು ಹೆಜ್ಜೆ ಮುಂದೆಯೇ ಹೋದ ವಿದ್ಯಾರ್ಥಿಯೊಬ್ಬ ಬಸ್ನ ಕೊನೆಯ ಮೆಟ್ಟಿಲಿನಿಂದ ಸೀದಾ ಬಸ್ನ ಕಿಟಕಿ ಏರಿದ್ದಾನೆ.
ಮೊಬೈಲ್ ಕ್ಯಾಮರಾದಲ್ಲಿ ಈ ಎಲ್ಲಾ ದೃಶ್ಯಗಳು ಸೆರೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿದ್ಯಾರ್ಥಿಗಳ ಪತ್ತೆಗೆ ಶೋಧ ನಡೆಸಿದ್ದಾರೆ. ಅಲ್ಲದೇ ಶೀಘ್ರದಲ್ಲೇ ವಿದ್ಯಾರ್ಥಿಗಳನ್ನು ಪತ್ತೆ ಮಾಡಿ ಅವರಿಗೆ ಇಂತಹ ಸಾಹಸಗಳಿಂದ ಉಂಟಾಗಬಲ್ಲ ಅಪಾಯಗಳ ಬಗ್ಗೆ ಮನವರಿಕೆ ಮಾಡಿಕೊಡೋದಾಗಿ ಹೇಳಿದ್ದಾರೆ.
The video, shot by someone in a car, shows several school students hanging precariously from the window rails of a bus.
— TOIChennai (@TOIChennai) December 6, 2021
READ: https://t.co/iYpjWWRmQy pic.twitter.com/ySMSgz09PH
ಇದನ್ನು ಓದಿ : Onion Lorry Accident : ಲಾರಿ – ಟ್ಯಾಂಕರ್ ನಡುವೆ ಭೀಕರ ಅಪಘಾತ : ನಾಲ್ವರ ದುರ್ಮರಣ
video of students doing Deadly Stunt on mtc bus goes viral probe begins