ತಾಯಿಯಾದವಳು ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಮಕ್ಕಳ ಉಳಿವಿಗೆ ಹೋರಾಟ ಮಾಡ್ತಾಳೆ. ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳು ಕೂಡ ಇದಕ್ಕೆ ಭಿನ್ನವಾಗಿಲ್ಲ. ಇಲ್ಲೊಂದು ಕೋಳಿ ತನ್ನ ಮೊಟ್ಟೆಗಳನ್ನು ತಿನ್ನಲ್ಲು ಬಂದಿದ್ದ ಹಾವನ್ನು ಕಚ್ಚಿ ಕಚ್ಚಿ ಓಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಳಿಯ ಪಂಜರವೊಂದರಲ್ಲಿ ಹಾವೊಂದು ಕುಳಿತಿತ್ತು. ಅಲ್ಲಿದ್ದ ಕೆಲವು ಮೊಟ್ಟೆಗಳನ್ನು ತಿಂದು ತೇಗುತ್ತಿತ್ತು. ಈ ವೇಳೆಯಲ್ಲಿ ಕೋಳಿಯ ಮಾಲೀಕ ಕೋಲಿನ ಸಹಾಯದಿಂದ ಹಾವನ್ನು ಕೆಳಗೆ ಹಾಕಿದ್ದಾರೆ. ಈ ವೇಳೆಯಲ್ಲಿ ಅಲ್ಲಿಯೇ ಇದ್ದ ಹೆಣ್ಣು ಕೋಳಿ ಹಾವಿನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಹಾವನ್ನು ಕುಕ್ಕಿ ಕುಕ್ಕಿ ಸ್ಥಳದಿಂದ ಓಡಿಸಿದೆ.
ಕೋಳಿ ಆರ್ಭಟಿಸುತ್ತಿದ್ರೆ ಹಾವು ಯಾವುದೇ ರೀತಿಯಲ್ಲಿಯೂ ಪ್ರತಿರೋಧವನ್ನು ತೋರಿಸದೇ ಸ್ಥಳದಿಂದ ಕಾಲ್ಕಿತ್ತಿದೆ. @ViralHog ಅನ್ನೋ ಟ್ವೀಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ 59 ಸೆಕೆಂಡ್‌ಗಳ ವಿಡಿಯೋ ಸದ್ದು ಮಾಡುತ್ತಿದೆ.
ಇದನ್ನೂ ಓದಿ : Trending : ಗ್ರಾಮದೊಳಗೆ ಮೊಸಳೆಯ ವಾಕಿಂಗ್ : ವೈರಲ್ ಆಯ್ತು ವೀಡಿಯೋ
ಇದನ್ನೂ ಓದಿ : ಸತ್ತ ಮಗನನ್ನು ಬದುಕಿಸಿದ ತಾಯಿ : ಅಂತ್ಯಕ್ರೀಯೆ ಹೊತ್ತಲ್ಲಿ ನಡೆಯಿತು ಪವಾಡ ..!!
(Trending : Mother Chicken Fights With Snake Video Viral)