ಇಸ್ತಾನ್‍ಬುಲ್ : ವಿಮಾನ ಲ್ಯಾಂಡಿಗ್ ಆಗುವ ವೇಳೆಯಲ್ಲಿ ನಡೆದ ಅವಘಡದಲ್ಲಿ ವಿಮಾನವೊಂದು ಮೂರು ತುಂಡಾಗಿ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿರೋದು ಟರ್ಕಿಯ ಸಬಿಹಾ ಗೋಕನ್ ವಿಮಾನ ನಿಲ್ದಾಣದಲ್ಲಿ. ಬೋಯಿಂಗ್ -737 ವಿಮಾನ ಹವಾಮಾನ ವೈಪರೀತ್ಯದಿಂದ ಲ್ಯಾಂಡಿಂಗ್ ಆಗುವ ಈ ದುರ್ಘಟನೆ ಸಂಭವಿಸಿದೆ.

ಟರ್ಕಿಯಲ್ಲಿ ಬಿರುಗಾಳಿ ಸಹಿತ ಬಾರೀ ಮಣೆ ಸುರಿಯುತ್ತಿತ್ತು. ವಿಮಾನ ಪೈಲೆಟ್ ಸೇಫ್ ಲ್ಯಾಂಡಿಂಗ್ ಗೆ ಮುಂದಾಗಿದ್ದಾನೆ. ಆದರೆ ಲ್ಯಾಂಡಿಂಗ್ ವೇಳೆಯಲ್ಲಿ ವಿಮಾನ ಸ್ಕಿಡ್ ಆಗಿ ಒಮ್ಮಿಂದೊಮ್ಮೆಲೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆಯೇ ವಿಮಾನ ಮೂರು ತುಂಡಾಗಿದೆ.

ವಿಮಾನ ಬೇರ್ಪಟ್ಟಾಗ ಹಲವರು ವಿಮಾನದಿಂದ ಕೆಳಗೆ ಹಾರಿಕೊಂಡಿದ್ದಾರೆ. ಕೆಲವರು ಸೀಟಿನಡಿಯಲ್ಲಿ ಸಿಲುಕಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ವಿಮಾನದಲ್ಲಿದ್ದ ಮೂರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ 179 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ.