ಬೆಂಗಳೂರು : ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಇದೀಗ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಕೆಎಸ್ ಟಿಡಿಸಿ ಅಧ್ಯಕ್ಷರ ಹುದ್ದೆಯ ನೇಮಕದ ಕಡತಕ್ಕೆ ತರಾತುರಿಯಲ್ಲಿ ಭಾನುವಾರ ಸಹಿ ಮಾಡೋ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದ್ರಲ್ಲೂ ಪಕ್ಷದ ನಿಷ್ಟಾವಂತರನ್ನು ಕಡೆಗಣಿಸಿ ನಟಿ ಶ್ರುತಿ ಅವರನ್ನು ನೇಮಕ ಮಾಡಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮಾಜಿ ಶಾಸಕ ನಟ ಜಗ್ಗೇಶ್ ಅನರ್ಹ ಶಾಸಕರಿಗೆ ತನ್ನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ನಟ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಕೂಡ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷಗಾದಿಯ ಮೇಲೆ ಕಣ್ಣಿಟ್ಟಿದ್ದರು. ಆದ್ರೀಗ ಸಚಿವ ಸಿ.ಟಿ.ರವಿ ಏಕಾಏಕಿಯಾಗಿ ನಟಿ ಶ್ರುತಿ ಅವರನ್ನು ಅಧ್ಯಕ್ಷಗಾದಿಗೆ ನೇಮಕ ಮಾಡಿರೋದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಮಾತ್ರವಲ್ಲ ತರಾತುರಿಯಲ್ಲಿ ಕಡತಕ್ಕೆ ಸಹಿ ಮಾಡೋ ಅಗತ್ಯವೇನಿತ್ತು ಅಂತಾನೂ ಮಾತನಾಡಿಕೊಳ್ಳುತ್ತಿದ್ದಾರೆ.