ಬೆಂಗಳೂರು : 2nd puc exam results : 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅಧಿಕೃತ ಮಾಹಿತಿ ನೀಡಿದ್ದಾರೆ. ನಾಳೆ ಸುದ್ದಿಗೋಷ್ಠಿ ನಡೆಸುವ ಮೂಲಕ ಸಚಿವ ಬಿ,ಸಿ ನಾಗೇಶ್ ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ ಮಾಡಲಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಬಿ.ಸಿ ನಾಗೇಶ್, ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ನಾಳೆ (ಜೂನ್ 18)ರಂದು ಪ್ರಕಟಿಸಲಾಗುತ್ತದೆ , ವಿದ್ಯಾರ್ಥಿಗಳಿಗೆ ಶುಭಾಶಯಗಳು ಎಂದು ಬರೆದಿದ್ದಾರೆ. 2021-22ನೇ ಸಾಲಿನಲ್ಲಿ, ರಾಜ್ಯಾದಂತ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 6,84,255 ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾಗಿದ್ದರು.ಇದರಲ್ಲಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 6,00,519 ರೆಗ್ಯುಲರ್ ವಿದ್ಯಾರ್ಥಿಗಳಿದ್ದರೆ, 61,808 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.
2021 -22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಏಪ್ರಿಲ್ 22ಕ್ಕೆ ಆರಂಭವಾಗಿದ್ದವು. ಹಾಗೂ ಮೇ 18ಕ್ಕೆ ಮುಕ್ತಾಯಗೊಂಡಿದ್ದವು. ಪರೀಕ್ಷೆ ಮುಗಿಯುತ್ತಿದ್ದಂತೆಯೇ ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆಯ ಮೌಲ್ಯಮಾಪನವನ್ನು ಆರಂಭಿಸಿತ್ತು. ಅಲ್ಲದೇ ಜೂನ್ 20ರ ಒಳಗಾgಗಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸುವುದಾಗಿ ಪಿಯು ಬೋರ್ಡ್ ಹೇಳಿತ್ತು.
2nd puc exam results : ಪಿಯುಸಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
- ಫಲಿತಾಂಶವನ್ನು ವೀಕ್ಷಿಸಲು ಈ ಮಾರ್ಗವನ್ನು ಅನುರಿಸಿ :
- ಮೊದಲನೆಯದಾಗಿ, ಕರ್ನಾಟಕ ಪೂರ್ವ ವಿಶ್ವವಿದ್ಯಾಲಯದ ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
- ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ, ಪುಟದಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು 2 ನೇ ಪಿಯುಸಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಮುಂದೆ, ನಿಮ್ಮನ್ನು ಇನ್ನೊಂದು ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
- ಈ ಪುಟದಲ್ಲಿ, ನಿಮ್ಮ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ನಿಮ್ಮ ಮಾಹಿತಿಯನ್ನು ನೀವು ನಮೂದಿಸಬೇಕು.
- ಅದರ ನಂತರ, ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
- ನೀವು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿದ ತಕ್ಷಣ, ಫಲಿತಾಂಶವು ನಿಮ್ಮ ಪರದೆಯ ಮೇಲೆ ಗೋಚರಿಸುತ್ತದೆ.
- ಭವಿಷ್ಯದ ಉಲ್ಲೇಖಕ್ಕಾಗಿ ನೀವು ಫಲಿತಾಂಶವನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಉಳಿಸಬಹುದು ಮತ್ತು ಮುದ್ರಣವನ್ನು ಸಹ ತೆಗೆದುಕೊಳ್ಳಬಹುದು.
ಇದನ್ನು ಓದಿ : ಮುಂದಿನ ವರ್ಷದಿಂದ ಆರ್‌ಸಿಬಿ, ಸಿಎಸ್‌ಕೆ, ಮುಂಬೈ, ಕೆಕೆಆರ್ ಆದಾಯ ಡಬಲ್
ಇದನ್ನೂ ಓದಿ : IPL vs PSL : ಐಪಿಎಲ್ 115.5 ಕೋಟಿ, ಪಿಎಸ್ಎಲ್ ಜಸ್ಟ್ 2.76 ಕೋಟಿ : ಐಪಿಎಲ್ ಮುಂದೆ ಲೆಕ್ಕಕ್ಕೇ ಇಲ್ಲ ಪಾಕಿಸ್ತಾನ್ ಸೂಪರ್ ಲೀಗ್
2nd puc exam results will announced on Saturday