ನವದೆಹಲಿ : ಛತ್ತೀಸ್‌ಗಢ ಬೋರ್ಡ್ CGBSE 10th, 12th ಫಲಿತಾಂಶಗಳು 2022ವನ್ನು ಇಂದು ಪ್ರಕಟಿಸಲಾಗಿದೆ. ಸಿಜಿಬಿಎಸ್‌ಇ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಯಿಂದ ಲಭ್ಯವಾಗಿದೆ. ಫಲಿತಾಂಶವನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
cgbse.nic.in ನಲ್ಲಿ ಸಿಜಿಬಿಎಸ್‌ಇಯ ಅಧಿಕೃತ ಸೈಟ್‌ನಲ್ಲಿ ಫಲಿತಾಂಶದ ಲಿಂಕ್ ಅಭ್ಯರ್ಥಿಗಳಿಗೆ ಲಭ್ಯವಿರುತ್ತದೆ. 10ನೇ ತರಗತಿ ಅಂತಿಮ ಪರೀಕ್ಷೆಯಲ್ಲಿ 71 ವಿದ್ಯಾರ್ಥಿಗಳು ಅಗ್ರಸ್ಥಾನ ಪಡೆದಿದ್ದಾರೆ. ಪ್ರತಿ ವರ್ಷ ಸುಮಾರು 8 ಲಕ್ಷ ಅಭ್ಯರ್ಥಿಗಳು 10, 12 ನೇ ತರಗತಿಯ ಛತ್ತೀಸ್‌ಗಢ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರು.
CGBSE 10 ನೇ ತರಗತಿ ಪರೀಕ್ಷೆಯನ್ನು ಮಾರ್ಚ್ 3 ರಿಂದ ಮಾರ್ಚ್ 23, 2022 ರವರೆಗೆ ನಡೆಸಲಾಗಿದೆ. ಛತ್ತೀಸ್‌ಗಢ ಬೋರ್ಡ್ 12 ನೇ ತರಗತಿ ಪರೀಕ್ಷೆಯನ್ನು ಮಾರ್ಚ್ 2 ರಿಂದ ಮಾರ್ಚ್ 30 ರವರೆಗೆ ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಲಾಯಿತು. 10, 12ನೇ ತರಗತಿ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆಯುವ ಅಭ್ಯರ್ಥಿಗಳಿಗೆ ಉಚಿತ ಹೆಲಿಕಾಪ್ಟರ್ ರೈಡ್ ನೀಡಲಾಗುತ್ತದೆ.
ಈ ವರ್ಷದ 10 ಮತ್ತು 12ನೇ ಬೋರ್ಡ್ ಪರೀಕ್ಷೆಗಳ ಟಾಪ್ 10 ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಉಚಿತ ಹೆಲಿಕಾಪ್ಟರ್ ರೈಡ್ ಅನ್ನು ಒದಗಿಸಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಕೆಲವು ದಿನಗಳ ಹಿಂದೆ ಘೋಷಿಸಿದ್ದರು. ಸಿಜಿಬಿಎಸ್‌ಇ10ನೇ, 12ನೇ ಫಲಿತಾಂಶ 2022 ಡೌನ್‌ಲೋಡ್ ಮಾಡಲು ಲಿಂಕ್‌ಗಳು ಈಗ results.cg.nic.in ನಲ್ಲಿ ಲಭ್ಯವಿದೆ. 2022 ರ CG ಬೋರ್ಡ್ 10 ನೇ ತರಗತಿ ಮತ್ತು ಕ್ಯಾಸ್ 12 ಫಲಿತಾಂಶಗಳಲ್ಲಿ 71 ವಿದ್ಯಾರ್ಥಿಗಳು ಟಾಪ್ 10 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಬಿಸಿಲಿನ ತಾಪ ಹೆಚ್ಚಳ : ಶಾಲೆಗಳಿಗೆ ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಟ
ಇದನ್ನೂ ಓದಿ : SSLC Result 2022 : ಮೇ 19ಕ್ಕೆ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ
CGBSE Board class 10, 12 results declared : click here to check result