ನವದೆಹಲಿ : ಚಾರ್ಟೆಡ್ ಅಕೌಂಟೆಂಟ್ ಕೋರ್ಸ್ ಫೌಂಡೇಶನ್ ಕೋರ್ಸ್ ಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ತಿದ್ದುಪಡಿ ತಂದಿದ್ದು, ಇನ್ಮುಂದೆ 10ನೇ ತರಗತಿ ತೇರ್ಗಡೆಯಾದ ಕೂಡಲೇ ಸಿಎ ಕೋರ್ಸ್ ಗೆ ತಾತ್ಕಾಲಿಕ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಭಾರತೀಯ ಲೆಕ್ಕ ಪರಿಶೋಧಕರ ಮಂಡಳಿ ನಡೆಸುವ ಸಿಎ ಕೋರ್ಸ್ ಗೆ ಪ್ರವೇಶ ಪಡೆಯಲು ಇಷ್ಟು ವರ್ಷ ದ್ವಿತೀಯ ಪಿಯುಸಿ ವಿದ್ಯಾಭ್ಯಾಸವನ್ನು ಕಡ್ಡಾಯಗೊಳಿಸಲಾಗಿತ್ತು. ಆದ್ರೀಗ ಚಾರ್ಟೆಡ್ ಅಕೌಂಟೆಟ್ಸ್ ರೆಗ್ಯುಲೇಶನ್ 1988 25 ಇ, 25 ಎಫ್ ಮತ್ತು 29 ಎಫ್ ಗಳಿಗೆ ತಿದ್ದುಪಡಿ ತರಲು ಸರಕಾರ ಅನುಮತಿಯನ್ನು ನೀಡಿದೆ. ಹೀಗಾಗಿ ಮಂಡಳಿ ನಿಯಮದಲ್ಲಿಯೂ ಬದಲಾವಣೆಗಳನ್ನು ಮಾಡಿಕೊಂಡಿದೆ.

ಇನ್ಮುಂದೆ 10ನೇ ತರಗತಿ ವಿದ್ಯಾಭ್ಯಾಸದ ನಂತರದಲ್ಲಿ ವಿದ್ಯಾರ್ಥಿಗಳು ಚಾರ್ಟೆರ್ಡ್ ಅಕೌಂಟೆಂಟ್ ನ ಫೌಂಡೇಶನ್ ಕೋರ್ಸ್ ಗೆ ತಾತ್ಕಾಲಿಕ ಪ್ರವೇಶ ಪಡೆಯಬಹುದಾಇದೆ. ಆದರೆ ತಾತ್ಕಾಲಿಕ ಪ್ರವೇಶ ಪಡೆದ ವಿದ್ಯಾರ್ಥಿಗಳು 12ನೇ ತರಗತಿ ಉತ್ತೀರ್ಣರಾದ ಬಳಿಕವಷ್ಟೇ ವಿದ್ಯಾರ್ಥಿಗಳ ಪ್ರವೇಶ ಅಧಿಕೃತವಾಗಲಿದೆ.

ಸಿಎ ಕೋರ್ಸ್ ನಲ್ಲಿ ಜಾರಿಗೆ ಬಂದಿರುವ ಹೊಸ ನಿಯಮದಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರಸ್ತುವ ಕೋರ್ಸ್ ಪೂರೈಸಲು ತೆಗೆದುಕೊಳ್ಳುತ್ತಿದ್ದ ಸಮಯಕ್ಕಿಂತಲೂ 6 ತಿಂಗಳ ಮೊದಲೇ ಕೋರ್ಸ್ ಮುಗಿಸಲು ಸಾಧ್ಯವಾಗಲಿದೆ ಎಂದು ಐಸಿಎಐನ ಅಧ್ಯಕ್ಷ ಅತುಲ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.