ಬಾಗಲಕೋಟೆ : ಕೊರೊನಾ ಹೆಮ್ಮಾರಿ ಶಿಕ್ಷಕ ಸಮುದಾಯವನ್ನು ಕಂಗೆಡಿಸಿದೆ. ಜಿಲ್ಲೆಯಲ್ಲಿ ಕಳೆದೊಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 15ಕ್ಕೂ ಅಧಿಕ ಶಿಕ್ಷಕರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ರೆ, 50ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಶಿಕ್ಷಕ ಸಮುದಾಯವೇ ಆತಂಕದಲ್ಲಿದೆ.

ಹೌದು, ಬಾಗಲಕೋಟೆಯಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ದಿನ ಕಳೆದಂತೆ ಹೆಚ್ಚುತ್ತಿದೆ. ಕೊರೊನಾ ನಡುವಲ್ಲೇ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಆಗಿ ದುಡಿಸಿಕೊಳ್ಳಲಾಗುತ್ತಿದೆ. ಶಿಕ್ಷಕರು ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವುದು, ಹೆಲ್ತ್ ವಾಚ್, ಚೆಕ್ ಪೋಸ್ಟ್ ಡ್ಯೂಟಿ, ಕ್ವಾರಂಟೈನ್ ಡ್ಯೂಟಿ ಹೀಗೆ ಕೊರೊನಾ ಸೋಂಕಿನ ವಿರುದ್ದದ ಹೋರಾಟದಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ.

ಇದೀಗ ಬಾಲಕೋಟೆಯಲ್ಲಿ ಶಿಕ್ಷರನ್ನು ಕೊರೊನಾ ಸೋಂಕು ಬಲ ಪಡೆದಿದೆ. ಜಿಲ್ಲೆಯ ಹುನಗುಂದ, ಇಳಕಲ್ ತಾಲೂಕುಗಳಲ್ಲಿ ಒಂದೇ ದಿನ 5 ಮಂದಿ ಶಿಕ್ಷರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಇದೇ ತಾಲೂಕಿನ ಹಲವು ಶಿಕ್ಷಕರಿಗೂ ಕೊರೊನಾ ಸೋಂಕು ದೃಪಟ್ಟಿದೆ.

ಶಾಲೆಗಳು ಪುನರರಾರಂಭವಾಗದೇ ಇದ್ರೂ ಶಿಕ್ಷಣ ಇಲಾಖೆ ಕಡ್ಡಾಯವಾಗಿ ಶಿಕ್ಷಕರನ್ನು ಶಾಲೆಗೆ ಬರುವುದಕ್ಕೆ ಹೇಳುತ್ತಿದೆ. ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ. ಈಗಾಗಲೇ ವಿದ್ಯಾಗಮ ಯೋಜನೆಯ ಮೂಲಕ ಮಕ್ಕಳಿಗೆ ಪಾಠ ಬೋಧನೆ ಮಾಡುವುದಾಗಿ ಶಿಕ್ಷಣ ಇಲಾಖೆ ಹಾಗೂ ಸಚಿವ ಸುರೇಶ್ ಕುಮಾರ್ ಘೋಷಣೆ ಮಾಡಿ ಭರ್ಜರಿ ಪ್ರಚಾರಗಿಟ್ಟಿಸಿಕೊಂಡಿದ್ರು. ಆದ್ರೆ ಮನೆ ಮನೆ ಮನೆಗೆ ತೆರಳುವ ಶಿಕ್ಷರಿಗೆ ಸರಕಾರ ಯಾವುದೇ ಸೌಲಭ್ಯವನ್ನು ಒದಗಿಸಿಲ್ಲ.

ಈ ನಡುವಲ್ಲೇ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯ ಪ್ರಕಾರ ವಿದ್ಯಾರ್ಥಿಗಳು ಶಾಲೆಗೆ ತೆರಳಿ ಶಿಕ್ಷಕರಿಂದ ಪಾಠ ಕೇಳಬಹುದು ಎಂದಿದೆ. ಆದ್ರೀಗ ಶಿಕ್ಷಕ ಸಮುದಾಯವೇ ಕೊರೊನಾ ಸಂಕಷ್ಟದಲ್ಲಿರುವಾಗ ಸೋಂಕು ಮಕ್ಕಳಿಗೂ ವ್ಯಾಪಿಸುವ ಭಯ ಎದುರಾಗಿದೆ. ಕೊರೊನಾ ಡ್ಯೂಟಿ, ವಿದ್ಯಾಗಮ ಯೋಜನಯ ಜೊತೆಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರೆ ಕರೆತರುವಂತೆ ಸೂಚಿಸಲಾಗಿದೆ.

ಈಗಾಗಲೇ ಕೊರೊನಾ ಸೋಂಕಿಗೆ ರಾಜ್ಯದಾದ್ಯಂತ 20 ಅಧಿಕ ಶಿಕ್ಷಕರು ಬಲಿಯಾಗಿ ಕೂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್