ಬೆಂಗಳೂರ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೇತುಬಂಧ ತರಗತಿಗಳನ್ನು ಆರಂಭಿಸಿದದಂತೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಮೂಲಕ ಪಾಠ ಬೋಧಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಜುಲೈ 23ರಿಂದ ಯೂಟ್ಯೂಬ್ ತರಗತಿಗಳು ಆರಂಭವಾಗಲಿದ್ದು, ಅಗಸ್ಟ್ 1ರ ವರೆಗೂ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಎಂ.ಕನಗವಲ್ಲಿ ತಿಳಿಸಿದ್ದಾರೆ.

ನಿತ್ಯವೂ ಬೆಳಗ್ಗೆ 9ರಿಂದ 12 ಗಂಟೆವರೆಗೆ ತರಗತಿಗಳನ್ನು ನಡೆಸಲಾಗುತ್ತಿದ್ದು, 45 ನಿಮಿಷಗಳ 4 ತರಗತಿಗಳನ್ನು ನಡೆಯಲಿವೆ. ಒಂದೊಮ್ಮೆ ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್ ಇಲ್ಲದವರು ಹಾಗೂ ಇಂಟರ್‌ನೆಟ್ ಸೌಲಭ್ಯ ಹೊಂದಿಲ್ಲದ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭವಾದ ನಂತರ ಆ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪಾಠಗಳನ್ನು ಉಪನ್ಯಾಸಕರ ಮೂಲಕ ಬೋಧನೆ ಮಾಡಲಾಗುತ್ತದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಾಲೇಜುಗಳನ್ನು ಪುನರಾರಂಭಿಸುವುದು ಕಷ್ಟಸಾಧ್ಯ. ಆದರೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖಘಟ್ಟ. ಇಂತಹ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ಯೂಟ್ಯೂಬ್ ಪಾಠ ಆರಂಭಿಸಲಾಗುತ್ತಿದೆ. ಯೂಟ್ಯೂಬ್ ಪಾಠಕ್ಕೆ ಸಂಬಂಧಿಸಿದಂತೆ ನೋಟ್ಸ್ ಗಳನ್ನು ಸಿದ್ದಪಡಿಸುವುದು ಆಯಾಯ ಕಾಲೇಜುಗಳ ಉಪನ್ಯಾಸಕರ ಜವಾಬ್ದಾರಿಯಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಪ್ರತೀ ಕಾಲೇಜುಗಳಲ್ಲಿಯೂ ಸಂಯೋಜಕರು ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮಾಡಿ ವಿಡಿಯೋ ಪಾಠಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕು. ಪಾಠದ ನಂತರದಲ್ಲಿ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸಂದೇಹಗಳನ್ನು ಪರಿಹರಿಸುವ ಕಾರ್ಯವನ್ನು ಮಾಡಬೇಕು. ಜಿಲ್ಲಾ ಉಪನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿನ 5 ಅಥವಾ 10 ಉಪನ್ಯಾಸಕರು, ಸಂಪನ್ಮೂಲ ವ್ಯಕ್ತಿಗಳ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಯೂಟ್ಯೂಬ್ ಪಾಠದ ವೇಳಾಪಟ್ಟಿ ಹಾಗೂ ಲಿಂಕ್ ತಲುಪಿಸುವ ಕೆಲಸ ಮಾಡಬೇಕು.
ಪಾಠಗಳನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ : https://www.youtube.com/c/dpuedkpucpa
ವೇಳಾಪಟ್ಟಿ :
ಜು.23: ಭೌತಶಾಸ್ತ್ರ/ಅಕೌಂಟೆನ್ಸಿ ಭೌತಶಾಸ್ತ್ರ/ಅಕೌಂಟೆನ್ಸಿ (ನೋಟ್ಸ್) ರಸಾಯನಶಾಸ್ತ್ರ /ರಾಜ್ಯಶಾಸ್ತ್ರ (ನೋಟ್ಸ್)
ಜು.24: ಜೀವಶಾಸ್ತ್ರ/ಬಿಸಿನೆಸ್ ಸ್ಟಡೀಸ್ ಜೀವಶಾಸ್ತ್ರ/ ಬಿಸಿನೆಸ್ ಸ್ಟಡೀಸ್ (ನೋಟ್ಸ್) ಗಣಿತ/ಅರ್ಥಶಾಸ್ತ್ರ ಗಣಿತ/ಅರ್ಥಶಾಸ್ತ್ರ
ಜು.25: ಗಣಿತ/ಇತಿಹಾಸ ಗಣಿತ/ಇತಿಹಾಸ (ನೋಟ್ಸ್) ಜೀವಶಾಸ್ತ್ರ/ ಬಿಸಿನೆಟ್ ಸ್ಟಡೀಸ್ ನೋಟ್ಸ್
ಜು.27: ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್ ಕಂಪ್ಯೂಟರ್ ಸೈನ್ಸ್/ ಸಮಾಜಶಾಸ್ತ್ರ ನೋಟ್ಸ್
ಜು.28: ಬೇಸಿಕ್ ಮ್ಯಾಥ್‌್ಸ/ ಸಮಾಜಶಾಸ್ತ್ರ ನೋಟ್ಸ್ ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್
ಜು.29: ಇಂಗ್ಲಿಷ್ ನೋಟ್ಸ್ ಕನ್ನಡ/ಹಿಂದಿ/ಸಂಸ್ಕೃತ ನೋಟ್ಸ್
ಜು.30: ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್ ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್
ಜು.31: ಜೀವಶಾಸ್ತ್ರ/ಬಿಸಿನೆಸ್ ಸ್ಟಡೀಸ್ ನೋಟ್ಸ್ ಗಣಿತ/ಅರ್ಥಶಾಸ್ತ್ರ ನೋಟ್ಸ್
ಆ.1: ಗಣಿತ/ಇತಿಹಾಸ ನೋಟ್ಸ್ ಜೀವಶಾಸ್ತ್ರ/ ಬಿಸಿನೆಟ್ ಸ್ಟಡೀಸ್ ನೋಟ್ಸ್