ಭಾನುವಾರ, ಏಪ್ರಿಲ್ 27, 2025
HomeeducationEducation News : ಸರಕಾರಿ ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

Education News : ಸರಕಾರಿ ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

- Advertisement -

ಬೆಂಗಳೂರು : ಬೇಸಿಗೆ ರಜೆಯನ್ನು ಎಂಜಾಯ್‌ ಮಾಡಿದ ವಿದ್ಯಾರ್ಥಿಗಳಿಗೆ ಮರಳಿ ಶಾಲೆಗಳಿಗೆ ಬರುವ ಸಮಯ ಬಂದಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ (Education News) ಸರಕಾರಿ ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶವನ್ನು ಹೊರಡಿಸಿದೆ. ಈಗಾಗಲೇ ರಾಜ್ಯದಾದ್ಯಂತ ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಗಳಿಗೆ ಬರುವ ಮೊದಲು ಶಾಲಾ ಕೊಠಡಿ, ಶೌಚಾಲಯ, ಕಾಂಪೌಂಡ್‌ಗಳನ್ನು ಪರಿಶೀಲಿಸಬೇಕಾಗಿದೆ. ಈ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಉಪನಿರ್ದೇಶಕರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳಬೇಕು. ಶಾಲಾ ಕೊಠಡಿಗಳ ದುರಸ್ಥಿಗೆ ಸೂಕ್ತ ಕ್ರಮ ಕೈಗೊಳ್ಳಯವಂತೆ ಇಲಾಖೆ ಸೂಚನೆ ಹೊರಡಿಸಿದೆ. ಅದರೊಂದಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿ ಉಪಹಾರ ವಿತರಿಸಬೇಕು ಎಂದು ಆದೇಶ ಹೊರಡಿಸಿದೆ.

ಜೂನ್‌ 1 ರಿಂದ ಶಾಲಾ ತರಗತಿಗಳನ್ನು ಆರಂಭಿಸುವ ಬಗ್ಗೆ ಸೂಚನೆ :
ರಾಜ್ಯದಲ್ಲಿ ಶಾಲೆಗಳು ಮೇ 29 ರಂದು ಪುನಾರಂಭಗೊಳ್ಳಲಿದ್ದು, ಶಾಲಾ ತರಗತಿಗಳು ಮಾತ್ರ ಜೂನ್ ೧ ರಿಂದ ಪ್ರಾರಂಭಿಸುವ ಬಗ್ಗೆ ವಿಶೇಷ ಸೂಚನೆ ನೀಡಲಾಗಿದೆ. ಇನನು ಮಳೆಯಿಂದಾಗಿ ಹಲವು ಭಾಗದಲ್ಲಿ ಹಳ್ಳ, ಕೊಳ್ಳ, ನದಿಗಳು ತುಂಬಿವೆ. ರಸ್ತೆಗಳು ಹಾಳಾಗಿದ್ದರೇ ಮಕ್ಕಳನ್ನು ಶಾಲೆಗೆ ಬರಲು ಒತ್ತಾಯಿಸಬಾರದು. ಈ ಕುರಿತಂತೆ ಸಂಬಂಧಪಟ್ಟ ಅಧಿಖಾರಿಗಳ ಗಮನಕ್ಕೆ ತಂದು ಶಾಲೆಗೆ ರಜೆ ಘೋಷಿಸುವಂತೆ ಸೂಚನೆ ನೀಡಲಾಗಿದೆ.

ಕರ್ನಾಟಕ ಶಾಲಾ ಶೈಕ್ಷಣಿಕ ವರ್ಷ 2023-24ರ ರಜಾದಿನಗಳ ವಿವರ :
ಇದೀಗ ಕರ್ನಾಟಕ ಶಾಲಾ ಶೈಕ್ಷಣಿಕ ವರ್ಷ 2023-24, ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು 244 ಕೆಲಸದ ದಿನಗಳನ್ನು ಹೊಂದಿರುತ್ತವೆ. ಹಾಗಾಗಿ ಈ ವರ್ಷ ಕರ್ನಾಟಕ ಶಾಲಾ ವಿದ್ಯಾರ್ಥಿಗಳಿಗೆ 26 ದಿನ ಹೆಚ್ಚುವರಿ ರಜೆ ಸಿಗಲಿದೆ. ಮಕ್ಕಳ ಶಾಲಾ ದಿನಗಳ ಸಂಖ್ಯೆಯನ್ನು 26 ದಿನಗಳು ಕಡಿಮೆ ಮಾಡಲಾಗಿದ್ದು, ಈ ವರ್ಷ ಒಟ್ಟು 244 ಶಾಲಾ ದಿನಗಳು, ಮಾರ್ಗಸೂಚಿಗಳ ಪ್ರಕಾರ 180 ದಿನಗಳು ಮಾತ್ರ ಬೋಧನಾ ದಿನಗಳಾಗಿವೆ. ಇದರರ್ಥ ವಿದ್ಯಾರ್ಥಿಗಳು 26 ದಿನಗಳ ಹೆಚ್ಚುವರಿ ರಜೆಯನ್ನು ಪಡೆಯುತ್ತಾರೆ.

ಕಳೆದ ವರ್ಷ ಹೆಚ್ಚುವರಿಯಾಗಿದ್ದ ಕಲಿಕಾ ಪುನಶ್ಚೇತನ ಕಾರ್ಯಕ್ರಮ ಈ ವರ್ಷ ನಡೆಯದಿದ್ದು, ದಸರಾ ರಜೆ ಹೆಚ್ಚಿರುವುದರಿಂದ ಶಾಲಾ ದಿನಗಳು ಕಡಿಮೆಯಾಗಿವೆ. ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಶಾಲಾ ಕರ್ತವ್ಯದ ದಿನಗಳಲ್ಲಿ ಭಾರಿ ಇಳಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 48 ದಿನಗಳ ಕಲಿಕೆಯ ದಿನಗಳಲ್ಲಿ ಗಣನೀಯ ಇಳಿಕೆಯಾಗಿದೆ. 2022-23ರ ಶೈಕ್ಷಣಿಕ ವರ್ಷದಲ್ಲಿ, 270 ಕರ್ತವ್ಯ ದಿನಗಳು ಇದ್ದವು, ಅಂದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ವರ್ಷ ಹೆಚ್ಚುವರಿ 26 ರಜೆ ದಿನಗಳನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ, ಶಿಕ್ಷಣ-ಸಂಬಂಧಿತ ಚಟುವಟಿಕೆಗಳ ಶೇಕಡಾವಾರು ಕಳೆದ ವರ್ಷ ಶೇಕಡಾ 74 ರಿಂದ ಈ ವರ್ಷ ಶೇಕಡಾ 67 ಕ್ಕೆ ಕಡಿಮೆಯಾಗಿದೆ.

ಕಳೆದ ಬಾರಿ ಕೊರೊನಾದಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಆಗಿರುವ ಹಿನ್ನಡೆಯನ್ನು ಸರಿದೂಗಿಸಲು ಮೇ 14ರಿಂದ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಗಿತ್ತು. ಮೇ ತಿಂಗಳಲ್ಲಿ 14 ದಿನಗಳ ಕಲಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ವರ್ಷ ಕಲಿಕಾ ಪುನಶ್ಚೇತನ ಕಾರ್ಯಕ್ರಮ ನಡೆಯುವುದಿಲ್ಲ, ಮೇ 29ರಿಂದ ಶಾಲೆ ಆರಂಭವಾಗಲಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ದಸರಾ ರಜೆಯನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 16 ರವರೆಗೆ ಅಂದರೆ ಒಟ್ಟು 14 ದಿನಗಳು ಮಾತ್ರ ನಿಗದಿಪಡಿಸಲಾಗಿತ್ತು. ಆದರೆ ಈ ವರ್ಷ ಅಕ್ಟೋಬರ್ 8ರಿಂದ 25ರವರೆಗೆ ಒಟ್ಟು 20 ದಿನ ರಜೆ ಇರಲಿದ್ದು, ಅದೇ ರೀತಿ ಕಳೆದ ವರ್ಷಕ್ಕೆ ಹೋಲಿಸಿದರೆ ಜೂನ್ ಮತ್ತು ಜುಲೈನಲ್ಲಿ ಒಂದು ದಿನ, ಡಿಸೆಂಬರ್ ನಲ್ಲಿ ಮೂರು ದಿನ ಹೆಚ್ಚಿದೆ.

ಇದನ್ನೂ ಓದಿ : Ban on Indian students : ಭಾರತದ ಈ ರಾಜ್ಯಗಳ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯ

ಕಳೆದ ಶೈಕ್ಷಣಿಕ ವರ್ಷದಲ್ಲಿ 228 ಬೋಧನಾ-ಕಲಿಕಾ ದಿನಗಳಿದ್ದರೆ, ಈ ವರ್ಷ 180 ಕಲಿಕಾ ದಿನಗಳು ಮಾತ್ರ ಇರಲಿವೆ. ಈ ಶೈಕ್ಷಣಿಕ ವರ್ಷಕ್ಕೆ ಸರ್ಕಾರ 244 ಶಾಲಾ ಕರ್ತವ್ಯ ದಿನಗಳನ್ನು ನಿಗದಿಪಡಿಸಿದೆ. ಇವುಗಳಲ್ಲಿ ಬೋಧನೆ-ಕಲಿಕೆ ಪ್ರಕ್ರಿಯೆಗೆ ಕೇವಲ 180 ದಿನಗಳು ಮಾತ್ರ ಉಳಿದಿವೆ. ಹೆಚ್ಚುವರಿಯಾಗಿ, ಪರೀಕ್ಷೆಗಳು ಮತ್ತು ಮೌಲ್ಯಮಾಪನ ಪ್ರಕ್ರಿಯೆಗೆ 26 ದಿನಗಳು, ಪಠ್ಯೇತರ ಚಟುವಟಿಕೆಗಳು/ಪಠ್ಯೇತರ ಚಟುವಟಿಕೆಗಳು/ಸ್ಪರ್ಧೆಗಳ ನಿರ್ವಹಣೆಗೆ 24 ದಿನಗಳು, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕೆಲಸಕ್ಕಾಗಿ 10 ದಿನಗಳು ಮತ್ತು ಶಾಲಾ ಸ್ಥಳೀಯ ರಜಾದಿನಗಳಿಗೆ ನಾಲ್ಕು ದಿನಗಳು ಇರುತ್ತವೆ. ಆದ್ದರಿಂದ, ಈ ವರ್ಷ ಕೇವಲ 180 ಕಲಿಕೆಯ ದಿನಗಳು ಇರುತ್ತವೆ.

Education News : An important order from the Education Department for the teachers of government schools

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular