ಮಂಗಳವಾರ, ಏಪ್ರಿಲ್ 29, 2025
HomeeducationOmicron School Collage Close : ವಾರದಲ್ಲೇ ಬಂದ್ ಆಗುತ್ತಾ ಶಾಲಾ ಕಾಲೇಜು? ಶಿಕ್ಷಣ...

Omicron School Collage Close : ವಾರದಲ್ಲೇ ಬಂದ್ ಆಗುತ್ತಾ ಶಾಲಾ ಕಾಲೇಜು? ಶಿಕ್ಷಣ ಸಚಿವರ ಖಡಕ್ ನಿರ್ಧಾರವೇನು ಗೊತ್ತಾ?!

- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾಗೂ ಓಮಿಕ್ರಾನ್ (Omicron School Collage Close) ಪ್ರಕರಣಗಳು ನಿಧಾನಕ್ಕೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಶಾಲಾ ಕಾಲೇಜುಗಳ ಮೇಲೆ ತೂಗುಗತ್ತಿ ತೂಗಲಾರಂಭಿಸಿದೆ. ಕೆಲದಿನಗಳ ಹಿಂದೆಯಷ್ಟೇ ಆರಂಭಗೊಂಡ ಶಾಲಾ ಕಾಲೇಜುಗಳಿಗೆ ಮಕ್ಕಳು ಹೊಂದಿಕೊಳ್ಳಲಾರಂಭಿಸಿದ ಬೆನ್ನಲ್ಲೇ ಮತ್ತೆ ಶಾಲೆ ಬಂದ್ ಆಗಲಿದ್ಯಾ ಅನುಮಾನ ಸೃಷ್ಟಿಯಾಗಿದೆ. ಮಾತ್ರವಲ್ಲ ಈ ವಾರವೇ ಶಾಲೆ ಬಂದ್ ಎಂಬ ಗಾಸಿಪ್ ಗಳಿಗೂ ಜೀವ ಬಂದಿದೆ.

ಶಾಲೆ ಕಾಲೇಜುಗಳಲ್ಲಿ ಕೊರೋನಾ ಕಾಣಿಸಿಕೊಂಡಿರೋದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. ಜೊತೆಗೆ ಮತ್ತೆ ಕೊರೋನಾ ಮೂರನೇ ಅಲೆಯ ಭೀತಿ ಎಂಬಂತೆ ಕೊರೋನಾ ಪ್ರಕರಣಗಳು ಹೆಚ್ಚಲಾರಂಭಿಸಿವೆ. ಹೀಗಾಗಿ ಪೋಷಕ ರಲ್ಲಿ ಮತ್ತೆ ಆತಂಕ ಮನೆಮಾಡಿದೆ. ಆದರೆ ಈ ಅನುಮಾನಗಳಿಗೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಶಾಲಾ ಕಾಲೇಜು ಬಂದ್ ಇಲ್ಲ ಎಂದಿದ್ದಾರೆ.

ಎಂದಿನಂತೆ ಶಾಲಾ ಕಾಲೇಜು ತರಗತಿಗಳು ಮುಂದುವರೆಯುತ್ತವೆ. ವಿಧ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಯಾವುದೇ ಗೊಂದಲ ಬೇಡಮೂರನೇ ಅಲೆ ಹಾಗೂ ಒಮಿಕ್ರಾನ್ ವೈರಸ್ ಬಗ್ಗೆ ಮಾಹಿತಿ ಪಡೆಯಲಾಗಿದೆ. ಆರೋಗ್ಯ ತಜ್ಞರೊಂದಿಗೆ ಚರ್ಚೆ ಮಾಡಲಾಗಿದೆಎಂದು ಸ್ಪಷ್ಟನೆ ನೀಡಿದ್ದಾರೆ. ತಜ್ಞರೇ ಹೇಳುವಂತೆ ಫೆಬ್ರವರಿ ಅಂತ್ಯದಲ್ಲಿ ಮೂರನೇ ಅಲೆ ಎಂದಿದ್ದಾರೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ವಿಶೇಷವಾದ SOP ಜಾರಿ ಮಾಡಲಾಗಿದೆ. ಸ್ವಚ್ಚತೆ, ಸ್ಯಾನಿಟೈಸ್, ಮಾಸ್ಕ್ ಕಡ್ಡಾಯಮಾಡಲಾಗಿದೆ.
ಮಾಸ್ಕ್ ಇಲ್ಲದಿದ್ರೆ ತರಗತಿಗಳಿಗೆ ಬರಲು ಅವಕಾಶ ಇಲ್ಲ ಎಂದಿದ್ದಾರೆ.

ಮಾತ್ರವಲ್ಲ ಇಡೀ ರಾಜ್ಯದ ಎಲ್ಲಾ ಶಾಲಾ ಕಾಲೇಜು ಮಕ್ಕಳ ಪೋಷಕರಲ್ಲಿ ಮನವಿ ಮಾಡುತ್ತೇನೆ ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್ ವಾಕ್ಸಿನ್ ಪಡೆಯಬೇಕು. ಪೋಷಕರಿಗೆ ಎರಡು ಡೋಸ್ ಕಡ್ಡಾಯ ಮಾಡಲಾಗಿದೆ ಎಂದಿದ್ದಾರೆ. ಅಲ್ಲದೇ ಎರಡು ಡೋಸ್ ತೆಗೆದುಕೊಳ್ಳುವದರ ಮಹತ್ವವನ್ನು ಪೋಷಕರಿಗೆ ಮನವರಿಕೆ‌ಮಾಡಿ ಕೊಡಲು ಹೇಳಿದ್ದೇವೆ.ಹೀಗಾಗಿ ಶಾಲೆ ಕಾಲೇಜು ಬಂದ್ ಬಗ್ಗೆ ಗೊಂದಲ ಬೇಡ. ಧೈರ್ಯವಾಗಿ ಶಾಲಾ ಕಾಲೇಜು ಗಳಿಗೆ ಮಕ್ಕಳನ್ನ ಕಳುಹಿಸಿ. ನಿಮ್ಮ ಪರವಾಗಿ ಸರ್ಕಾರ ಹಾಗು ಶಿಕ್ಷಣ ಇಲಾಖೆ ಕೆಲಸ ಮಾಡ್ತಿದೆ.

ಹೀಗಾಗಿ ಭಯ ಬೇಡ, ಮಕ್ಕಳಿಗೆ ತಿಳುವಳಿಕೆ ಹೇಳಿ ಸದ್ಯಕ್ಕೆ ಶಾಲೆಗೆ ಕಳುಹಿಸಿ ಎಂದು ಸಚಿವರು ಪೋಷಕರಿಗೆ ಮನವಿ ಮಾಡಿದ್ದಾರೆ. ಮಾತ್ರವಲ್ಲ ವದಂತಿಗಳಿಗೆ ಕಿವಿಗೂಡದಂತೆ ಸಚಿವರು ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ.

ಇದನ್ನೂ ಓದಿ : School Close Karnataka : ಶಾಲೆಗಳ ಮೇಲೆ‌ ಮತ್ತೆ ಕೊರೊನಾ ಕರಿನೆರಳು: ಮತ್ತೆ ಬಾಗಿಲು‌ಮುಚ್ಚಲಿದೆ ಶಿಕ್ಷಣ ಸಂಸ್ಥೆಗಳು ?!

ಇದನ್ನೂ ಓದಿ : PUC EXAMS 2022 : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯವಾರ್ಷಿಕ ಪರೀಕ್ಷೆಯ ಅಂಕವೇ ನಿರ್ಣಾಯಕ

ಇದನ್ನೂ ಓದಿ : Teachers Suspended : ABCD ಬರೆಯಲು ಬಾರದ ಶಿಕ್ಷಕ, ಶಿಕ್ಷಕಿ ಸಸ್ಪೆಂಡ್‌ : ವಿಡಿಯೋ ವೈರಲ್‌

( Omicron School collage close in week, Do you know what Minister of Education decision)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular