ಬೆಂಗಳೂರು : ಸರಕಾರ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷ ಶಾಲೆಯಿಂದ ದೂರ ಉಳಿದ ಮಕ್ಕಳ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ಈ ವರ್ಷ ಶಾಲಾ ಶೈಕ್ಷಣಿಕ ವರ್ಷವನ್ನು 15 ದಿನ ಮುಂಚಿತವಾಗಿ ಆರಂಭಿಸಿದ್ದಾರೆ. ಆದರೆ ಶಾಲಾರಂಭ ಮಾಡಿದ್ದೊಂದೇ ಸಾಧನೆ ಬಿಟ್ಟರೇ, ಇದುವರೆಗೂ ಖಾಸಗಿ, ಅನುದಾನಿತ ಶಾಲೆಗಳಲ್ಲಿ ಪಠ್ಯಪುಸ್ತಕ ಪೊರೈಕೆಯಾಗಿಲ್ಲ. ಬ್ರಿಡ್ಜ್ ಕೋರ್ಸ್ ಕಲಿಕೆಯೂ ನಡೆಯುತ್ತಿಲ್ಲ. ಆದರೆ ಸರಕಾರ ಮಾತ್ರ ಈಗಾಗಲೇ ಪಠ್ಯ ಪುಸ್ತಕ (School Textbook ) ಪೂರೈಕೆ ಎನ್ನುತ್ತಿದೆ.
ಸದ್ಯ ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕ ವಿವಾದ ಭುಗಿಲೆದ್ದಿದೆ. ಎಡಪಂಥಿಯ ಹಲವು ಬರಹಗಾರರು ತಮ್ಮ ಪಠ್ಯಗಳನ್ನು ಕೈಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ಸಮಜಾಯಿಸಿ ನೀಡಿದ ಸರ್ಕಾರ ಪಠ್ಯಪುಸ್ತಕ ಮುದ್ರಣಗೊಂಡು ಶಾಲೆಗಳನ್ನು ತಲುಪಿದೆ ಎನ್ನುತ್ತಿದೆ. ಆದರೆ ಅಸಲಿ ವಿಚಾರ ಎಂದ್ರೇ ರಾಜ್ಯದಲ್ಲಿ ಶೈಕ್ಷಣಿಕ ವರ್ಷಾರಂಭವಾಗಿ ಈಗಾಗಲೇ 15 ದಿನ ಕಳೆದಿದ್ದರೂ ಪಠ್ಯಪುಸ್ತಕ ಪೊರೈಕೆಯಾಗಿಲ್ಲ. ಪ್ರತಿ ವರುಷ ಶಾಲೆ ಆರಂಭವಾದ ಮೊದಲ ವಾರವೇ ಪಠ್ಯ ಪೂರೈಕೆ ಆಗ್ತಿತ್ತು.ಆದರೆ ಈ ವರುಷ 15 ದಿನ ಮುಂಚಿತವಾಗಿ ಶಾಲೆ ಶುರುವಾದ್ರೂ ನೋ ಬುಕ್ಸ್. ಇದುವರೆಗೆ ಸರಕಾರಿ ಶಾಲೆಯ ಶೇ.15ರಷ್ಟು ಮಾತ್ರ ಪೂರೈಕೆ ಖಾಸಗಿ, ಅನುದಾನಿತ ಶಾಲೆಯಲ್ಲಿ ಇನ್ನೂ ಪಠ್ಯ ಪೊರೈಕೆಯಾಗಿಲ್ಲ.
ರಾಜ್ಯದಲ್ಲಿ 70 ಸಾವಿರ ಸರ್ಕಾರಿ, ಅನುದಾನ, ಖಾಸಗಿ ಶಾಲೆಗಳಿವೆ. 97 ಲಕ್ಷ ವಿದ್ಯಾರ್ಥಿಗಳು 1-10ನೇ ತರಗತಿ ನೋಂದಣಿ ಆಗಿದ್ದಾರೆ. ಈ ವರ್ಷ 64 ಲಕ್ಷ ಪಠ್ಯಪುಸ್ತಕ (School Textbook ) ಪ್ರಿಂಟ್ ಮಾಡುತ್ತಿದ್ದು. ಇದರಲ್ಲಿ ಶೇ.75ರಷ್ಟು ಮುದ್ರಣಗೊಂಡಿದೆ. ಪೂರೈಕೆ ಶೇ.15 ರಷ್ಟು ಸರ್ಕಾರಿ ಶಾಲೆಗಳಿಗೆ ಮಾತ್ರ ಪೂರೈಕೆಯಾಗಿದೆ ಎನ್ನಲಾಗುತ್ತಿದೆ. ಶಾಲೆಗಳು ಇಂಡೆಂಟ್ ಹಾಕಿ ದುಡ್ಡು ಕೊಟ್ಟರೂ ಪಠ್ಯಪುಸ್ತಕ ಪೂರೈಸಿಲ್ಲ ಎನ್ನಲಾಗ್ತಿದೆ. ಈ ವಾರದಲ್ಲಿ ಪಠ್ಯಪುಸ್ತಕ ಪೂರೈಕೆ ಮಾಡುವ ನಿರೀಕ್ಷೆಯಿದೆ ಎಂದು ಬೆಂಗಳೂರಿನ ಹೆಸರು ಹೇಳಲಿಚ್ಚಿಸದ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರು ನ್ಯೂಸ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ.
ಸರ್ಕಾರಿ ಶಾಲೆಗಳಿಗೆ ವಿವಾದಿತ ಪಠ್ಯಪುಸ್ತಕಗಳು ಇನ್ನೂ ಪೂರೈಕೆಯಾಗಿಲ್ಲ. 10ನೇ ತರಗತಿ ಕನ್ನಡ, ಸಮಾಜ ವಿಜ್ಞಾನ ಪಠ್ಯ ಅಲಭ್ಯ.ಇದರ ಜೊತೆ 8, 9 ಕನ್ನಡ ಹಾಗೂ 8ನೇ ತರಗತಿ ಸಮಾಜ ಪಠ್ಯವೂ ಪೂರೈಕೆ ಆಗಿಲ್ಲ.ಕೇವಲ ಪ್ರೌಢಶಾಲೆಯ ಪಠ್ಯಪುಸ್ತಕ ಮಾತ್ರವಲ್ಲ, ಪ್ರಾಥಮಿಕ ಶಾಲೆಯ ಪಠ್ಯಗಳು ಸಂಪೂರ್ಣ ಪೂರೈಕೆಯಾಗಿಲ್ಲ. ಸರ್ಕಾರಿ ಶಾಲೆಯ 8, 9, 10ನೇ ಕನ್ನಡ ಪಠ್ಯ ಪೂರೈಕೆ ಇಲ್ಲ. 10ನೇ ತರಗತಿ ಇಂಗ್ಲಿಷ್ ಪಠ್ಯ ಪುಸ್ತಕ (School Textbook ) ಪೂರೈಕೆ ಆಗಿಲ್ಲ
ರಾಜ್ಯದೆಲ್ಲೆಡೆ ಜೂನ್ 1ರಿಂದ ಪಠ್ಯದ ಪಾಠ ಬೇಕಿರುವ ಶಾಲೆಗಳ ಪಠ್ಯವಿಲ್ಲದೇ ಸುಮ್ಮನೆ ಕಾಲಹರಣ ಮಾಡುವಂತಾಗಿದೆ. ಅಲ್ಲದೇ ಕಲಿಕಾ ಬ್ರಿಡ್ಜ್ ಕೋರ್ಸ್ ಕೂಡ ಅನುದಾನಿತ, ಖಾಸಗಿ ಶಾಲೆಗಳಲ್ಲಿ ನಡೆಯುತ್ತಿಲ್ಲ. ಹೀಗಾಗಿ ಸರ್ಕಾರ ಹಾಗೂ ಸಚಿವರು ಸೂಕ್ತ ಸಿದ್ಧತೆ ಇಲ್ಲದೇ ಸುಮ್ಮನೇ ಶಾಲೆಯನ್ನು 15 ದಿನ ಮೊದಲೇ ಆರಂಭಿಸಿ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಪೋಷಕರು ಹಾಗೂ ಶಿಕ್ಷಕರೇ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಈ ಬಾರಿ ಮಕ್ಕಳಲ್ಲಿ ಕಲಿಕಾ ಚೇತರಿಕೆ ಮಾಡ್ತೇವೆ. ಹದಿನೈದು ದಿನ ಮುಂಚಿತವಾಗಿ ಶಾಲಾರಂಭ ಮಾಡಿಯೇ ತೀರುತ್ತೇನೆ ಅನ್ನೋ ಹಠಕ್ಕೆ ಬಿದ್ದು ಶಾಲೆಗಳನ್ನು ಆರಂಭಿಸಿದ್ದರು. ಸರಕಾರಿ ಶಾಲೆಗಳಲ್ಲಿ ಮಳೆಬಿಲ್ಲು ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಆದರೆ ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನೇ ನಡೆಸಿಲ್ಲ. ಹೀಗಿದ್ದರೆ ಅಷ್ಟು ಆತುರಾತುರವಾಗಿ, ಶಿಕ್ಷಕರ ರಜೆಯನ್ನು ಕಸಿದು ಶಾಲಾರಂಭ ಮಾಡುವ ಅನಿವಾರ್ಯತೆ ಏನಿತ್ತು ಅಂತಾ ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ ಸಚಿವ ನಾಗೇಶ್ ಅವರ ರಾಜೀನಾಮೆಗೆ ಆಗ್ರಹ ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಪಠ್ಯಪುಸ್ತಕ ಪೂರೈಕೆ ಮಾಡದೇ, ಜೊತೆಗೆ ಶಿಕ್ಷಕರ ರಜೆ ಕಸಿದ ಹಿನ್ನೆಲೆಯಲ್ಲೀಗ ಪೋಷಕರು ಹಾಗೂ ಶಿಕ್ಷಕರ ವಿರೋಧವನ್ನೂ ಸಚಿವರು ಕಟ್ಟಿಕೊಂಡಿದ್ದಾರೆ.
ಇದನ್ನೂ ಓದಿ : CBSE : ಸಿಬಿಎಸ್ಇ ಟರ್ಮ್ 2 ಪರೀಕ್ಷೆ ಫಲಿತಾಂಶ ವಿಳಂಬ ಸಾಧ್ಯತೆ : ಅಂಕಗಳ ಅಪ್ಲೋಡ್ ಮಾಡಲು ಗಡುವು ವಿಸ್ತರಿಸಿದ ಬೋರ್ಡ್
ಇದನ್ನೂ ಓದಿ : 2nd PUC Result : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ : ಇಲ್ಲಿದೆ ಮಹತ್ವದ ಮಾಹಿತಿ
Fifteen days before Start school Textbook not supplied to schools