ಸೋಮವಾರ, ಏಪ್ರಿಲ್ 28, 2025
HomeeducationUkraine medical education : ಭಾರತೀಯರು ವೈದ್ಯಕೀಯ ಶಿಕ್ಷಣಕ್ಕೆ ಉಕ್ರೇನ್ ನನ್ನೇ ಆಯ್ಕೆ ಮಾಡ್ತಿರೋದ್ಯಾಕೆ !...

Ukraine medical education : ಭಾರತೀಯರು ವೈದ್ಯಕೀಯ ಶಿಕ್ಷಣಕ್ಕೆ ಉಕ್ರೇನ್ ನನ್ನೇ ಆಯ್ಕೆ ಮಾಡ್ತಿರೋದ್ಯಾಕೆ ! ಇಲ್ಲಿದೆ ಉತ್ತರ

- Advertisement -

ನವದೆಹಲಿ : ಉಕ್ರೇನ್ ಮತ್ತು ರಷ್ಯಾ ಯುದ್ಧ ಘೋಷಣೆಯಾಗುತ್ತಿದ್ದಂತೆ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಏನೆಂದರೇ ಕರ್ನಾಟಕದ ಮೂಲೆ ಮೂಲೆಯ ಹಳ್ಳಿಯಿಂದ ಆರಂಭಿಸಿ ಕಾಶ್ಮೀರ ಕಣಿವೆವರೆಗಿನ‌ ಸಾವಿರಾರು ಮಕ್ಕಳು ಉಕ್ರೇನ್ ನಲ್ಲಿದ್ದಾರೆ. ಹೀಗೆ ಶಿಕ್ಷಣಕ್ಕಾಗಿ ತಾಯ್ನೇಲ ಬಿಟ್ಟ ಮಕ್ಕಳಲ್ಲಿ ಬಹುತೇಕರು ವೈದ್ಯಕೀಯ ವಿದ್ಯಾರ್ಥಿಗಳು. ದೇಶದಲ್ಲಿ ಇಷ್ಟೊಂದು ಮೆಡಿಕಲ್ ಕಾಲೇಜುಗಳಿರುವಾಗ ವಿದ್ಯಾರ್ಥಿಗಳು ಉಕ್ರೇನ್ ನನ್ನೇ (Ukraine medical education) ಯಾಕೆ ಆಯ್ಕೆ ಮಾಡಿಕೊಂಡರು ಅನ್ನೋದು ಈಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ಭಾರತೀಯರು ಸೇರಿದಂತೆ ವಿಶ್ವದ ಎಲ್ಲೆಡೆಯ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಮುಗಿಬೀಳ್ತಿರೋದಿಕ್ಕೆ ಕಾರಣ ಶಿಕ್ಷಣ ವೆಚ್ಚ. ಮೂಲಗಳ ಮಾಹಿತಿ ಪ್ರಕಾರ ಭಾರತದಲ್ಲಿ ಮೆಡಿಕಲ್ ಶಿಕ್ಷಣದ ವೆಚ್ಚ ಅಂದಾಜು 60 ಲಕ್ಷದಿಂದ 1 ಕೋಟಿ ರೂಪಾಯಿ. ಆದರೆ ಇದೇ ಆರು ವರ್ಷದ ಮೆಡಿಕಲ್ ಕೋರ್ಸ್ ಗೆ ಉಕ್ರೇನ್ ನಲ್ಲಿ ತಗಲುವ ವೆಚ್ಚ ಕೇವಲ 16 ರಿಂದ 22 ಲಕ್ಷ ರೂಪಾಯಿ.

ಇನ್ನೊಂದು ಕಾರಣವೆಂದರೇ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಸೀಟುಗಳ ಕೊರತೆ ಇದೆ. ಅಲ್ಲದೇ ಭಾರತದಲ್ಲಿ ನೀಟ್ ಪರೀಕ್ಷೆಯ ಮೂಲಕ ಮೆಡಿಕಲ್ ಸೀಟು ಪಡೆಯಬೇಕು. ಕೇವಲ 80,000 ಮೆಡಿಕಲ್ ಸೀಟ್ ಗಾಗಿ 2021 ರಲ್ಲಿ ಒಟ್ಟು 1.63 ಲಕ್ಷ‌ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ಇದರಿಂದಾಗಿ ಎವರೇಜ್ ಹಾಗೂ ಮಧ್ಯಮವರ್ಗದ ಮಕ್ಕಳಿಗೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಕನಸಿನ ಮಾತು. ಕೇವಲ ಇದೊಂದೆ ಕಾರಣವಲ್ಲ. ಉಕ್ರೇನ್ ನ ಶಿಕ್ಷಣದ ಗುಣಮಟ್ಟ ಜಾಗತಿಕ‌ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಸೇರಿದಂತೆ ವಿಶ್ವ ಉಕ್ರೇನ್ ನಿಂದ ಪಡೆದ ಎಂಬಿಬಿಎಸ್ ಪದವಿಗೆ ಮಾನ್ಯತೆ ನೀಡಿದೆ.

ಅಲ್ಲದೇ ಕೇವಲ 22 ಮೆಡಿಕಲ್ ಕಾಲೇಜುಗಳನ್ನು ಹೊಂದಿದ್ದರೂ ಉಕ್ರೇನ್ ಸರ್ಕಾರ ಅಲ್ಲಿನ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಪ್ರಾಕ್ಟಿಕಲ್ ಶಿಕ್ಷಣಕ್ಕೆ ಒತ್ತು ನೀಡಿದ್ದು ಹಾಸ್ಪಿಟಲ್ ಗಳಲ್ಲಿ ಅಧ್ಯಯನ ಕ್ಕೆ ಅವಕಾಶವಿದೆ. ಅಲ್ಲದೇ ಉಕ್ರೇನ್ ನಲ್ಲಿ ಆರು ವರ್ಷಗಳ ಅಧ್ಯಯನ ಮುಗಿಸಿ ಬಂದವರು ಇಲ್ಲಿನ ಫಾರಿನ್ ಗ್ರ್ಯಾಜ್ಯುಯೇಟ್ ಮೆಡಿಕಲ್ ಎಕ್ಸಾಂ ಬರೆಯಬಹುದಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ದೇಶದಲ್ಲಿ ಪ್ರ್ಯಾಕ್ಟೀಸ್ ಆರಂಭಿಸಬಹುದಾಗಿದೆ. ಇದಲ್ಲದೇ ಭಾರತದ ವೈದ್ಯರಿಗೆ ವಿಶ್ವದಾದ್ಯಂತ ಬೇಡಿಕೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಅಧ್ಯಯನ ಮಾಡಿ ಬಳಿಕ ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಉಕ್ರೇನ್ ನಲ್ಲಿ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯರಾಗುವ ಕನಸಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಇದನ್ನೂ ಓದಿ : ಯುದ್ಧಕ್ಕಿಂತ ಮುನ್ನವೇ ಭಾಷೆ, ಸಂಸ್ಕೃತಿಯನ್ನು ಹತ್ತಿಕ್ಕಿ ಉಕ್ರೇನನ್ನು ವಶಪಡಿಸಿಕೊಂಡಿದೆ ರಷ್ಯಾ; ಭದ್ರ ಭವಿಷ್ಯಕ್ಕಾಗಿ ಬೇಕು ಭಾಷೆ

ಇದನ್ನೂ ಓದಿ : ಹಾಸ್ಯನಟನಾಗಿದ್ದ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರಾದರು! ಇವರು ಸಾಮಾಜಿಕ ಜಾಲತಾಣದಿಂದಲೇ ಮತಗಿಟ್ಟಿಸಿದ ಗಟ್ಟಿಗಾರ

(why Indians choose Ukraine for medical education Here’s the answer)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular