ಭಾನುವಾರ, ಏಪ್ರಿಲ್ 27, 2025
HomeeducationJEE Main Result 2022 Session 2 : ಜೆಇಇ ಸೆಷನ್ 2 ಫಲಿತಾಂಶ ಬಿಡುಗಡೆ :...

JEE Main Result 2022 Session 2 : ಜೆಇಇ ಸೆಷನ್ 2 ಫಲಿತಾಂಶ ಬಿಡುಗಡೆ : ಕಟ್​ಆಫ್​ ಘೋಷಣೆ

- Advertisement -

JEE Main Result 2022 Session 2 : ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, ಎನ್​ಟಿಎ ಜಂಟಿ ಪ್ರವೇಶ ಪರೀಕ್ಷೆ, ಜೆಇಇ ಸೆಷನ್​ 2ರ ಮುಖ್ಯ ಫಲಿತಾಂಶವು ಇಂದು ಬಿಡುಗಡೆ ಗೊಂಡಿದೆ. ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮುಖ್ಯ ವೆಬ್​ಸೈಟ್​ jeemain.nta.nic.inಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಪಡೆದುಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕ ಹಾಗೂ ಅರ್ಜಿ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ. ಇದರ ಜೊತೆಯಲ್ಲಿ ಜೆಇಇ 2022 ಕಟ್​ ಆಫ್​ನ್ನೂ ಬಿಡುಗಡೆ ಮಾಡಿದ್ದು ವಿದ್ಯಾರ್ಥಿಘಳು ಜೆಇಇ ಮೇನ್​ ವರ್ಗವಾರು ಕಟ್​ಆಫ್​ಗಳನ್ನು ವೀಕ್ಷಿಸಬಹುದಾಗಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಜೆಇಇ ಮೇನ್​ ಪರೀಕ್ಷೆಗೆ ಹಾಜರಾದವರ ಅಂಕಗಳು ಮೆರಿಟ್ ಪಟ್ಟಿಯಲ್ಲಿ ಸಿಗಲಿದೆ .

ಜೆಇಇ ಮುಖ್ಯ ಫಲಿತಾಂಶ ವೀಕ್ಷಿಸಲು ಇಲ್ಲಿದೆ ಮಾರ್ಗ :
NTA JEE, jeemain.nta.nic.in ಅಥವಾ nta.ac.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ .
ಹೋಮ್​ಪೇಜ್​ನಲ್ಲಿ JEE ಮುಖ್ಯ ಫಲಿತಾಂಶ 2022 ರ ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ.
ಅರ್ಜಿ ಸಂಖ್ಯೆ ಹಾಗೂ ನಿಮ್ಮ ಜನ್ಮದಿನಾಂಕವನ್ನು ಬಳಕೆ ಮಾಡಿ ಲಾಗಿನ್​ ಆಗಿ ಇದಾದ ಬಳಿಕ ಸಲ್ಲಿಸು ಬಟನ್​ ಮೇಲೆ ಕ್ಲಿಕ್​ ಮಾಡಿ.
ಈಗ ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಲಿದೆ. ಭವಿಷ್ಯದ ಬಳಕೆಗಾಗಿ ಇದನ್ನು ಡೌನ್​ಲೋಡ್​ ಮಾಡಿಕೊಳ್ಳಿ.

JEE ಮೇನ್ ಫಲಿತಾಂಶ‌ ಪರಿಶೀಲಿಸಲು ವೆಬ್‌ಸೈಟ್‌ಗಳು :
jeemain.nta.nic.in ಫಲಿತಾಂಶ 2022
ntaresults.nic.in 2022
www.nta.ac.in 2022
ಜೆಇಇ ಮೇನ್ 2022 ರ ವರ್ಗವಾರು ಕಟ್-ಆಫ್‌ :

Common Rank List – 88.4121383
GEN-EWS – 63.1114141
OBC-NCL – 67.0090297
SC – 43.0820954
ST – 26.7771328
PwD – 0.0031029

ಐಐಟಿ ಜೆಇಇ ಅಡ್ವಾನ್ಸ್​​ಗೆ ಇಂದಿನಿಂದ ನೋಂದಣಿ ಆರಂಭ :
ಜುಲೈ 25 ರಿಂದ ಜುಲೈ 30ರವರೆಗೆ ಎರಡು ಪಾಳಿಗಳಲ್ಲಿ 2022ನೇ ಸಾಲಿನ ಜೆಇಇ ಮೇನ್​ ಪರೀಕ್ಷೆಯನ್ನು ನಡೆಸಲಾಗಿದೆ. ಇದಾದ ಬಳಿಕ ಕೀ ಆನ್ಸರ್​ಗಳನ್ನೂ ಬಿಡುಗಡೆ ಮಾಡಲಾಗಿತ್ತು. ಇದೀಗ ಜೆಇಇ ಮೇನ್​ 2022ರ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಇಂದಿನಿಂದ IIT JEE ಅಡ್ವಾನ್ಸ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನು ಓದಿ : Indian Cricket Team: ಮೊಬೈಲ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡದ ಫೈನಲ್ ವೀಕ್ಷಿಸಿದ ರೋಹಿತ್ ಶರ್ಮಾ & ಟೀಮ್

ಇದನ್ನೂ ಓದಿ : India Women Cricket Team : 5 ವರ್ಷ 3 ಫೈನಲ್ 3 ಸೋಲು… ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಕಾಡುತ್ತಿದೆ “ಫೈನಲ್ ಫೋಬಿಯಾ”

JEE Main Result 2022 Session 2 : JEE Mains result at jeemain.nta.nic.in, cut off of top IITs, NITs

RELATED ARTICLES

Most Popular