ಬೆಂಗಳೂರು : karnataka cet : ರಾಜ್ಯದಲ್ಲಿ ನಡೆದಿರುವ ಸಿಇಟಿ ಪರೀಕ್ಷೆಯ ಫಲಿತಾಂಶಗಳನ್ನು ಜುಲೈ 30ರಂದು ಪ್ರಕಟಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಮಾಹಿತಿ ನೀಡಿದ್ದಾರೆ. ಜೂನ್ ಮಧ್ಯ ವಾರದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು. ಇಂದು ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಫಲಿತಾಂಶ ಘೋಷಣೆಯ ದಿನಾಂಕವನ್ನು ಪ್ರಕಟಿಸಿದ್ದಾರೆ.
ಪರೀಕ್ಷಾ ಅಕ್ರಮಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಈ ಬಾರಿ ಸಿಇಟಿ ಪರೀಕ್ಷೆಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಹಾಗೂ ಭದ್ರತೆಗಳ ಸಮೇತ ನಡೆಸಲಾಗಿತ್ತು. ಈ ಬಾರಿ ಸಿಬಿಎಸ್‌ಇ ಹಾಗೂ ಐಸಿಎಸ್ಇ ಪಠ್ಯ ಕ್ರಮದ ವಿದ್ಯಾರ್ಥಿಗಳಿಗೂ ಜೂನ್ ಮಧ್ಯಭಾಗದಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ಅವಕಾಶವನ್ನು ನೀಡಲಾಗಿತ್ತು. ವಿದ್ಯಾರ್ಥಿಗಳು ಜುಲೈ 26ರರ(ಮಂಗಳವಾರ) ಒಳಗಾಗಿ ತಮ್ಮ ಅಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ನಮೂದಿಸಬೇಕು ಎಂದು ಸೂಚನೆ ನೀಡಲಾಗಿದೆ.
ಜೂನ್ 16,17 ಹಾಗೂ 18ರಂದು ರಾಜ್ಯದಲ್ಲಿ ಸಿಇಟಿ ಪರೀಕ್ಷೆಗಳನ್ನು ನಡೆಸಲಾಗಿತ್ತು.ಜುಲೈ 30ರಂದು ಪ್ರಕಟವಾಗುವ ಫಲಿತಾಂಶವನ್ನು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.kar.nic.in ನಲ್ಲಿ ವೀಕ್ಷಿಸಬಹುದಾಗಿದೆ . ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಪರ ಕೋರ್ಸ್ಗಳಿಗೆ ಸಿಇಟಿ ಅಂಕ ಮುಖ್ಯವಾಗಿದೆ.
CBSE 12 ನೇ ತರಗತಿ ಫಲಿತಾಂಶ 2022 ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) CBSE 12 ನೇ ತರಗತಿ ಫಲಿತಾಂಶಗಳನ್ನು 2022 ರ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಟರ್ಮ್ 1 ಮತ್ತು ಟರ್ಮ್ 2 ಪರೀಕ್ಷೆಗಳಿಗೆ ನೀಡಲಾದ ಅಂಕಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ ಹಾಗೂ ಡಿಜಿಲಾಕರ್ ಮೂಲಕ ಫಲಿತಾಂಶವನ್ನು ವೀಕ್ಷಣೆ ಮಾಡಬಹುದಾಗಿದೆ.
ಸಿಬಿಎಸ್‌ಇ ಬೋರ್ಡ್ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ಎಪ್ರಿಲ್ 26 ರಿಂದ ಜೂನ್ 15ರ ವರೆಗೆ ನಡೆಸಿತ್ತು. ಇಂದು ಬೆಳಗ್ಗೆ 9:30ಕ್ಕೆ ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿತ್ತು. ಅಲ್ಲದೇ ಇಂದು ಮಧ್ಯಾಹ್ನ 2 ಗಂಟೆಗೆ 10 ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದೆ. ದೇಶದಾದ್ಯಂತ ಒಟ್ಟು 16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದರು. ಈ ಪೈಕಿ 91.54% ರಷ್ಟು ವಿದ್ಯಾರ್ಥಿಗಳು ಹಾಗೂ 91.25% ಬಾಲಕರು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳು ಈಗ ಅಧಿಕೃತ ಪೋರ್ಟಲ್ – cbseresults.nic.in ಮತ್ತು DigiLocker ಅಪ್ಲಿಕೇಶನ್ ಮತ್ತು Umang ಅಪ್ಲಿಕೇಶನ್ ಮೂಲಕ ಲಾಗ್ ಇನ್ ಮಾಡುವ ಮೂಲಕ CBSE XII ಫಲಿತಾಂಶ 2022 ಅನ್ನು ಟರ್ಮ್ 2 ಗಾಗಿ ಪರಿಶೀಲಿಸಬಹುದು. ತಮ್ಮ CBSE 12 ನೇ ತರಗತಿ ಫಲಿತಾಂಶಗಳನ್ನು 2022 ಪರಿಶೀಲಿಸಲು, ವಿದ್ಯಾರ್ಥಿಗಳು ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ ಮತ್ತು ಅವರ ಪರೀಕ್ಷಾ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಪ್ರವೇಶ ಕಾರ್ಡ್ ಐಡಿಯನ್ನು ನಮೂದಿಸಬೇಕಾಗುತ್ತದೆ. ಈ ವಿವರಗಳನ್ನು ಇನ್‌ಪುಟ್ ಮಾಡಿದ ನಂತರ, ವಿದ್ಯಾರ್ಥಿಗಳಿಗೆ CBSE 12ನೇ ಫಲಿತಾಂಶ 2022 ಅಂಕಪಟ್ಟಿ ಅಥವಾ ಅಂತಿಮ ಫಲಿತಾಂಶಗಳನ್ನು ಒಳಗೊಂಡಿರುವ ಮಾರ್ಕ್‌ಶೀಟ್ ಅನ್ನು ಒದಗಿಸಲಾಗುತ್ತದೆ.
ಇದನ್ನು ಓದಿ : monkey pox cases : ಏನಿದು ಮಂಕಿ ಪಾಕ್ಸ್ ಸೋಂಕು, ಲಕ್ಷಣಗಳೇನು, ಮುಂಜಾಗ್ರತಾ ಕ್ರಮ ಹೇಗಿರಬೇಕು : ಇಲ್ಲಿದೆ ಮಾಹಿತಿ
ಇದನ್ನೂ ಓದಿ : Most Consecutive ODI Series WIN : ಪಾಕ್ ವಿಶ್ವದಾಖಲೆ ಪೀಸ್ ಪೀಸ್, ವಿಂಡೀಸ್”ನಲ್ಲಿ ಅದ್ವಿತೀಯ ವಿಶ್ವದಾಖಲೆ ಬರೆದ ಯಂಗ್ ಇಂಡಿಯಾ