ಬೆಂಗಳೂರು :Karnataka School Admissions 2023-24 : ಕೊರೊನಾದಿಂದಾಗಿ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆ ಕೆಟ್ಟು ಕೂತಿತ್ತು. ಆನ್ ಲೈನ್ ಶಿಕ್ಷಣದಿಂದ ಮಕ್ಕಳು ಶಾಲೆಯ ಮುಖವನ್ನೇ ನೋಡಿರಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಕೂಡ ನಷ್ಟದ ಭೀತಿಯಲ್ಲಿದ್ದವು. ಈಗ ಮತ್ತೆ ಶಾಲಾ ಕಾಲೇಜುಗಳು ಆರಂಭವಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಈ ಮಧ್ಯೆ ನಷ್ಟ ಸರಿತೂಗಿಸಿಕೊಂಡು ಮುಂದಕ್ಕೆ ಸಾಗಲು ಶಿಕ್ಷಣ ಸಂಸ್ಥೆಗಳು ಅಕ್ಷರಶಃ ಸುಲಿಗೆಗೆ ಇಳಿದಿವೆ. ಶೈಕ್ಷಣಿಕ ವರ್ಷ ಮುಗಿಯೋದಿಕ್ಕೆ ಮೊದಲೇ ಈಗಲೇ ಶಾಲಾ ಪ್ರವೇಶಾತಿ ಆರಂಭಿಸಿವೆ.
ಹೌದು, ಶಿಕ್ಷಣದ ವ್ಯಾಪಾರೀಕರಣದ ಕೂಗು ಜೋರಾಗಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಆರು ತಿಂಗಳು ಮೊದಲೇ ಶಾಲಾ ಪ್ರವೇಶ ಪ್ರಾರಂಭವಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶ ಈಗಲೇ ಶುರುವಾಗಿದ್ದು ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳು ಪ್ರವೇಶಾತಿ ಆಹ್ವಾನ ಪತ್ರಿಕೆ ಹಂಚಲಾರಂಭಿಸಿವೆ. 20223-24 ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಾರಂಭ
ಈ ಬಗ್ಗೆ ಈಗಲೇ ಜಾಹೀರಾತು ನೀಡಿದ ಖಾಸಗಿ ಶಾಲೆಗಳು ಮಕ್ಕಳ ದಾಖಲಾತಿ ಮಾಡುವಂತೆ ಪೋಷಕರನ್ನು ಮನವೊಲಿಸಲಾರಂಭಿಸಿವೆ.
ಶಿಕ್ಷಣ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಪ್ರವೇಶಾತಿ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲು ಬಿಇಒಗಳು ಹಿಂದೇಟು ಹಾಕಿದ್ದಾರೆ. ಪ್ರತಿವರ್ಷ ಶಿಕ್ಷಣ ಇಲಾಖೆ ಅಯಾ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಮಾತ್ರ ಬಿಡುಗಡೆ ಮಾಡಲಾಗುತ್ತೆ. ಆದ್ರೆ ಇದಕ್ಕೆಲ್ಲ ಕಾಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಶುಲ್ಕ ಹೆಚ್ಚಿಸಿಕೊಂಡು ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಿವೆ. ಈ ಬಗ್ಗೆ ಪೋಷಕರು ಅಧಿಕಾರಿಗಳ ಗಮನಕ್ಕೂ ತಂದ್ರು ಯಾವುದೇ ಪ್ರಯೋಜನವಾಗಿಲ್ಲ.
ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಸೂಲಿ ನೀತಿ ಜೋರಾಗಿದ್ದು, ಈ ಬಗ್ಗೆ ಪೋಷಕರ ಸಮನ್ವಯ ಸಮಿತಿ ಹಾಗೂ ಶುಲ್ಕ ನಿಯಂತ್ರಣ ಸಮಿತಿ ರಚಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ. ಆದರೆ ಇದೆಲ್ಲದರ ಮಧ್ಯೆ ಖಾಸಗಿ ಶಾಲೆಗಳು ಮುಂದಿನ ವರ್ಷದ ದಾಖಲಾತಿ ಪ್ರಾರಂಭಿಸಿಕೊಂಡಿವೆ. ಅದರಲ್ಲೂ ಚಿಕ್ಕ ಪುಟ್ಟ ಖಾಸಗಿ ಶಾಲೆಗಳು ಇನ್ನೂ ಪ್ರವೇಶಕ್ಕೆ ಸಿದ್ಧತೆ ನಡೆಸಿಲ್ಲ.ನಗರದ ಕಾರ್ಪೋರೇಟ್ ಶಿಕ್ಷಣ ಸಂಸ್ಥೆಗಳು ಮಾತ್ರ ಅದ್ದೂರಿಯಾಗಿ ಶಾಲಾರಂಭಕ್ಕೆ, ಪ್ರವೇಶಾತಿಗೆ ಸಿದ್ಧತೆ ನಡೆಸಿದೆ. ಆದರೆ ಇದಕ್ಕೆ ಸರ್ಕಾರವಾಗಲಿ ಅಥವಾ ಸಂಬಂಧಿಸಿದ ಇಲಾಖೆಯ ಬಿಇಓಗಳಾಗಲಿ ಯಾರೂ ಕೂಡ ಕ್ರಮ ಕೈಗೊಂಡಿಲ್ಲ. ಇದರಿಂದ ಪೋಷಕರು ಕೂಡ ಈ ಖಾಸಗಿ ಶಾಲೆಗಳ ಲಾಭಿಗೆ ಬಿದ್ದಿದ್ದು, ಮಕ್ಕಳ ಭವಿಷ್ಯದ ಕಾರಣಕ್ಕೆ ಕಟ್ಟು ಬಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳ ಸುಲಿಗೆಗೆ ಬಲಿಯಾಗ್ತಿದ್ದಾರೆ.
ಇದನ್ನೂ ಓದಿ : ದಸರಾ ರಜೆ ಗೊಂದಲ : ಸೋಮವಾರದಿಂದಲೇ ಶಾಲೆ ಆರಂಭ, ಪರೀಕ್ಷೆ ಮುಂದೂಡಿಕೆ
ಇದನ್ನೂ ಓದಿ : ಹಿಜಾಬ್ ಧರಿಸಲು ಶಾಲೆ, ಕಾಲೇಜುಗಳಲ್ಲಿ ಅವಕಾಶವಿಲ್ಲ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್
Karnataka School Admissions 2023-24, Parents Troubling from Private Educational Institutions