ಸೋಮವಾರ, ಏಪ್ರಿಲ್ 28, 2025
HomeeducationSchool Reopening : ಕರ್ನಾಟಕದಲ್ಲಿ ನಾಳೆಯಿಂದ ಶಾಲಾರಂಭ : ಏನಿದು ಕಲಿಕಾ ಚೇತರಿಕೆ, ಮಳೆಬಿಲ್ಲು ಮಕ್ಕಳ...

School Reopening : ಕರ್ನಾಟಕದಲ್ಲಿ ನಾಳೆಯಿಂದ ಶಾಲಾರಂಭ : ಏನಿದು ಕಲಿಕಾ ಚೇತರಿಕೆ, ಮಳೆಬಿಲ್ಲು ಮಕ್ಕಳ ಹಬ್ಬ

- Advertisement -

ಬೆಂಗಳೂರು : ಕರ್ನಾಟಕದಲ್ಲಿ ನಾಳೆಯಿಂದ ಶಾಲೆಗಳು ಪುನರರಾಂಭಗೊಳ್ಳಲಿವೆ. ಶಾಲಾ ಪ್ರಾರಂಭೋತ್ಸವಕ್ಕೆ (School Reopening) ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಲಿಕಾ ಚೇತರಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಬಾರಿ ಹದಿನೈದು ದಿನಗಳ ಕಾಲ ರಜೆಯನ್ನು ಕಡಿತ ಮಾಡಲಾಗಿದ್ದು, ಮಳೆಬಿಲ್ಲು ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಳೆದ ಎರಡು ವರ್ಷಗಳಿಂದಲೂ ಕೋವಿಡ್‌ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗೆ ತೊಡಕಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಬೇಸಿಗೆ ರಜೆಯನ್ನು ಕಡಿತಗೊಳಿಸಿ, ಹದಿನೈದು ದಿನಗಳ ಕಾಲ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಕ್ಕಳನ್ನು ಕಲಿಕೆಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಈಗಾಗಲೇ ಬೇಸಿಗೆ ರಜೆಯಲ್ಲಿಯೇ ಶಿಕ್ಷಕರಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮದ ಕುರಿತು ತರಬೇತಿಯನ್ನು ನೀಡಲಾಗಿದೆ. ನಾಳೆಯಿಂದ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭವಾಗಲಿದೆ.

School Reopening : ಏನಿದು ಕಲಿಕಾ ಚೇತರಿಕೆ ? ಶಾಲೆಗಳಲ್ಲಿ ಹೇಗಿರುತ್ತೆ ಮಳೆ ಬಿಲ್ಲು ‌

2022-23 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಲಾಗಿದೆ. ಕಲಿತಾ ಚೇತರಿಕೆ ಅನ್ನೋ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 1 ರಿಂದ 9 ನೇ ತರಗತಿಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಒಟ್ಟು ಎರಡು ವಾರಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಮಳೆಬಿಲ್ಲು ಎಂದು ಹೆಸರಿಡಲಾಗಿದೆ. ಮಳೆ ಬಿಲ್ಲು ಕಾರ್ಯಕ್ರಮದ ಮೂಲಕ ಮಕ್ಕಳೆಲ್ಲಾ ಲವಲವಿಕೆಯಿಂದ ದಿನವನ್ನು ಕಳೆಯಲು ಯೋಜನೆಯನ್ನು ಸಿದ್ದಪಡಿಸಲಾಗಿದೆ. ಮೊದಲ ದಿನ ಆಟದ ಹಬ್ಬ, ಎರಡನೇ ದಿನ ಆಟಿಕೆ ತಯಾರಿ, ಮೂರನೇ ಮತ್ತು ನಾಲ್ಕನೇ ದಿನ ನಾಟಕ ಹಬ್ಬ, ಐದನೇ ದಿನ ಚಿತ್ರ- ಚಿತ್ತಾರ ಕಲಾ ಹಬ್ಬ, ಆರನೇ ದಿನ ಚಿತ್ರ ಜಗತ್ತು, ಏಳನೇ ದಿನ ಕಥೆಗಳ ಹಬ್ಬ, ಎಂಟನೇ ದಿನ ಕವಿತೆ ಕಟ್ಟೋಣ ಹಾಡು ಹಾಡೋಣ, ಒಂಬತ್ತನೇ ದಿನ ಪರಿಸರ ಹಬ್ಬ, ಹತ್ತನೇ ದಿನ ಗಣಿತದ ಗಮ್ಮತ್ತು, ಹನ್ನೊಂದನೇ ದಿನ ಇತಿಹಾಸದ ಹಬ್ಬ – ನಾವಿನ್ನೂ ಮರೆತಿಲ್ಲ, ಹನ್ನೆರಡನೇ ದಿನ ಅಡುಗೆ ಮನೆಯಲ್ಲಿ ವಿಜ್ಞಾನ, ಹದಿಮೂರನೇ ದಿನ ಗೊಂಚಲು – ಸಾಂಸ್ಕೃತಿಕ ಸಂಭ್ರಮ, ಹದಿನಾಲ್ಕನೇ ದಿನ ಶಾಲೆ ಸಿಂಗಾರ ಸೇರಿದಂತೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಎಸ್‌ಎಸ್‌ಎಲ್‌ ಸಿ ಫಲಿತಾಂಶ (SSLC Result ) ಪರಿಶೀಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎಸ್‌ಎಸ್‌ಎಲ್‌ ಸಿ ಪರೀಕ್ಷಾ ಫಲಿತಾಂಶವು ಮೇ 19 ರಂದು ಪ್ರಕಟವಾಗಲಿದೆ. ಫಲಿತಾಂಶ ಪ್ರಕಟಿಸಲು ಪ್ರೌಢಶಾಲಾ ಪರೀಕ್ಷಾ ಮಂಡಳಿ ಈಗಾಗಲೇ ಸಿದ್ದತೆಯನ್ನು ಮಾಡಿಕೊಂಡಿದೆ. ಫಲಿತಾಂಶ ಪ್ರಕಟವಾದ ನಂತರದಲ್ಲಿ ವಿದ್ಯಾರ್ಥಿಗಳು ಲಾಖೆಯ ಅಧಿಕೃತ ವೆಬ್‌ಸೈಟ್‌ karresults.nic.in, sslc.karnataka.gov.in ಮತ್ತು dipr.karnataka.gov.in ನಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ.

2022 ರ ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು ಎಂಬುದು ಇಲ್ಲಿದೆ

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು – sslc.karnataka.gov.in ಅಥವಾ karresults.nic.in
  • ನಂತರ, ಮುಖಪುಟದಲ್ಲಿ ಸೂಕ್ತವಾದ ಲಿಂಕ್ ಅನ್ನು ಕ್ಲಿಕ್ ಮಾಡಿ
  • ರೋಲ್ ಸಂಖ್ಯೆ ಮತ್ತು ಇತರ ವಿವರಗಳಂತಹ ಅಗತ್ಯವಿರುವ ವಿವರಗಳನ್ನು ನಮೂದಿಸಿ
  • ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ
  • ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ
  • ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶದ ಮುದ್ರಣವನ್ನು ತೆಗೆದುಕೊಳ್ಳಿ.

ಇದನ್ನೂ ಓದಿ : ಫಲಿತಾಂಶಕ್ಕೂ ಮುನ್ನ ಸಿಹಿಸುದ್ದಿ ಕೊಟ್ಟ SSLC ಬೋರ್ಡ್: ಈ ವರ್ಷವೂ ಸಿಗಲಿದೆ ಶೇಕಡಾ 10 ಗ್ರೇಸ್ ಅಂಕ

ಇದನ್ನೂ ಓದಿ : ಸಿಜಿಬಿಎಸ್‌ಇ ಫಲಿತಾಂಶ ಪ್ರಕಟ : ಫಲಿತಾಂಶ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ

Karnataka School Reopening and SSLC Result, BC Nagesh finally confirmed date

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular