ಬೆಂಗಳೂರು : ಕರ್ನಾಟಕದಲ್ಲಿ ದಿನೇ ದಿನೇ ಬೇಸಿಗೆಯ ಬಿಸಿ ಏರುತ್ತಿದೆ. ಮಕ್ಕಳಿಗೆ ಪರೀಕ್ಷೆ ಮುಗಿದು ಬೇಸಿಗೆ ರಜೆಯು ಆರಂಭಗೊಳ್ಳುತ್ತಿದೆ. ಆದರೆ ಈ ಬಾರಿ ಯಾವಾಗಿಂದ ಬೇಸಿಗೆ ರಜೆ ( Karnataka school summer holiday) ಆರಂಭವಾಗಲಿದೆ. ಅಲ್ಲದೇ ಎಷ್ಟು ದಿನಗಳ ಕಾಲ ರಜೆ ಸಿಗಲಿದೆ ಅನ್ನೋ ಮಾಹಿತಿ ಇಲ್ಲಿದೆ.
ಎಸ್‌ಎಸ್ಎಲ್‌ಸಿ ಪರೀಕ್ಷೆಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಸಿಬಿಎಸ್‌ಇ (CBSE) ಹಾಗೂ ಐಸಿಎಸ್ಇ (ICSE) ಪಠ್ಯಕ್ರಮವನ್ನು ಬೋಧಿಸುವ ಖಾಸಗಿ ಶಾಲೆಗಳಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈಗಾಗಲೇ ವಾರ್ಷಿಕ ಪರೀಕ್ಷೆ ಆರಂಭಗೊಂಡಿದೆ.

ಮಾರ್ಚ್ ಕೊನೆಯ ವಾರದಲ್ಲಿಯೇ ಸಿಬಿಎಸ್ಐ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಆಗಲಿದೆ. ಆದರೆ ರಾಜ್ಯ ಪಠ್ಯಕ್ರಮದಲ್ಲಿ (Karnataka Board Exams) ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಇದೇ ವಾರ ಪರೀಕ್ಷೆ ಆರಂಭಗೊಂಡಿದೆ. ಪರೀಕ್ಷೆ ಮುಗಿದ ನಂತರದಲ್ಲಿ ವಿದ್ಯಾರ್ಥಿಗಳು ಎಂದಿನಂತೆಯೇ ಎಪ್ರೀಲ್ 10ರ ವರೆಗೆ ತರಗತಿಗಳಿಗೆ ಹಾಜರಾಗಬೇಕಾಗಿದೆ.
Also Read : 50 ರೂ. ಹೂಡಿಕೆ ಮಾಡಿ 35 ಲಕ್ಷ ರೂ. ಪಡೆಯಿರಿ : ಅಂಚೆ ಇಲಾಖೆಯ ಗ್ರಾಮ ಸುರಕ್ಷಾ ಯೋಜನೆ
ಬದಲಾಗಲಿದ್ಯಾ school summer holiday ?
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗಾಗಲೇ ಬೇಸಿಗೆ ರಜೆಯ ದಿನಾಂಕದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಈ ಬಾರಿಯ ಬೇಸಿಗೆ ರಜೆಗಳು ಏಪ್ರಿಲ್‌ನಲ್ಲಿ ಮೊದಲವಾರ ಅಂದ್ರೆ ಏಪ್ರಿಲ್ 10 ರಿಂದ ಮೇ 28 ರವರೆಗೆ ಇರುವ ಸಾಧ್ಯತೆಯಿದೆ.
ಇನ್ನೊಂದೆಡೆಯಲ್ಲಿ ಬಿಸಿಲ ಝಳ ವಿಪರೀತವಾಗಿ ಏರಿಕೆ ಆಗುತ್ತಿದೆ. ಸರಕಾರದ ಅಧಿಕಾರಿಗಳೇ ಮಧ್ಯಾಹ್ನದ ಬಿಸಿಲಿನ ಕಾರಣಕ್ಕೆ ಮನೆಯಿಂದ ಹೊರಗೆ ಬರಬೇಡಿ ಅನ್ನೋ ಸೂಚನೆಯನ್ನು ಈಗಾಗಲೇ ನೀಡಿದ್ದಾರೆ. ಎಪ್ರಿಲ್ ಮೊದಲ ವಾರದಲ್ಲಿ ಇನ್ನಷ್ಟು ಬಿಸಿಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದೇ ಕಾರಣದಿಂದಲೇ ಶಾಲಾ ಮಕ್ಕಳ ಬೇಸಿಗೆ ರಜೆಯನ್ನು ಅವಧಿಗೆ ಮುನ್ನವೇ ನೀಡುವ ಸಾಧ್ಯತೆಯೂ ಇದೆ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರು ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪರೀಕ್ಷೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಈ ಕುರಿತು ಅಧಿಕೃತ ಆದೇಶ ಹೊರ ಬರುವ ಸಾಧ್ಯತೆಯಿದೆ.

ರಾಜ್ಯದ ಶಿಕ್ಷಣ ಇಲಾಖೆ ಈಗಾಗಲೇ ಪ್ರಕಟಿಸಿರುವ ಆದೇಶದ ಪ್ರಕಾರ, ರಜೆಯ ಅವಧಿಯು ಏಪ್ರಿಲ್ 11 ರಿಂದ ಪ್ರಾರಂಭವಾಗಲಿದ್ದು ಮೇ ಅಂತ್ಯದವರೆಗೆ ಇರಲಿದೆ. ಇದರಿಂದಾಗಿ ಸುಮಾರು 2 ತಿಂಗಳ ಕಾಲ ವಿದ್ಯಾರ್ಥಿಗಳು ರಜೆ ಮಜಾ ಅನುಭವಿಸಲಿದ್ದಾರೆ.
ಬೇಸಿಗೆ ರಜೆಯ ಅವಧಿಗಳು ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ರಜೆ ಮತ್ತು ಇತರ ಚಟುವಟಿಕೆಗಳನ್ನು ನಿಗದಿಪಡಿಸಲು ಸಮಯವನ್ನು ಒದಗಿಸುತ್ತವೆ. ಕರ್ನಾಟಕದಲ್ಲಿ, ವಿವಿಧ ಹಂತಗಳಲ್ಲಿ ಹಲವಾರು ಪರೀಕ್ಷೆಗಳು ಈಗಾಗಲೇ ಪ್ರಾರಂಭವಾಗಿವೆ. ಪಿಯು ಪರೀಕ್ಷೆಗಳು ಬಹುತೇಕ ಅಂತ್ಯಗೊಂಡಿವೆ, ಆದರೆ 10 ನೇ ತರಗತಿ ಪರೀಕ್ಷೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ.
Also Read : ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಬಿಎಡ್ ಕಡ್ಡಾಯವಲ್ಲ : ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾರ್ಥಿಗಳಿಗೆ ಇತರ ಶಾಲಾ ಮಟ್ಟದ ಪರೀಕ್ಷೆಗಳು ಸಹ ಪ್ರಾರಂಭವಾಗಿವೆ. ಈ ಪರೀಕ್ಷೆಗಳಲ್ಲಿ ಹೆಚ್ಚಿನವು ಮಾರ್ಚ್ ಅಂತ್ಯದ ವೇಳೆಗೆ ಕೊನೆಗೊಳ್ಳುತ್ತವೆ. ಕರ್ನಾಟಕ ರಾಜ್ಯ ಸರ್ಕಾರವು ಬೇಸಿಗೆ ರಜೆಯ ವೇಳಾಪಟ್ಟಿಯನ್ನು ಪ್ರಕಟಿಸುವ ವೇಳೆಯಲ್ಲಿ ಬಿಸಿಲಿನ ಝಳವನ್ನು ಪರಿಗಣಿಸುವ ಸಾಧ್ಯತೆಯೂ ಇದೆ.
Karnataka school summer holiday start and end date in Kannada News