ಭಾನುವಾರ, ಏಪ್ರಿಲ್ 27, 2025
HomeeducationStudents bus pass validity : ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ, ಜೂನ್ 15ರ ವರೆಗೆ...

Students bus pass validity : ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ, ಜೂನ್ 15ರ ವರೆಗೆ ಕೆಎಸ್ಆರ್ ಟಿಸಿ ಬಸ್ ಪಾಸ್ ವಿಸ್ತರಣೆ

- Advertisement -

ಬೆಂಗಳೂರು : ಕರ್ನಾಟಕದಲ್ಲಿ 2023 – 24ನೇ ಸಾಲಿನ ಶೈಕ್ಷಣಿಕ (Students bus pass validity) ಅವಧಿಯಂತೆ ಇಂದಿನಿಂದ (ಮೇ 31) ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿದ್ದು, ಬೇಸಿಗೆ ರಜೆಯನ್ನು ಮುಗಿಸಿಕೊಂಡು ವಿದ್ಯಾರ್ಥಿಗಳು ಶಾಲೆ ಅತ್ತ ಹೊರಟಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಸಾರಿಗೆ ನಿಗಮದಿಂದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯೊಂದು ನೀಡಿದೆ. ಅದೆನೆಂದರೆ ಕೆಎಸ್‌ಆರ್‌ಟಿಸಿ, ವಿದ್ಯಾರ್ಥಿಗಳ ಹಳೆಯ ಬಸ್‌ ಪಾಸ್‌ ಅವಧಿಯನ್ನು ಜೂನ್‌ 15ರ ವರೆಗೂ ಹಳೆಯ ವಿಸ್ತರಣೆ ಮಾಡಿದ್ದಾರೆ. ಸದ್ಯ ಈ ಆದೇಶವನ್ನು ಇಂದಿನಿಂದ ಜಾರಿ ಮಾಡಿದ್ದು, ಇದು ರಾಜ್ಯದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ ಎನ್ನಲಾಗಿದೆ.

ಹೀಗಾಗಿ ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷದ ಪಾಸುಗಳನ್ನೇ ಬಸ್‌ಗಳಲ್ಲಿ ತೋರಿಸಿಕೊಂಡು ಪ್ರಯಾಣ ಮಾಡಬಹುದು. ಪಾಸ್‌ ಇಲ್ಲದಿದ್ರೆ ಪ್ರಸಕ್ತ ವರ್ಷದ ಶಾಲಾ ಶುಲ್ಕ ರಸೀದಿ ತೋರಿಸಬೇಕೆಂದು ಕೆಎಸ್‌ಆರ್‌ಟಿಸಿ ತನ್ನ ಆದೇಶದಲ್ಲಿ ತಿಳಿಸಿದೆ.ಈಗಾಗಲೇ ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಅಂತ್ಯವಾಗಿದ್ದು, ಇಂದಿನಿಂದ ಶಾಲೆ ಪ್ರಾರಂಭವಾಗಿದೆ. ಇನ್ನು ಶಾಲೆಗೆ ಮಕ್ಕಳನ್ನು ಬರಮಾಡಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಒಂದಷ್ಟು ಮಾರ್ಗಸೂಚನೆಗಳನ್ನು ನೀಡಿದೆ. ಅದರಲ್ಲಿ ಪ್ರಾರಂಭೋತ್ಸವ ನಡೆಸಿ ಮೊದಲ ದಿನ ಮಕ್ಕಳನ್ನು ಬರಮಾಡಿಕೊಳ್ಳಬೇಕು.

ಇದನ್ನೂ ಓದಿ : School reopens in Karnataka : ರಾಜ್ಯದಾದ್ಯಂತ ಇಂದು ಶಾಲಾರಂಭ : ಮೊದಲ ದಿನ ಹೇಗಿತ್ತು ಮಕ್ಕಳ ಸಂಭ್ರಮ

ಮೊದಲ ದಿನ ಬಿಸಿಯೂಟದಲ್ಲಿ ಸಿಹಿ ವಿತರಿಸಬೇಕು ಎನ್ನಲಾಗಿದೆ. ಹಾಗೆಯೇ ಮೊದಲ ದಿನವೇ ಒಂದೆರಡು ಗಂಟೆ ನಂತರ ಶೈಕ್ಷಣಿಕ ತರಗತಿ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಇಲಾಖೆ ಸೂಚಿಸಿದೆ. ಇನ್ನುಳಿದಂತೆ ಬಿಟ್ಟು ಬಿಡದೇ ಮಳೆ ಬಂದು ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಶಾಲೆಗೆ ರಜೆ ಘೋಷಿಸಬೇಕು ಎಂದು ಶಿಕ್ಷಣ ಇಲಾಖೆ ತನ್ನ ಸೂತ್ತೋಲೆಯಲ್ಲಿ ಸೂಚಿಸಿದೆ.

KSRTC extends School And College students bus pass validity till June 15th

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular