ನವದೆಹಲಿ : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರಕಾರ ಆನ್ ಲೈನ್ ಶಿಕ್ಷಣ ನೀಡಲು ಮುಂದಾಗಿದೆ. ಪ್ರಾಥಮಿಕ ಶಿಕ್ಷಣಕ್ಕಾಗಿ 3 ಚಾನೆಲ್ ಗಳು ಕಾರ್ಯನಿರ್ವಹಿಸಲಿದ್ದು, ಇಂಟರ್ ನೆಟ್ ಇಲ್ಲದವರಿಗಾಗಿ ಸ್ವಯಂಪ್ರಭ DTH ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಸ್ಕೈಪ್ ಮೂಲಕ ಮಕ್ಕಳಿಗೆ ಆನ್ ಲೈನ್ ತರಗತಿಗಳನ್ನು ನಡೆಸಲಾಗುತ್ತದೆ. ಅಲ್ಲದೇ ಪ್ರಾಥಮಿಕ ಶಿಕ್ಷಣಕ್ಕೆ 3 ಚಾನೆಲ್ ಗಳನ್ನು ಗುರುತಿಸಲಾಗಿದ್ದು, ಇನ್ನೂ 12 ಚಾನೆಲ್ ಗಳನ್ನು ಬಳಸಿಕೊಳ್ಳಲಾಗುತ್ತದೆ.

ಟಾಟಾ ಸ್ಕೈ ಸೇರಿದಂತೆ ಖಾಸಗಿ ಸಂಸ್ಥೆಗಳ ಸಹಯೋಗವನ್ನು ಪಡೆದುಕೊಳ್ಳಲಾಗುತ್ತದೆ. ಆನ್ ಲೈನ್ ಶಿಕ್ಷಣಕ್ಕಾಗಿ 200 ಪಠ್ಯಗಳನ್ನು ಅಳವಡಿಸಲಾಗುತ್ತದೆ.

ಯಾರ ಮನೆಯಲ್ಲಿ ಇಂಟರ್ ನೆಟ್ ಸೇವೆ ಇಲ್ಲವೋ ಅಂತಹ ಮಕ್ಕಳಿಗಾಗಿ ಸ್ವಯಂಪ್ರಭ DTH ಮೂಲಕ ಆನ್ ಲೈನ್ ಶಿಕ್ಷಣವನ್ನು ನೀಡಲಾಗುವುದು. ಕುರುಡ, ಕಿವುಡ ಮಕ್ಕಳಿಗೆ ಪ್ರತ್ಯೇಕ ಆನ್ ಲೈನ್ ಪಾಠ ಬೋಧನೆ ಮಾಡಲಾಗುತ್ತದೆ. ಒಂದು ತರಗತಿಗೆ ಒಂದು ಚಾನೆಲ್ ಆರಂಭಿಸಲಾಗುತ್ತದೆ. 100 ವಿಶ್ವವಿದ್ಯಾಲಯಗಳಲ್ಲಿ ಆನ್ ಲೈನ್ ತರಗತಿ ಆರಂಭಿಸಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಕರ ಮಾನಸಿಕ ಬೆಂಬಲಕ್ಕಾಗಿ ಆನ್ ಲೈನ್ ಶಿಕ್ಷಣ ನೀಡಲು ಮನೋದರ್ಪಣ್ ಚಾನೆಲ್ ಆರಂಭಿಸಲಾಗಿದೆ ಎಂದಿದ್ದಾರೆ.