ಮಡಿಕೇರಿ: ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ಕಿಡಿಗೇಡಿಗಳು ವಿಷ ಬೆರೆಯಿಸಿರುವ (Poisson School water) ಘಟನೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಆದರೆ ಶಾಲಾ ಶಿಕ್ಷಕರ ಕಾಳಜಿಯಿಂದಾಗಿ ನಡೆಯ ಬಹುದಾದ ಭಾರೀ ದುರಂತವೊಂದು ತಪ್ಪಿದೆ. ಘಟನೆಯ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಇದೀಗ ತನಿಖೆಯನ್ನು ಆರಂಭಿಸಿದ್ದಾರೆ.
ಶಾಲೆಯಲ್ಲಿ ನೀರನ್ನು ಬಳಕೆ ಮಾಡುವ ಮೊದಲು ಶೌಚಾಲಯವನ್ನು ಸ್ವಚ್ಚಗೊಳಿಸಲಾಗಿತ್ತು. ಆದರೆ ನೀರಿನಲ್ಲಿ ಕೆಟ್ಟವಾಸನೆಯ ಜೊತೆಗೆ ನೊರೆ ಬರುತ್ತಿತ್ತು. ಕೂಡಲೇ ಶಾಲಾ ಸಿಬ್ಬಂದಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಶಿಕ್ಷಕರು ಸಿಂಟೆಕ್ಸ್ ಪರಿಶೀಲಿಸಿದಾಗ ಅದರಲ್ಲಿ ಯಾವುದೋ ವಿಷ ಮಿಶ್ರಣವಾಗಿರುವುದು ಗೊತ್ತಾಗಿದೆ. ಆತಂಕಗೊಂಡ ಶಿಕ್ಷಕರು ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಟ್ಯಾಂಕ್ ಪರಿಶೀಲಿಸಿದ ಬಳಿಕ ನೀರಿನ ಮಾದರಿಯನ್ನು ಸಂಗ್ರಹಿಸಿ ಎಫ್‍ಎಸ್‍ಎಲ್ ಪಲಿಶೀಲನೆಗೆ ಕಳುಹಿಸಿದ್ದಾರೆ. ಸದ್ಯ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಶಾಲೆಯ ಶಿಕ್ಷಕರು ದೂರು ನೀಡಿದ್ದು, ನೀರಿಗೆ ವಿಷ ಬೆರೆಸಿರುವ ಕ್ರಿಮಿಗಳಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.
ಮಕ್ಕಳಿಗೆ ಸಮಸ್ಯೆ ಆಗಲಿ ಎಂದೇ ಕಿಡಿಗೇಡಿಗಳು ಈ ಕೃತ್ಯ ಮಾಡಿರಬಹುದು, ಒಂದು ವೇಳೆ ಅಡುಗೆ ಅಥವಾ ಕುಡಿಯುವುದಕ್ಕೆ ಈ ನೀರು ಬಳಸಿದ್ದರೆ ಶಾಲೆಯಲ್ಲಿ ಎಲ್‍ಕೆಜಿಯಿಂದ ಏಳನೇ ತರಗತಿವರೆಗೆ 185 ವಿದ್ಯಾರ್ಥಿಗಳಿದ್ದು ದೊಡ್ಡ ಅನಾವುತವೇ ಸಂಭವಿಸಿಬಿಡುತಿತ್ತು. ಆದರೆ ನಾವು ಆ ಸಿಂಟೆಕ್ಸ್‌ನ ನೀರನ್ನು ಶೌಚಾಲಯಕ್ಕೆ ಹೊರತು ಪಡಿಸಿ ಬೇರೆ ಉದ್ದೇಶಕ್ಕೆ ಬಳಸುತ್ತಿರಲಿಲ್ಲ. ಹೀಗಾಗಿ ಆಗಬಹುದಾಗಿದ್ದ ಅನಾವುತ ತಪ್ಪಿ, ಕಿಡಿಗೇಡಿಗಳ ಉದ್ದೇಶ ಸಫಲವಾಗಿಲ್ಲ ಎಂದು ಶಾಲೆಯ ಶಿಕ್ಷಕಿ ಸೌಭಾಗ್ಯ ಅವರು ಮಾಧ್ಯಮದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ನಾವು ಶಾಲೆ ಮುಗಿಸಿ ಅತ್ತ ಹೋಗುತ್ತಿದ್ದಂತೆ ಕೆಲವು ಕಿಡಿಗೇಡಿಗಳು ಶಾಲೆಯ ಹಿಂಭಾಗದಿಂದ ಶಾಲಾ ಆವರಣದೊಳಕ್ಕೆ ಬರುತ್ತಾರೆ. ಇಲ್ಲಿಯೇ ಮದ್ಯಪಾನ ಮಾಡುವುದು, ಗಾಂಜಾ ಸೇದುವುದು ಮಾಡುತ್ತಾರೆ. ಈ ಹಿಂದೆಯೂ ಶಾಲೆಯ ಬೀಗ ಹೊಡೆದು ಪುಸ್ತಕಗಳನೆಲ್ಲ ಸುಟ್ಟ ಘಟನೆಗಳು ನಡೆದಿವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈಗ ಮತ್ತೆ ಇಂತಹ ಅಮಾನವೀಯ ಕೃತ್ಯ ಮಾಡಿದ್ದಾರೆ. ಶಾಲೆಗೆ ಸರಿಯಾದ ಭದ್ರತೆ ಕೊಡಬೇಕು ಎಂದು ಶಾಲೆಯ ದೈಹಿಕ ಶಿಕ್ಷಕ ನಂದಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ : Hostel Guidelines :ಹಾಸ್ಟೆಲ್ಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ : ಶಾಲಾ-ಕಾಲೇಜು ಬಂದ್ ವಿಚಾರದಲ್ಲಿಯೂ ಮಹತ್ವದ ಹೇಳಿಕೆ
ಇದನ್ನೂ ಓದಿ : 24 Nursing Students Corona : ಭದ್ರಾವತಿಯಲ್ಲಿ 24 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ : ಕಾಲೇಜು, ಹಾಸ್ಟೆಲ್ ಸೀಲ್‌ಡೌನ್
ಇದನ್ನೂ ಓದಿ : School Close Karnataka : ಶಾಲೆಗಳ ಮೇಲೆ ಮತ್ತೆ ಕೊರೊನಾ ಕರಿನೆರಳು: ಮತ್ತೆ ಬಾಗಿಲುಮುಚ್ಚಲಿದೆ ಶಿಕ್ಷಣ ಸಂಸ್ಥೆಗಳು ?!
( Poisson School water tank Madikeri Shunti Koppa)